ETV Bharat / bharat

ಅಪ್ರಾಪ್ತ ವಯಸ್ಕರ ಸಮ್ಮತಿ ಸೆಕ್ಸ್​​; ನಿಲುವು ತಿಳಿಸಲು ತಮಿಳುನಾಡಿಗೆ ಸುಪ್ರೀಂ ನಿರ್ದೇಶನ - Plea over consensual sex under POCSO act

ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠವು ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ಆಲಿಸಿತು. ಒಮ್ಮತದ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಹದಿಹರೆಯದವರಿಗೆ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ನೀಡಬೇಕೆಂಬ ಮನವಿಗೆ ಸ್ಪಂದಿಸುವಂತೆ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

SC seeks response from TN on plea against punishing adolescents for consensual sex under POCSO act
ಸುಪ್ರೀಂ ಕೋರ್ಟ್
author img

By

Published : Mar 27, 2021, 1:58 PM IST

ನವದೆಹಲಿ: ಒಮ್ಮತದ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಹದಿಹರೆಯದವರಿಗೆ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠವು ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ಆಲಿಸಿತು.

ಇಬ್ಬರು (ಹುಡುಗ-ಹುಡುಗಿ) ಲಿವ್-ಇನ್ ಸಂಬಂಧವನ್ನು ಹೊಂದಿದ್ದರು ಮತ್ತು ಹುಡುಗಿಯನ್ನು ಹುಡುಗ ಮದುವೆಯಾಗುವ ಭರವಸೆಯ ಮೇರೆಗೆ ಅವರು ಲೈಂಗಿಕ ಸಂಬಂಧ ಬೆಳೆಸಿಕೊಂಡಿದ್ದರು. ನಂತರ, ಹುಡುಗ ಮದುವೆಯಾಗಲು ನಿರಾಕರಿಸಿದಾಗ, ಹುಡುಗಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅವನ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಆದರೆ ಅವರಿಬ್ಬರ ಲೈಂಗಿಕತೆಯು ಸಹಮತದಿಂದ ಕೂಡಿತ್ತು ಮತ್ತು ಹುಡುಗನೊಂದಿಗೆ ಲಿವ್-ಇನ್ ಸಂಬಂಧವನ್ನು ಮುಂದುವರಿಸಲು ಅವಳು ಬಯಸಿದ್ದಳು. ಹೀಗಾಗಿ ಆಕೆ ಅತ್ಯಾಚಾರಕ್ಕೊಳಗಾಗಿರಲಿಲ್ಲ. ಆದರೆ ಹುಡುಗನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆತನಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 5000 ರೂ.ಗಳ ದಂಡ ವಿಧಿಸಲಾಯಿತು.

ನಂತರ ಈ ವಿಷಯವು ಹೈಕೋರ್ಟ್‌ ಮೆಟ್ಟಿಲೇರಿತು. ಅಲ್ಲಿ ಇಬ್ಬರೂ ಒಂದೇ ಕಡೆ ಇದ್ದರೂ, ಹುಡುಗಿಗೆ ಈ ಸಂಬಂಧವು ಸಮ್ಮತವಾಗಿದೆ ಎಂದು ಒಪ್ಪಿಕೊಂಡರು. ಆದರೆ ಹೈಕೋರ್ಟ್ ಮನವಿಯನ್ನು ವಜಾಗೊಳಿಸಿತು.

ಈಗ ಅರ್ಜಿಯು ಸುಪ್ರೀಂಕೋರ್ಟ್​ಗೆ ಹೋಗಿದ್ದು, ಬಾಲಕನ ವಿರುದ್ಧ ಯಾವುದೇ ತೀವ್ರವಾದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ರಾಜ್ಯಕ್ಕೆ ನಿರ್ದೇಶನ ನೀಡಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.