ETV Bharat / bharat

ವಿಮಾನ ನಿಲ್ದಾಣದ ಬೋರ್ಡಿಂಗ್​ ಪಾಸ್​ ಶುಲ್ಕದ ಬಗ್ಗೆ ಪರಿಶೀಲನೆ : ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ - ಬೋರ್ಡಿಂಗ್​ ಪಾಸ್​ಗೆ ನಿಗದಿತ ಶುಲ್ಕ

ಅನೇಕ ವಿಮಾನಯಾನ ಸಂಸ್ಥೆಗಳು ಚೆಕ್-ಇನ್ ಕೌಂಟರ್‌ಗಳಲ್ಲಿ ಬೋರ್ಡಿಂಗ್ ಪಾಸ್‌ಗಳನ್ನು ನೀಡಲು ಪ್ರಯಾಣಿಕರಿಗೆ ನಿರ್ದಿಷ್ಟ ಶುಲ್ಕವನ್ನು ವಿಧಿಸುತ್ತವೆ. ಕೊರೊನಾ ಕಾರಣಕ್ಕಾಗಿ ಪ್ರಯಾಣಿಕರು ವೆಬ್ ಚೆಕ್-ಇನ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದಾಗ ಇದನ್ನು ವಿಮಾನಯಾನ ಸಂಸ್ಥೆಗಳು ಜಾರಿಗೆ ತಂದಿವೆ..

scindia-to-examine
ಜ್ಯೋತಿರಾದಿತ್ಯ ಸಿಂಧಿಯಾ
author img

By

Published : May 14, 2022, 7:17 PM IST

ನವದೆಹಲಿ : ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಬೋರ್ಡಿಂಗ್​ ಪಾಸ್​ಗಳಿಗೆ ವಿಧಿಸಲಾಗುವ ಶುಲ್ಕವನ್ನು ಶೀಘ್ರವೇ ಪರಿಶೀಲಿಸಲಾಗುವುದು ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಬೋರ್ಡಿಂಗ್​ ಪಾಸ್​ಗಳಿಗೆ ಸ್ಪೈಸ್​ಜೆಟ್​ ವಿಮಾನಯಾನ ಸಂಸ್ಥೆ ಶುಲ್ಕ ವಿಧಿಸಿದ್ದರ ಬಗ್ಗೆ ಪ್ರಯಾಣಿಕನೊಬ್ಬ ಸಚಿವರ ಗಮನಕ್ಕೆ ಟ್ವೀಟ್​​ ಮೂಲಕ ತಂದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ನಿಮ್ಮ ಆಕ್ಷೇಪವನ್ನು ಒಪ್ಪಿಕೊಳ್ಳುವೆ. ಈ ಬಗ್ಗೆ ಆದಷ್ಟು ಬೇಗ ಪರಿಶೀಲಿಸಿ ಇತ್ಯರ್ಥಕ್ಕೆ ಬರಲಾಗುವುದು ಎಂದು ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ. ಕೆಲ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಬೋರ್ಡಿಂಗ್​ ಪಾಸ್​ ನೀಡಲು ಶುಲ್ಕ ವಿಧಿಸುತ್ತಿದ್ದು, ಇದು ಹೆಚ್ಚುವರಿಯಾಗಿದೆ.

ರೆಸ್ಟೋರೆಂಟ್​ಗೆ ಹೋಗಿ ಉಳಿದುಕೊಂಡಾಗ ಅಲ್ಲಿ ಸಿಗುವ ಊಟಕ್ಕೂ ಶುಲ್ಕ ವಿಧಿಸಿ ಬೇಕಿದ್ದರೆ ತಿನ್ನಿ, ಇಲ್ಲವಾದರೆ ಇಲ್ಲ ಎಂಬ ಧೋರಣೆಯಂತಿದೆ ಎಂದು ವಿಮಾನ ಸಂಸ್ಥೆಗಳ ಈ ನಿಯಮದ ಬಗ್ಗೆ ಪ್ರಯಾಣಿಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿಮಾನಯಾನ ಸಂಸ್ಥೆಗಳು ಹಣ ಪೀಕುತ್ತಿದ್ದರೂ ಗ್ರಾಹಕ ವೇದಿಕೆ ಏನು ಮಾಡುತ್ತಿದೆ ಎಂದು ಪತ್ರಕರ್ತ ಮಾಧವನ್​ ನಾರಾಯಣ್​ ಎಂಬುವವರು ಪ್ರಶ್ನಿಸಿದ್ದಾರೆ. ಅಲ್ಲದೇ ವಿಮಾನಯಾನ ಸಂಸ್ಥೆಗಳ ಈ ಅಭ್ಯಾಸ 'ಹಾಸ್ಯಾಸ್ಪದವಾಗಿದೆ' ಎಂದು ಜರಿದಿದ್ದಾರೆ.

ಓದಿ: ಪ್ರಿಯಾಂಕಾ ಗಾಂಧಿ ಪಕ್ಷದ ಅಧ್ಯಕ್ಷರಾಗಲಿ.. ಚಿಂತನಾ ಶಿಬಿರದಲ್ಲಿ ಪ್ರಸ್ತಾಪ - ಇದಕ್ಕೆ ಸಿಗುತ್ತಾ ಮನ್ನಣೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.