ಅಮರಾವತಿ/ ಗುಹಾವಟಿ : ಕೊರೊನಾ ಹಿನ್ನೆಲೆ ಕಳೆದ ಏಳು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಆಂಧ್ರಪ್ರದೇಶ ಹಾಗೂ ಅಸ್ಸೋಂ ಹಾಗೂ ಹಿಮಾಚಲ ಪ್ರದೇಶ ಜ್ಯಗಳ ಶಾಲೆಗಳು ಇಂದಿನಿಂದ ಪುನಾರಂಭವಾಗಿವೆ.
9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಲು ತಿಳಿಸಲಾಗಿದೆ. ಪ್ರತಿ ಅವಧಿಯ ಬಳಿಕ 15 ನಿಮಿಷ ವಿರಾಮವಿರುತ್ತದೆ. ವಿದ್ಯಾರ್ಥಿಗಳು ತಮ್ಮ ಕೈಗಳನ್ನು ಸ್ವಚ್ಛಗೊಳಿಸಬೇಕು ಎಂದು ಆಂಧ್ರದ ಶಾಲೆಯೊಂದರ ಮುಖ್ಯೋಪಾಧ್ಯಯರು ತಿಳಿಸಿದ್ದಾರೆ.
ಈ ಹಿಂದೆ ನಾವು ಹಿರಿಯ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳನ್ನು ಪುನಾರಂಭಿಸಿದ್ದೆವು. ಈಗ 6,7 ಮತ್ತು 8ನೇ ತರಗತಿಳನ್ನು ಪುನಾರಂಭಿಸಲು ನಮಗೆ ಸಾಧ್ಯವಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ ಎಂದು ಅಸ್ಸೋಂನ ಶಾಲೆಯ ಪ್ರಾಂಶುಪಾಲರು ಹೇಳಿದ್ದಾರೆ.