ನವದೆಹಲಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ಗೆ ವಂಚಿಸಿರುವ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಉದ್ಯಮಿ ಸುಕೇಶ್ ಚಂದ್ರ ಶೇಖರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ದೆಹಲಿಯ ತಿಹಾರ್ ಜೈಲಿನಿಂದ ದೆಹಲಿಯ ಹೊರಗಿರುವ ಬೇರೆ ಜೈಲಿಗೆ ವರ್ಗಾಯಿಸುವಂತೆ ಕೋರಿ ಸುಕೇಶ್ ಚಂದ್ರ ಶೇಖರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 13ಕ್ಕೆ ಮುಂದೂಡಿದೆ. ಇದರಲ್ಲಿ ಯಾವುದೇ ತುರ್ತು ವಿಚಾರ ಇಲ್ಲವೆಂದು ನ್ಯಾಯಾಲಯವು ತಿಳಿಸಿದೆ.
ತಿಹಾರ್ ಜೈಲು ಅಧಿಕಾರಿಗಳು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ಸುಕೇಶ್ ಚಂದ್ರ ಶೇಖರ್ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ರಜಾಕಾಲದ ಪೀಠ ವಿಚಾರಣೆ ನಡೆಸಿದೆ.
ಜೈಲಿನಲ್ಲಿ ತನ್ನ ಕಕ್ಷಿದಾರನ ಜೀವಕ್ಕೆ ಬೆದರಿಕೆಯ ಬಗ್ಗೆ ಆತಂಕವನ್ನು ವಕೀಲ ಬಸಂತ್ ಎತ್ತಿದರು, ಈ ತಿಂಗಳ ಆರಂಭದಲ್ಲಿ ಸುಕೇಶ್ ಅವರನ್ನು ತಿಹಾರ್ ಜೈಲಿನಿಂದ ಸ್ಥಳಾಂತರಿಸಬೇಕೆಂದು ನಿರ್ದೇಶಿಸಿದ ನ್ಯಾಯಮೂರ್ತಿ ಬೋಪಣ್ಣ ನೇತೃತ್ವದ ಪೀಠದ ಆದೇಶವನ್ನು ನ್ಯಾಯಮೂರ್ತಿ ಕಾಂತ್ ಉಲ್ಲೇಖಿಸಿದರು. ನ್ಯಾಯಮೂರ್ತಿ ಬೋಪಣ್ಣ ಅವರ ಆದೇಶದ ನಂತರ ಯಾರೂ ನಿಮ್ಮನ್ನು ಮುಟ್ಟುವುದಿಲ್ಲ ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.
ಇದನ್ನೂ ಓದಿ: 25 ವರ್ಷದ ಹಿಂದೆ ಕೊಲೆ ಮಾಡಿ ಪರಾರಿ: ಕಲಬುರಗಿಯಲ್ಲಿ ಸುಪಾರಿ ಕಿಲ್ಲರ್ ಕೊನೆಗೂ ಅಂದರ್