ETV Bharat / bharat

ಸ್ವಪ್ನಾ ಸುರೇಶ್​ಗೆ ಉದ್ಯೋಗ ನೀಡಿದ್ದ ಎಚ್‌ಆರ್‌ಡಿಎಸ್ ವಿರುದ್ಧ ಪ್ರಕರಣ ದಾಖಲಿಸಿದ ಎಸ್‌ಸಿ/ಎಸ್‌ಟಿ ಆಯೋಗ: ಕಾರಣ? - ಚಿನ್ನ ಕಳ್ಳಸಾಗಣೆ ಆರೋಪಿ ಸ್ವಪ್ನಾ ಸುರೇಶ್‌ಗೆ ಉದ್ಯೋಗ ನೀಡಿದ್ದ ಎನ್‌ಜಿಒ ಎಚ್‌ಆರ್‌ಡಿಎಸ್

ಬಿಜೆಪಿ ಪರವಾಗಿರುವ ಎನ್‌ಜಿಒ ಎನ್ನಲಾದ ಎಚ್‌ಆರ್‌ಡಿಎಸ್, ತಿರುವನಂತಪುರಂನಲ್ಲಿರುವ ಯುಎಇ ರಾಯಭಾರಿ ಕಚೇರಿ ಮೂಲಕ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ವಪ್ನಾ ಸುರೇಶ್ ಅವರನ್ನು ನೇಮಕ ಮಾಡಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಈಗ ಈ ಸಂಸ್ಥೆ ಮೇಲೆ ದೂರು ದಾಖಲಾಗಿದೆ.

ಎಚ್‌ಆರ್‌ಡಿಎಸ್ ವಿರುದ್ಧ ಪ್ರಕರಣ ದಾಖಲಿಸಿದsಎಸ್‌ಸಿ/ಎಸ್‌ಟಿ ಆಯೋಗ

author img

By

Published : Feb 21, 2022, 3:45 PM IST

ಪಾಲಕ್ಕಾಡ್(ಕೇರಳ): ಇತ್ತೀಚೆಗಷ್ಟೇ ಚಿನ್ನ ಕಳ್ಳಸಾಗಣೆ ಆರೋಪಿ ಸ್ವಪ್ನಾ ಸುರೇಶ್‌ಗೆ ಉದ್ಯೋಗ ನೀಡಿದ್ದ ಎನ್‌ಜಿಒ ಎಚ್‌ಆರ್‌ಡಿಎಸ್ ವಿರುದ್ಧ ಎಸ್‌ಸಿ/ಎಸ್‌ಟಿ ಆಯೋಗ ಪ್ರಕರಣ ದಾಖಲಿಸಿದೆ.

ವಂಚನೆ ದೂರುಗಳ ಹಿನ್ನೆಲೆಯಲ್ಲಿ ಆಯೋಗವು ಎನ್‌ಜಿಒ ವಿರುದ್ಧ ಪ್ರಕರಣ ದಾಖಲಿಸಿದೆ. ಎನ್‌ಜಿಒ ಕಳಪೆ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಟ್ಟು ಹಣವನ್ನು ಕಬಳಿಸಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ವಸತಿರಹಿತ ಬಡವರಿಂದ ಭೂಮಿಯನ್ನು ಕದಿಯಲು ಎನ್‌ಜಿಒ ಪ್ರಯತ್ನಿಸುತ್ತಿದೆ ಈ ವೇಳೆ ಆರೋಪಿಸಲಾಗಿದೆ.

ಸ್ವಪ್ನಾ ಸುರೇಶ್
ಸ್ವಪ್ನಾ ಸುರೇಶ್

ಬಿಜೆಪಿ ಪರವಾಗಿರುವ ಎನ್‌ಜಿಒ ಎನ್ನಲಾದ ಎಚ್‌ಆರ್‌ಡಿಎಸ್, ತಿರುವನಂತಪುರಂನಲ್ಲಿರುವ ಯುಎಇ ರಾಯಭಾರಿ ಕಚೇರಿ ಮೂಲಕ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ವಪ್ನಾ ಸುರೇಶ್ ಅವರನ್ನು ನೇಮಕ ಮಾಡಿದ್ದು, ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ: ಕಾಂಗ್ರೆಸ್ ಇಲ್ಲದೆ ಯಾವುದೇ ರಂಗದ ರಚನೆ ಇಲ್ಲ : ಸಂಜಯ್ ರಾವತ್​

ಸ್ವಪ್ನಾ ಈಗ ಹಚ್​ಆರ್​ಡಿಎಸ್​ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ನಿರ್ದೇಶಕಿಯೂ ಹೌದು. ಅವರ ನೇಮಕಾತಿಯು ಬಿಜೆಪಿಯೊಂದಿಗೆ ಅವರ ನಿಕಟ ಸಂಬಂಧವನ್ನು ತೋರಿಸುತ್ತದೆ ಎಂದು ರಾಜಕೀಯ ವಿರೋಧಿಗಳು ಹೇಳಿದ್ದರಿಂದ ಅವರ ನೇಮಕಾತಿ ಬಿಸಿ- ಬಿಸಿ ರಾಜಕೀಯ ಚರ್ಚೆಯ ವಿಷಯವಾಗಿದೆ. ಇನ್ನು ಬಿಜೆಪಿ ಮುಖಂಡ ಎಸ್ ಕೃಷ್ಣಕುಮಾರ್ ಈ ಎನ್​​​ಜಿಒದ ಅಧ್ಯಕ್ಷರಾಗಿದ್ದಾರೆ. ಆದರೆ, ಕೃಷ್ಣಕುಮಾರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಎಚ್‌ಆರ್‌ಡಿಎಸ್ ಸದಸ್ಯರು ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.