ತೆಲಂಗಾಣ: ‘ಬೊನಾಲು’ ವಾರ್ಷಿಕ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಬೊನಾಲು ತೆಲಂಗಾಣದ ಅತ್ಯಂತ ಮಹತ್ವದ ಧಾರ್ಮಿಕ ಉತ್ಸವಗಳಲ್ಲಿ ಒಂದು. ನಿಜಾಮ್ ಆಳ್ವಿಕೆಯ ಕಾಲದಲ್ಲಿ ಮಲೇರಿಯಾ ರೋಗ ತಾಂಡವ ಆಡುತ್ತಿದ್ದಾಗ, ಬೊನಾಲು ಉತ್ಸವ ಆಚರಿಸಿ ಮಲೇರಿಯಾ ರೋಗ ಕೊನೆಗಾಣಿಸಲಾಗಿತ್ತಂತೆ. ಸಿಕಂದರಾಬಾದ್‌ನ ಉಜ್ಜೈನಿ ಮಹಾಕಾಳ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ, ಅದ್ಧೂರಿಯಾಗಿ 'ಬೊನಾಲು' ಆಚರಣೆ ಮಾಡಿದರು.
ವಿಶೇಷ ಎಂದರೆ, ಕೊರೊನಾ ಇದ್ದರೂ ದೇವಸ್ಥಾನಕ್ಕೆ ಜನಸಾಗರವೇ ಹರಿದು ಬಂದಿತ್ತು. ಜನಸಾಗರವೇ ದೇವಸ್ಥಾನದ ಅಂಗಳದಲ್ಲಿ ಕಂಡು ಬಂತು