ETV Bharat / bharat

ಜ್ಞಾನವಾಪಿ ಮಸೀದಿ ಸರ್ವೇ: ಯಥಾಸ್ಥಿತಿ ಕಾಪಾಡುವ ಅರ್ಜಿ ಮರು ಸ್ಥಾಪಿಸಿದ ಸುಪ್ರೀಂ ಕೋರ್ಟ್​

ಜ್ಞಾನವಾಪಿ ಮಸೀದಿಯೋ, ಮಂದಿರವೋ ಎಂಬುದನನ್ನು ತಿಳಿಯಲು ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸಲು ಉದ್ದೇಶಿಸಿದ್ದ ಸರ್ವೇಗೆ ಸುಪ್ರೀಂಕೋರ್ಟ್​ ತಡೆ ನೀಡಿತ್ತು. ಆದೇಶದ ಅವಧಿ ಇಂದು ಮುಗಿಯಲಿರುವ ಕಾರಣ ಈ ಹಿಂದೆ ಸಲ್ಲಿಸಲಾಗಿದ್ದ ಯಥಾಸ್ಥಿತಿ ಅರ್ಜಿಯನ್ನು ಮರು ಸ್ಥಾಪಿಸಿದೆ. ಅಂದರೆ ಅದರ ಮರು ವಿಚಾರಣೆ ನಡೆಯಲಿದೆ.

ಜ್ಞಾನವಾಪಿ ಮಸೀದಿ ಸರ್ವೇ
ಜ್ಞಾನವಾಪಿ ಮಸೀದಿ ಸರ್ವೇ
author img

By

Published : Jul 26, 2023, 3:21 PM IST

ನವದೆಹಲಿ: ಹಿಂದು ದೇವಸ್ಥಾನದ ಮೇಲೆ ನಿರ್ಮಿಸಲಾದ ಜ್ಞಾನವಾಪಿ ಮಸೀದಿಯ ಸರ್ವೇಗೆ ತಡೆ ನೀಡಿದ್ದ ಸುಪ್ರೀಂಕೋರ್ಟ್​ ಯಥಾಸ್ಥಿತಿ ಕಾಪಾಡುವಂತೆ ಕೋರಲಾಗಿದ್ದ ಅರ್ಜಿಯನ್ನು ಮರು ಸ್ಥಾಪಿಸಿ, ವಿಚಾರಣೆ ನಡೆಸಲು ಆದೇಶಿಸಿದೆ. ಜ್ಞಾನವಾಪಿ ಮಸೀದಿ ಸರ್ವೇ ನಡೆಸಬೇಕೆಂದು ಕೋರಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ವಾರಾಣಸಿ ಜಿಲ್ಲಾ ನ್ಯಾಯಾಲಯ, ಮಸೀದಿ ಸರ್ವೇಗೆ ಅನುಮತಿ ನೀಡಿತ್ತು. ಅದರಂತೆ ಸರ್ವೇ ಕಾರ್ಯ ಕೂಡ ಆರಂಭವಾಗಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಸಿದ ಜ್ಞಾನವಾಪಿ ಮಸೀದಿ ಸಮಿತಿಯು ಸರ್ವೇ ಕಾರ್ಯಕ್ಕೆ ತಡೆ ತಂದಿತ್ತು.

ಜ್ಞಾನವಾಪಿ ಮಸೀದಿ ಸಮಿತಿಯ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಿದ ಸುಪ್ರೀಂ, ಜ್ಞಾನವಾಪಿ ಮಸೀದಿಯಲ್ಲಿ ಯಾವುದೇ ಕಾರ್ಯ ನಡೆಸದಂತೆ ಸೂಚಿಸಿ ಆದೇಶಿಸಿತ್ತು. ಈ ಆದೇಶ ಜುಲೈ 26 ಸಂಜೆ 5 ಗಂಟೆಯವರೆಗೆ ಅನ್ವಯವಾಗುವಂತೆ ನೀಡಲಾಗಿತ್ತು. ಇದೀಗ ಅವಧಿ ಮುಗಿಯುತ್ತಿರುವ ಕಾರಣ ಸುಪ್ರೀಂಕೋರ್ಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಯಥಾಸ್ಥಿತಿ ಕಾಪಾಡುವ ಅರ್ಜಿಯನ್ನು ಮರು ವಿಚಾರಣೆಗೆ ಸೂಚಿಸಿ ಬುಧವಾರ ಹೊಸದಾಗಿ ಆದೇಶಿಸಿದೆ.

ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುತ್ತಿರುವ ಅಂಜುಮನ್ ಇಂಥೆಜಾಮಿಯಾ ಸಮಿತಿಯ ಪರ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು, ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ವಾದ ಮಂಡಿಸಿದರು. ಈ ವೇಳೆ, ಎಎಸ್‌ಐ ಸಮೀಕ್ಷೆಗೆ ತಡೆ ಕೋರಿ ಸಲ್ಲಿಸಿದ ಮಧ್ಯಂತರ ಅರ್ಜಿ ಬದಲಿಗೆ ಯಥಾಸ್ಥಿತಿ ಕಾಪಾಡುವ ಅರ್ಜಿ ವಿಚಾರಣೆಗೆ ಸೂಚಿಸಿತು.

ಉತ್ತರ ಪ್ರದೇಶ ಸರ್ಕಾರ ಮತ್ತು ಹಿಂದೂ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮಸೀದಿ ಸಮಿತಿಯು ಸಲ್ಲಿಸಿದ ವಿಶೇಷ ಅರ್ಜಿಯನ್ನು ಮರುಸ್ಥಾಪಿಸಲು ಅವಕಾಶವಿಲ್ಲ. ಸುಪ್ರೀಂಕೋರ್ಟ್​ ರದ್ದು ಮಾಡಿರುವುದು ಮಧ್ಯಂತರ ಅರ್ಜಿಯನ್ನು ಮಾತ್ರವೇ ಹೊರತು ಎಸ್​ಎಲ್​ಪಿ ಅರ್ಜಿ ಅಲ್ಲ ಎಂದು ಕೋರ್ಟ್​ ಗಮನಕ್ಕೆ ತಂದರು.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಆದೇಶವನ್ನು ಸರಿಪಡಿಸಿದರು. ಪೀಠ ವಿಲೇವಾರಿ ಮಾಡಿದ್ದು, ಮಧ್ಯಂತರ ಅರ್ಜಿಯನ್ನೇ ಹೊರತು, ಎಸ್​ಎಲ್​ಪಿ ಅರ್ಜಿಯನಲ್ಲ ಎಂದು ಸ್ಪಷ್ಟಪಡಿಸಿದರು. ಈ ಮಧ್ಯೆ, ಅಲಹಾಬಾದ್ ಹೈಕೋರ್ಟ್ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸರ್ವೇಯ ವಿರುದ್ಧ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪುನರಾರಂಭಿಸಿದೆ.

ವುಜುಖಾನಾವನ್ನು ಹೊರತುಪಡಿಸಿ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸಲು ಕೋರಿದ್ದ ಹಿಂದೂ ಮಹಿಳಾ ಅರ್ಜಿದಾರರ ಅರ್ಜಿಗೆ ಉತ್ತರ ಪ್ರದೇಶದ ವಾರಾಣಸಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿತ್ತು.

ಇದನ್ನೂ ಓದಿ: Gyanvapi Survey: ಗ್ಯಾನವಾಪಿ ಮಸೀದಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್​ ತಡೆ; ಜು.25ರವರೆಗೆ ಯಥಾಸ್ಥಿತಿಗೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.