ETV Bharat / bharat

ಭಾರತದ ಕೋವಿಡ್​ ವಿರುದ್ಧದ ಹೋರಾಟಕ್ಕೆ 71 ಕೋಟಿ ರೂ. ನೆರವು ಘೋಷಿಸಿದ ಎಸ್‌ಬಿಐ - State Bank of India

ಆಮ್ಲಜನಕದ ಪೂರೈಕೆ, ಬೆಡ್​ಗಳು ಸೇರಿದಂತೆ ಕೊರೊನಾ ರೋಗಿಗಳ ಚಿಕಿತ್ಸೆಗೆ ಬೇಕಾಗುವ ತುರ್ತು ವೈದ್ಯಕೀಯ ಅಗತ್ಯಗಳನ್ನು ಒದಗಿಸಲು ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ 71 ಕೋಟಿ ರೂ. ನೆರವು ನೀಡುವುದಾಗಿ ತಿಳಿಸಿದೆ..

SBI has allocated Rs 71 crores to India combat second wave of COVID-19
ಎಸ್‌ಬಿಐ
author img

By

Published : May 3, 2021, 2:26 PM IST

ನವದೆಹಲಿ : ಕೊರೊನಾ ಎರಡನೇ ಅಲೆಯಲ್ಲಿ ಸಿಲುಕಿರುವ ಭಾರತಕ್ಕೆ ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ (ಎಸ್‌ಬಿಐ) 71 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದೆ.

ಇದರಲ್ಲಿ 1000 ಹಾಸಿಗೆ ಸಾಮರ್ಥ್ಯದ ತಾತ್ಕಾಲಿಕ ಆಸ್ಪತ್ರೆಗಳು, 250 ಐಸಿಯು ಬೆಡ್​ ಸೌಲಭ್ಯಗಳು ಮತ್ತು 1000 ಹಾಸಿಗೆಗಳ ಐಸೋಲೇಷನ್​ ಕೇಂದ್ರಗಳನ್ನು ಸ್ಥಾಪಿಸಲು ಬ್ಯಾಂಕ್ 30 ಕೋಟಿ ರೂ. ಮೀಸಲಿಡಲಾಗುವುದು. ಎನ್‌ಜಿಒಗಳೊಂದಿಗೆ ಸಹಭಾಗಿತ್ವದಲ್ಲಿ ಕೋವಿಡ್ -19 ಸಂಬಂಧಿತ ವಿಷಯಗಳಿಗೆ ಸಹಾಯವಾಣಿ ರಚಿಸಲು, ವ್ಯಾಕ್ಸಿನೇಷನ್ ಡ್ರೈವ್‌ ಬಲಪಡಿಸಲು 10 ಕೋಟಿ ರೂ. ನೀಡಲಾಗುವುದು ಎಂದು ಎಸ್‌ಬಿಐ ಹೇಳಿದೆ.

ಇದನ್ನೂ ಓದಿ: 3.68 ಲಕ್ಷ ಕೋವಿಡ್​ ಕೇಸ್​, 3,417 ಸಾವು: ಒಂದೇ ದಿನ 3 ಲಕ್ಷ ಸೋಂಕಿತರು ಗುಣಮುಖ

ಉಳಿದ ಹಣವನ್ನು ಆಮ್ಲಜನಕದ ಪೂರೈಕೆ ಸೇರಿದಂತೆ ಕೊರೊನಾ ರೋಗಿಗಳ ಚಿಕಿತ್ಸೆಗೆ ಬೇಕಾಗುವ ತುರ್ತು ವೈದ್ಯಕೀಯ ಅಗತ್ಯಗಳನ್ನು ಒದಗಿಸಲು ಬಳಸಲಾಗುವುದು. ಈ ಸೌಲಭ್ಯಗಳನ್ನು ಆಯಾ ನಗರಗಳ ಸರ್ಕಾರಿ ಆಸ್ಪತ್ರೆಗಳು ಮತ್ತು ಮಹಾನಗರ ಪಾಲಿಕೆಗಳ ಸಹಯೋಗದೊಂದಿಗೆ ಸ್ಥಾಪಿಸಲಾಗುವುದು ಎಂದು ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

"ಕೋವಿಡ್​ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಸಮಾಜಕ್ಕೆ ಸಣ್ಣ ಕೊಡುಗೆ ನೀಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ" ಎಂದು ಎಸ್‌ಬಿಐ ಮುಖ್ಯಸ್ಥ ದಿನೇಶ್ ಕುಮಾರ್ ಖಾರಾ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.