ETV Bharat / bharat

ಭಾರತದ ರೀತಿ ಜಗತ್ತಿನ ಬೇರಾವುದೇ ದೇಶ ಕೋವಿಡ್​ ನಿರ್ವಹಿಸಿಲ್ಲ: ಸುಪ್ರೀಂಕೋರ್ಟ್ ಮೆಚ್ಚುಗೆ

'ಕೋಟ್ಯಂತರ ಜನಸಂಖ್ಯೆ ಇರುವ ಭಾರತದಲ್ಲಿ ಕೋವಿಡ್​ ಔಷಧಿ, ಲಸಿಕೆ, ಆಕ್ಸಿಜನ್ ಸೇರಿದಂತೆ ಅನೇಕ ರೀತಿಯ ಪ್ರತಿಕೂಲ ಸನ್ನಿವೇಶ ಎದುರಿಸಿದ್ದೇವೆ. ಆದರೆ ಭಾರತ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ರೀತಿಯ ಕೆಲಸ ಬೇರಾವುದೇ ದೇಶದಿಂದಲೂ ಆಗಿಲ್ಲ' - ಸುಪ್ರೀಂಕೋರ್ಟ್‌

Supreme Court
Supreme Court
author img

By

Published : Sep 23, 2021, 8:50 PM IST

ನವದೆಹಲಿ: ಮಹಾಮಾರಿ ಕೋವಿಡ್​ ಅನ್ನು ಭಾರತ ನಿರ್ವಹಿಸಿದ ರೀತಿ ಜಗತ್ತಿನ ಯಾವುದೇ ದೇಶವೂ ನಿರ್ವಹಿಸಿಲ್ಲ ಎಂದು ಸುಪ್ರೀಂಕೋರ್ಟ್​ ಮೆಚ್ಚುಗೆ ವ್ಯಕ್ತಪಡಿಸಿದೆ. ಮಾರಕ ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ನೀಡುವ ಯೋಜನೆಯೂ ಕೋರ್ಟ್‌ ಪ್ರಶಂಸೆಗೆ ಕಾರಣವಾಗಿದೆ.

'ಕೋವಿಡ್​ನಿಂದ ಸಾವನ್ನಪ್ಪಿ, ತೊಂದರೆಗೊಳಗಾಗಿರುವ ಅನೇಕ ಕುಟುಂಬಗಳಿಗೆ ಇದೀಗ ಸ್ವಲ್ಪಮಟ್ಟದ ಪರಿಹಾರ ಸಿಗುತ್ತಿದೆ. ಈ ಬಗ್ಗೆ ನಮಗೆ ಖುಷಿ ಇದೆ' ಎಂದು ಸುಪ್ರೀಂಕೋರ್ಟ್​​​​​ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಎ.ಎಸ್.ಬೋಪಣ್ಣ ಸರ್ಕಾರದ ಕ್ರಮಗಳನ್ನು ಶ್ಲಾಘಿಸಿದರು.

ಇದನ್ನೂ ಓದಿ: ಕೋವಿಡ್​ನಿಂದ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ 50 ಸಾವಿರ ರೂ.ಪರಿಹಾರ : ಸುಪ್ರೀಂಕೋರ್ಟ್​ಗೆ ಕೇಂದ್ರದ ಮಾಹಿತಿ

'ಕೋಟ್ಯಂತರ ಜನಸಂಖ್ಯೆ ಇರುವ ಭಾರತದಲ್ಲಿ ಕೋವಿಡ್​ ಔಷಧಿ, ಲಸಿಕೆ, ಆಕ್ಸಿಜನ್ ಸೇರಿದಂತೆ ಅನೇಕ ರೀತಿಯ ಪ್ರತಿಕೂಲ ಸನ್ನಿವೇಶ ಎದುರಿಸಿದ್ದೇವೆ. ಆದರೆ ಭಾರತ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿರುವ ಸರ್ವೋಚ್ಛ ನ್ಯಾಯಾಲಯ, ಈ ರೀತಿಯ ಕೆಲಸ ಬೇರಾವುದೇ ದೇಶದಿಂದಲೂ ಆಗಿಲ್ಲ' ಎಂದಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಕೋವಿಡ್​ನಿಂದ ಮೃತಪಟ್ಟಿರುವ ಪ್ರತಿ ಕುಟುಂಬಕ್ಕೂ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದೆ. ಇದರ ಮೇಲಿನ ತೀರ್ಪು ಅಕ್ಟೋಬರ್​​ 4ಕ್ಕೆ ಕಾಯ್ದಿರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.