ETV Bharat / bharat

ರಾಮ ದೇಗುಲದ ಹೊರಗೆ ಅನ್ಯ ಕೋಮಿನವರಿಂದ ಪ್ರಾರ್ಥನೆ.. ಎರಡು ಗುಂಪುಗಳ ನಡುವೆ ಘರ್ಷಣೆ

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ರಾಮ ಮಂದಿರದ ಹೊರಗೆ ಅನ್ಯಕೋಮಿನ ಜನರು ಪ್ರಾರ್ಥನೆ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ.

Scuffle breaks out as Christian prayers held in front of Rama temple in Andhra
ರಾಮ ದೇಗುಲದ ಹೊರಗೆ ಕ್ರೈಸ್ತ ಸಮುದಾಯದಿಂದ ಪ್ರಾರ್ಥನೆ, ಎರಡು ಗುಂಪುಗಳ ನಡುವೆ ಘರ್ಷಣೆ
author img

By

Published : Apr 2, 2022, 11:25 AM IST

ಪೂರ್ವ ಗೋದಾವರಿ(ಆಂಧ್ರಪ್ರದೇಶ) : ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ರಾಮ ಮಂದಿರದ ಹೊರಗೆ ಅನ್ಯಕೋಮಿನವರು ಪ್ರಾರ್ಥನೆ ನಡೆಸಿದ್ದು, ಪ್ರಾರ್ಥನೆಯ ನಂತರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಮಾರ್ಚ್ 30ರಂದು ನಡೆದಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾದ್ರಿ ಮತ್ತು ಮಹಿಳೆಯೊಬ್ಬರು ಶ್ರೀರಾಮ ದೇವಾಲಯದ ಮುಂಭಾಗದಲ್ಲಿಯೇ ಪ್ರಾರ್ಥನೆಗಳನ್ನು ಆಯೋಜಿಸಿದ್ದರು. ದೇವಾಲಯದ ಮುಂಭಾಗ ಪ್ರಾರ್ಥನೆಗೆ ಆಕ್ಷೇಪಿಸಿದ ಇಬ್ಬರನ್ನು ಪೊಲೀಸರು ಹೊರ ಕಳುಹಿಸಿದ್ದರು. ದೇವಾಲಯವನ್ನು ಅನ್ಯಕೋಮಿನವರು ಆಕ್ರಮಿಸಿಕೊಂಡಿದ್ದಾರೆ ಮತ್ತು ಅಲ್ಲಿ ಪ್ರಾರ್ಥನೆಗಳು ನಡೆಯುತ್ತಿವೆ ಎಂದು ಬಿಜೆಪಿ ಆರೋಪಿದೆ ಎಂದು ಪೂರ್ವ ಗೋದಾವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ರವೀಂದ್ರನಾಥ್ ಬಾಬು ಮಾಹಿತಿ ನೀಡಿದ್ದಾರೆ.

ಗಂಗಾವರಂ ಗ್ರಾಮದ ಶೆಡ್​ನಲ್ಲಿ ಅನ್ಯಕೋಮಿನ ಮಹಿಳೆಯೊಬ್ಬರು ಸಭೆ ಆಯೋಜಿಸಿದ್ದರು. ಸಭೆಗೆ ಬಂದಿದ್ದ ಜನರಿಗೆ ಊಟವನ್ನೂ ಬಡಿಸಿದ್ದಳು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಕೇಸ್.. ಪ್ರಮುಖ ಸಾಕ್ಷಿ ಪ್ರಭಾಕರ್​​ ಸೈಲ್ ಹೃದಯಾಘಾತದಿಂದ ಮೃತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.