ETV Bharat / bharat

ಹಲವು ರಾಕೆಟ್​ಗಳ ಉಡಾವಣೆಗಾಗಿ ಕೌಂಟ್‌ಡೌನ್​ಗೆ ಧ್ವನಿಯಾಗಿದ್ದ ಇಸ್ರೋದ ವಿಜ್ಞಾನಿ ವಲರ್ಮತಿ ನಿಧನ - ವಿಜ್ಞಾನಿ ವಲರ್ಮತಿ

ಇಸ್ರೋದ ಚಂದ್ರಯಾನ-3 ಸೇರಿದಂತೆ ಹಲವು ಉಡಾವಣೆಗಳಿಗೆ ಕೌಂಟ್‌ಡೌನ್​ಗೆ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ (50) ಭಾನುವಾರ ರಾತ್ರಿ ಚೆನ್ನೈನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

Scientist Valarmati
ಇಸ್ರೋದ ಹಲವು ರಾಕೆಟ್​ಗಳ ಉಡಾವಣೆಗಾಗಿ ಕೌಂಟ್‌ಡೌನ್​ಗೆ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನ
author img

By ETV Bharat Karnataka Team

Published : Sep 4, 2023, 11:38 AM IST

Updated : Sep 4, 2023, 12:16 PM IST

ಚೆನ್ನೈ (ತಮಿಳುನಾಡು): ಇಸ್ರೋದ ರಾಕೆಟ್​ಗಳ ಉಡಾವಣೆ ಸಂದರ್ಭದಲ್ಲಿ ಕೌಂಟ್‌ಡೌನ್‌ಗೆ ಹೆಚ್ಚಿನ ಮಹತ್ವವಿದೆ. ಕೌಂಟ್​ಡೌನ್ ವೇಳೆ ಧ್ವನಿ ನೀಡಿದ ಇಸ್ರೋ ವಿಜ್ಞಾನಿ ವಲರ್ಮತಿ (50) ಭಾನುವಾರ ರಾತ್ರಿ ಚೆನ್ನೈ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ವಲರ್ಮತಿ ಅವರು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ರೇಂಜ್ ಆಪರೇಷನ್ಸ್ ಕಾರ್ಯಕ್ರಮದ ಕಚೇರಿಯ ಭಾಗವಾಗಿದ್ದರು.

ವಿಜ್ಞಾನಿ ವಲರ್ಮತಿ ಅವರು, ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಗಾಗಿ ಕೌಂಟ್‌ಡೌನ್‌ ಘೋಷಿಸುತ್ತಿದ್ದರು. ಅವರು ಚಂದ್ರಯಾನ-3 ಸೇರಿದಂತೆ ಹಲವಾರು ಇಸ್ರೋ ಉಡಾವಣೆಗಳ ಉಸ್ತುವಾರಿ ವಹಿಸಿದ್ದರು.

ಚಂದ್ರಯಾನ 3ರ ರಾಕೆಟ್‌ ಉಡಾವಣೆಯ ಅಂತಿಮ ಹಂತದಲ್ಲಿ ಕೌಂಟ್​ಡೌನ್​ಗೆ ಅವರು ಕೊನೆಯ ಬಾರಿ ಧ್ವನಿ ಕೊಟ್ಟಿದ್ದರು. ಇಸ್ರೋದ ಮಾಜಿ ನಿರ್ದೇಶಕ ಪಿ ವಿ ವೆಂಕಟಕೃಷ್ಣನ್‌ ಅವರು ಸಾಮಾಜಿಕ ಜಾಲತಾಣವಾದ 'ಎಕ್ಸ್​' ಖಾತೆಯಲ್ಲಿ, ‘ಶ್ರೀಹರಿಕೋಟಾದಿಂದ ಇಸ್ರೋ ಭವಿಷ್ಯದ ಮಿಷನ್‌ಗಳ ಕೌಂಟ್​ಡೌನ್​ಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ 3 ಮಿಷನ್​ಗೆ ಅಂತಿಮ ಕೌಂಟ್​ಡೌನ್​ಗೆ ಧ್ವನಿಯಾಗಿದ್ದು, ಅವರ ಕೊನೆಯ ಘೋಷಣೆಯಾಗಿತ್ತು. ಅವರ ಅಕಾಲಿಕ ನಿಧನದಿಂದ ತುಂಬಾ ದುಃಖವಾಗುತ್ತಿದೆ. ವಲರ್ಮತಿ ಮೇಡಂ ಅವರಿಗೆ ಪ್ರಣಾಮಗಳು’ ಎಂದು ಬರೆದಿದ್ದಾರೆ.

  • The voice of Valarmathi Madam will not be there for the countdowns of future missions of ISRO from Sriharikotta. Chandrayan 3 was her final countdown announcement. An unexpected demise . Feel so sad.Pranams! pic.twitter.com/T9cMQkLU6J

    — Dr. P V Venkitakrishnan (@DrPVVenkitakri1) September 3, 2023 " class="align-text-top noRightClick twitterSection" data=" ">

ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ತಮಿಳುನಾಡು ಸರ್ಕಾರ ನೀಡುವ ಪ್ರತಿಷ್ಠಿತ ಅಬ್ದುಲ್ ಕಲಾಂ ಪ್ರಶಸ್ತಿಗೆ ಇಸ್ರೋ ವಿಜ್ಞಾನಿ ವಲರ್ಮತಿ ಅವರು ಭಾಜನರಾಗಿದ್ದರು. 1959 ರ ಜುಲೈ 31 ರಂದು ಜನಿಸಿದ್ದ ವಲರ್ಮತಿ ಅವರು, 1984 ರಲ್ಲಿ ಇಸ್ರೋಗೆ ಸೇರಿಕೊಂಡಿದ್ದರು. ಇಸ್ರೋದ ಅನೇಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು. ವಲರ್ಮತಿ ಅವರು RISAT-1ರ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದರು. ಇದು ಮೊದಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಾಡಾರ್ ಇಮೇಜಿಂಗ್ ಉಪಗ್ರಹ (RIS) ಹಾಗೂ ದೇಶದ ಎರಡನೇ ಉಪಗ್ರಹವಾಗಿದೆ. 2012ರ ಏಪ್ರಿಲ್​ನಲ್ಲಿ RISAT-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.

ಇಸ್ರೋ ಸಂಸ್ಥೆಯಿಂದ ಜುಲೈ 14ರಂದು ಚಂದ್ರಯಾನ-3ರ ಗಗನ ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಬಾಹುಬಲಿ ಖ್ಯಾತಿಯ ಜಿಎಸ್​ಎಲ್​ವಿ ಮಾರ್ಕ್- 3 ದೈತ್ಯ ವಾಹನದಲ್ಲಿನ ಉಪಗ್ರಹವನ್ನು ಆಗಸ್ಟ್ 5 ರಂದು ಚಂದ್ರನ ಕಕ್ಷೆಗೆ ಸೇರ್ಪಡೆ ಮಾಡಲಾಗಿತ್ತು. ಕಕ್ಷೆ ಇಳಿಸುವ ಕಾರ್ಯಾಚರಣೆ ಪೂರ್ಣಗೊಂಡ ನಂತರ, ಆಗಸ್ಟ್​ 23ರ ಸಂಜೆ ಚಂದ್ರನ ಮೇಲೆ ಲ್ಯಾಂಡರ್​ ಇಳಿದಿತ್ತು. ಚಂದ್ರಯಾನ ಯಶಸ್ವಿಯಾದ ಹಿನ್ನೆಲೆ ಇಸ್ರೋ ಐತಿಹಾಸಿಕ ಸಾಧನೆ ಮಾಡಿತ್ತು.

ಇದನ್ನೂ ಓದಿ: Building collapse: 3 ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಸಾವು.. 12 ಮಂದಿ ರಕ್ಷಣೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ

Last Updated : Sep 4, 2023, 12:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.