ಕಾಸರಗೋಡು (ಕೇರಳ): ಸರ್ಕಾರಿ ಶಾಲೆಯಲ್ಲಿ ಹನ್ನೊಂದನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಎಂಟು ಜನ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿರುವ ಘಟನೆ ಕೇರಳದ ಕಾಸರಗೋಡಿನಲ್ಲಿ ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಲಾ ಆಡಳಿತ ಮಂಡಳಿ ಗುರುವಾರ ಎಂಟು ಜನ ಆರೋಪಿ ವಿದ್ಯಾರ್ಥಿಗಳನ್ನು ಎರಡು ವಾರಗಳ ಕಾಲ ಅಮಾನತುಗೊಳಿಸಿದೆ.
ಇಲ್ಲಿನ ಅಂಗಡಿಮುಗೇರು ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿನಿಗೆ ರ‍್ಯಾಗಿಂಗ್ ಮಾಡಲಾಗಿದೆ. ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಕಿಡಿಗೇಡಿಗಳ ವಿದ್ಯಾರ್ಥಿಗಳ ಗುಂಪು ನನ್ನನ್ನು ತಡೆದು ಬೈಕ್ ಓಡಿಸುತ್ತಿರುವಂತೆ ಅನುಕರಿಸುವಂತೆ ಕೇಳಿದ್ದರು. ಆದರೆ, ವಿರೋಧಿಸಿದ ಕಾರಣ ನನಗೆ ಥಳಿಸಲಾಯಿತು ಎಂದು ಸಂತ್ರಸ್ತ ವಿದ್ಯಾರ್ಥಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆಯ ದೂರಿನ ಮೇರೆಗೆ ಎಂಟು ಕಿಡಿಗೇಡಿಗಳ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ, ಈ ಘಟನೆಯ ಬಗ್ಗೆ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಕಣ್ಣೂರು ಪ್ರಾದೇಶಿಕ ಶಿಕ್ಷಣ ಉಪ ನಿರ್ದೇಶಕರಿಂದ ವರದಿ ಕೇಳಿದ್ದಾರೆ. ಜೊತೆಗೆ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರ್‌ಡಿಡಿಗೆ ಸೂಚಿಸಲಾಗಿದೆ.
ಇನ್ನು, ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡುತ್ತಿರುವ ಮೊಬೈಲ್ನಲ್ಲಿ ಸೆರೆಯಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೋ ಆಧರಿಸಿ ಸಹ ತನಿಖೆ ನಡೆಸಲಾಗುತ್ತಿದೆ ಎಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆಯಲ್ಲೇ ಗುಂಡು ಹಾರಿಸಿ ಯುವತಿ ಕೊಂದ ಯುವಕ; ಪರಾರಿಯಾಗುವಾಗ ಅಪಘಾತದಲ್ಲಿ ಸಾವು