ETV Bharat / bharat

ಪೆಗಾಸಸ್ ಗೂಢಚರ್ಯೆ ಪ್ರಕರಣ : ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್​ - ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ರಾಷ್ಟ್ರದ ಭದ್ರತೆ ನಮಗೆ ಸರ್ಕಾರದಷ್ಟೇ ಮುಖ್ಯವಾಗಿದೆ. ನಮ್ಮ ಉದ್ದೇಶ ಭದ್ರತಾ ವಿವರಗಳನ್ನು ಕೇಳುವುದಲ್ಲ. ಆದರೆ, ಪೆಗಾಸಸ್ ಗೂಢಚರ್ಯೆಯನ್ನು ತಂತ್ರಜ್ಞಾನವಾಗಿ ಬಳಸಲಾಗಿದೆಯೇ ಅಥವಾ ಇಲ್ಲವೇ ಎಂದು ಉತ್ತರಿಸಬೇಕು ಎಂದು ಹೇಳಿದರು. ಇದಕ್ಕೆ ನ್ಯಾಯಾಲಯವು, ನಾಗರಿಕರ ಫೋನ್‌ಗಳನ್ನು ಟ್ರ್ಯಾಪ್​ ಮಾಡಿದ ಆರೋಪದ ಬಗ್ಗೆ ಅಧಿಕೃತ ಮಾಹಿತಿಯನ್ನು ಮಾತ್ರ ಪಡೆಯಬೇಕೆಂದು ಸೂಚಿಸಿದೆ..

Pegasus snooping row
ಸುಪ್ರೀಂಕೋರ್ಟ್
author img

By

Published : Aug 17, 2021, 6:56 PM IST

ನವದೆಹಲಿ : ಪೆಗಾಸಸ್ ಗೂಢಚರ್ಯೆ ಪ್ರಕರಣ ಸಂಬಂಧ ತನಿಖೆಗೆ ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಪ್ರತಿಕ್ರಿಯಿಸಲು ಸೂಚಿಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್​ ನೀಡಿದೆ.

ಇಸ್ರೇಲ್​ನ ಪೆಗಾಸಸ್ ಸ್ಪೈವೇರ್ ಭಾರತದ ಕೆಲವು ಪ್ರಮುಖ ಪ್ರತಿಪಕ್ಷದ ನಾಯಕರು, ಪತ್ರಕರ್ತರು ಮತ್ತು ಉದ್ಯಮಿಗಳ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಆರೋಪಗಳ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಹಿರಿಯ ಪತ್ರಕರ್ತರಾದ ಎನ್ ರಾಮ್ ಮತ್ತು ಶಶಿಕುಮಾರ್, ರಾಜ್ಯಸಭಾ ಸಂಸದ ಜಾನ್ ಬ್ರಿಟಾಸ್, ವಕೀಲ ಎಂ ಎಲ್ ಶರ್ಮಾ, ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ, ಆರ್​​ಎಸ್​ಎಸ್ ವಿಚಾರವಾದಿ ಕೆ ಎನ್ ಗೋವಿಂದಾಚಾರ್ಯರಿಂದ ಸುಪ್ರೀಂಕೋರ್ಟ್​ಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಇಂದು ಈ ಅರ್ಜಿಗಳ ವಿಚಾರಣೆ ನಡೆಸಿರುವ ಸಿಜೆಐ ರಮಣ ನೇತೃತ್ವದ ನ್ಯಾಯಪೀಠ​, ಮುಂದಿನ ವಿಚಾರಣೆಯನ್ನು 10 ದಿನಗಳ ನಂತರ ನಡೆಸುವುದಾಗಿ ಹೇಳಿ ಕೇಂದ್ರ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ. ಆದರೆ, ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವಂತಹ ಮಾಹಿತಿಗಳನ್ನು ಬಹಿರಂಗಪಡಿಸುವ, ಸಾರ್ವಜನಿಕ ಚರ್ಚೆಗೆ ಮುಕ್ತವಾಗಿಸುವ ಅಗತ್ಯವೇನಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದೆ.

ಇದನ್ನೂ ಓದಿ: ಪೆಗಾಸಸ್‌- ಸುಪ್ರೀಂಕೋರ್ಟ್‌ಗೆ ಕೇಂದ್ರದಿಂದ ಅಫಿಡವಿಟ್‌; ಕೋರ್ಟ್​​​ಗಳಲ್ಲಿ ಖಾಲಿ ಹುದ್ದೆ ಭರ್ತಿಯಾಗದಿದ್ದಕ್ಕೆ ಸಿಜೆಐ ಅಸಮಾಧಾನ

ವಾದ-ವಿವಾದ ಹೀಗಿತ್ತು..

ದೇಶ ವಿರೋಧಿ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಪರಿಶೀಲಿಸಲು ಸರ್ಕಾರಗಳು ಮತ್ತು ಸೇನೆಗಳು ಹಲವಾರು ರೀತಿಯ ಸಾಫ್ಟ್‌ವೇರ್‌ಗಳನ್ನು ಬಳಸುತ್ತವೆ. ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತದೆ. ಹೀಗಾಗಿ, ಅರ್ಜಿದಾರರು ಕೇಳಿದಂತೆ ಅಫಿಡವಿಟ್​ನಲ್ಲಿ ಇಂತಹ ಮಾಹಿತಿ ನೀಡಲು ಅಸಾಧ್ಯ ಎಂದು ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ತಿಳಿಸಿದರು. ಇವರ ಮಾತನ್ನು ಒಪ್ಪಿದ ನ್ಯಾಯಲಯ ಮಾಹಿತಿಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ರಾಷ್ಟ್ರದ ಭದ್ರತೆ ನಮಗೆ ಸರ್ಕಾರದಷ್ಟೇ ಮುಖ್ಯವಾಗಿದೆ. ನಮ್ಮ ಉದ್ದೇಶ ಭದ್ರತಾ ವಿವರಗಳನ್ನು ಕೇಳುವುದಲ್ಲ. ಆದರೆ, ಪೆಗಾಸಸ್ ಗೂಢಚರ್ಯೆಯನ್ನು ತಂತ್ರಜ್ಞಾನವಾಗಿ ಬಳಸಲಾಗಿದೆಯೇ ಅಥವಾ ಇಲ್ಲವೇ ಎಂದು ಉತ್ತರಿಸಬೇಕು ಎಂದು ಹೇಳಿದರು. ಇದಕ್ಕೆ ನ್ಯಾಯಾಲಯವು, ನಾಗರಿಕರ ಫೋನ್‌ಗಳನ್ನು ಟ್ರ್ಯಾಪ್​ ಮಾಡಿದ ಆರೋಪದ ಬಗ್ಗೆ ಅಧಿಕೃತ ಮಾಹಿತಿಯನ್ನು ಮಾತ್ರ ಪಡೆಯಬೇಕೆಂದು ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.