ETV Bharat / bharat

ಯುವತಿ ಅವರ ಪೋಷಕರ ಜೊತೆಗೇ ಇರಲಿ: ಆಧ್ಯಾತ್ಮಿಕ ಗುರು ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​ - ಆಧ್ಯಾತ್ಮಿಕ ಪಾರ್ಟ್ನರ್​​​​​​​

ವಾದ-ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್​ ಎ ಬೊಬ್ಡೆ ಅವರು, ಯುವತಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ. ಆದ್ದರಿಂದ ಯುವತಿಯು ತನ್ನ ಪೋಷಕರ ಜೊತೆಗಿರುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

Supreme court
ಸುಪ್ರೀಂಕೋರ್ಟ್​
author img

By

Published : Feb 1, 2021, 4:23 PM IST

ನವದೆಹಲಿ: ತನ್ನ ಆಧ್ಯಾತ್ಮಿಕ ಪಾರ್ಟ್ನರ್​​​​​​​ ಅನ್ನು ಅವರ ಪೋಷಕರು ಒತ್ತಾಯದಿಂದ ಗೃಹ ಬಂಧನದಲ್ಲಿರಿಸಿದ್ದಾರೆ, ಅವರನ್ನು ಕೋರ್ಟ್​ಗೆ ಕರೆಸಬೇಕು ಎಂದು ಆಧ್ಯಾತ್ಮಿಕ ಗುರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಇದಕ್ಕೂ ಮೊದಲು ಈ ಪ್ರಕರಣ ಸಂಬಂಧ ಕೇರಳ ಹೈಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ಯೋಗ ಸಹಪಾಠಿಯು ಅರ್ಜಿದಾರನ ಜೊತೆ ಹೋಗುವುದಕ್ಕಿಂತ ಅವರ ಪೋಷಕರ ಜೊತೆಗಿರುವುದೇ ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟು ಹೇಬಿಯಸ್ ಕಾರ್ಪಸ್​​​ ಅರ್ಜಿಯನ್ನು ತಿರಸ್ಕರಿಸಿತ್ತು.

ಮೂಲಗಳ ಪ್ರಕಾರ ಆಧ್ಯಾತ್ಮಿಕ ಗುರು ವೃತ್ತಿಯಲ್ಲಿ ವೈದ್ಯನಾಗಿದ್ದು, ಈಗಾಗಲೇ ವಿವಾಹವಾಗಿದ್ದಾನೆ. ಇಬ್ಬರು ಪುತ್ರಿಯರು ಹಾಗೂ ಪತ್ನಿಯನ್ನು ದೂರ ಮಾಡಿದ್ದು, ಇದೀಗ 21 ವರ್ಷದ ಆತನ ಆಧ್ಯಾತ್ಮಿಕ ಸಹಪಾಠಿ ಗೃಹ ಬಂಧನದಲ್ಲಿದ್ದಾಳೆ ಎಂದು ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದಾನೆ.

ಈ ಕುರಿತು ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ್, ಆಧ್ಯಾತ್ಮಿಕ ಗುರುವಿನೊಂದಿಗೆ ಯಾವುದೇ ದೈಹಿಕ ಸಂಪರ್ಕ ಇಟ್ಟುಕೊಂಡಿಲ್ಲ ಎಂದು ಯುವತಿ ಮಾಹಿತಿ ನೀಡಿದ್ದಾಳೆ ಎಂದು ಕೇರಳ ಹೈಕೋರ್ಟ್​ನ ತೀರ್ಪನ್ನು ಉಲ್ಲೇಖಿಸಿದ್ದಾರೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಸ್​ ಎ ಬೊಬ್ಡೆ, ಯುವತಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ. ಆದ್ದರಿಂದ ಯುವತಿಯು ಆಕೆಯ ಪೋಷಕರ ಜೊತೆಗಿರುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಹೈಕೋರ್ಟ್​​​ಗೆ ಪ್ರತಿಕ್ರಿಯಿಸಿದ್ದ ಯುವತಿ ನಾನು ಪೋಷಕರಿಂದ ದೈಹಿಕ ಹಿಂಸೆಗೆ ಒಳಗಾಗಿದ್ದೇನೆ, ಅವರಿಂದ ಗೃಹ ಬಂಧನಕ್ಕೊಳಗಾಗಿದ್ದೇನೆ ಎಂದು ವಾದ ಮಂಡಿಸಿದ್ದಳು. ಆದರೆ ಈ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾದಳು.

ಇದನ್ನೂ ಓದಿ: ಟ್ರಕ್​ ಹರಿಸಿ ಸಬ್​ ಇನ್ಸ್​ಪೆಕ್ಟರ್​ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.