ETV Bharat / bharat

ಖಗೋಳದಲ್ಲಿ ವಿಸ್ಮಯ: ಭೂಮಿ-ಶನಿ ಸಂಯೋಗ, ಬರಿಗಣ್ಣಿನಿಂದ ನೋಡುವ ಸುಯೋಗ

author img

By

Published : Aug 2, 2021, 8:38 AM IST

ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಿಗ್ಗೆ 11.30ಕ್ಕೆ ಶನಿಗ್ರಹವು ಭೂಮಿಗೆ ಹತ್ತಿರ ಬರಲಿದೆ. ವರ್ಷಕ್ಕೊಮ್ಮೆ ಈ ಅದ್ಭುತ ನಡೆಯುತ್ತದೆ ಎಂದು ಹೇಳಿದ್ದಾರೆ.

Saturn & Earth
ಖಗೋಳದಲ್ಲಿ ವಿಸ್ಮಯ

ಖಗೋಳದಲ್ಲಿ ಇಂದು ವಿಸ್ಮಯ ನಡೆಯಲಿದೆ. ಭೂಮಿ ಮತ್ತು ಶನಿ ಗ್ರಹಗಳು ಆಗಸ್ಟ್​ 1-2ರಂದು ಒಂದಕ್ಕೊಂದು ತುಂಬಾ ಸನಿಹ ಬರಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ವರ್ಷಕ್ಕೊಮ್ಮೆ ನಡೆಯುವ ಅಚ್ಚರಿ.

ಭಾರತೀಯ ಕಾಲಮಾನದ ಪ್ರಕಾರ, ಇಂದು ಬೆಳಿಗ್ಗೆ 11.30ಕ್ಕೆ ಶನಿ ಗ್ರಹವು ಭೂಮಿಗೆ ಹತ್ತಿರ ಬರಲಿದೆ. ಒಡಿಶಾದ ಸಮಂತಾ ಪ್ಲಾನೆಟೋರಿಯಂನ ಉಪನಿರ್ದೇಶಕ ಸುವೇಂದು ಪಟ್ನಾಯಕ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ವರ್ಷದಲ್ಲಿ ಒಮ್ಮೆ ಉಂಟಾಗುವ ಈ ಅದ್ಭುತ ಆಗಸ್ಟ್ 2 ರಂದು ಬೆಳಿಗ್ಗೆ 11: 30 ನಡೆಯಲಿದೆ. ಶನಿ ಮತ್ತು ಭೂಮಿಯು ಒಂದಕ್ಕೊಂದು ಹತ್ತಿರದಲ್ಲಿರಲಿದೆ ಎಂದು ಹೇಳಿದರು.

Saturn
ಶನಿ ಗ್ರಹ

ಈ ಅದ್ಭುತವನ್ನು ಪ್ರಪಂಚದಾದ್ಯಂತ ಜನರು ಬರಿಗಣ್ಣಿನಿಂದ ನೋಡಲು ಸಾಧ್ಯವಾಗುತ್ತದೆ. ಶನಿಯ ಈ ಸ್ಥಾನವು ಆಗಸ್ಟ್ 1 ರಿಂದ ಆರಂಭವಾಗಲಿದ್ದು, ಆಗಸ್ಟ್ 2 ರಂದು ಬೆಳಗ್ಗೆ 11.30ಕ್ಕೆ ಭೂಮಿಯ ಹತ್ತಿರ ತಲುಪಲಿದೆ ಎಂದು ಹೇಳಲಾಗಿದೆ.

  • We’re sitting ringside!

    Saturn is in opposition, forming a straight line with us and the Sun, and making its closest approach to Earth for the year. 🪐🌎🌞

    It's prime time to observe the ringed giant, and learn about the first spacecraft to get close: https://t.co/DpXhG3ABBI pic.twitter.com/WV9jntPdPS

    — NASA Ames (@NASAAmes) August 1, 2021 " class="align-text-top noRightClick twitterSection" data="

We’re sitting ringside!

Saturn is in opposition, forming a straight line with us and the Sun, and making its closest approach to Earth for the year. 🪐🌎🌞

It's prime time to observe the ringed giant, and learn about the first spacecraft to get close: https://t.co/DpXhG3ABBI pic.twitter.com/WV9jntPdPS

— NASA Ames (@NASAAmes) August 1, 2021 ">

ಇದರ ನಂತರ ಗುರು ಆಕಾಶದಲ್ಲಿ ಪ್ರಕಾಶಮಾನವಾದ ಗ್ರಹವಾಗಿ ಉಳಿಯುತ್ತದೆ. ಇನ್ನು ಶನಿಯ ಸ್ಥಾನವು ಗುರುವಿನ ಪಶ್ಚಿಮಕ್ಕೆ ಇರುತ್ತದೆ ಎಂದು ಹೇಳಲಾಗಿದೆ.

Earth
ಭೂಮಿ

ಭೂಮಿ ಮತ್ತು ಶನಿ ಗ್ರಹದ ನಡುವೆ ಸುಮಾರು 1.3341 ಬಿಲಿಯನ್​ ಕಿ.ಮೀನಷ್ಟು ಅಂತರವಿದೆ. ಶನಿ ಗ್ರಹವು ಸೂರ್ಯನಿಂದ 6ನೇಯ ಗ್ರಹ. ಅನಿಲ ರೂಪಿಯಾದ ಶನಿಯು ಗುರು ಗ್ರಹದ ನಂತರ ಸೌರಮಂಡಲದಲ್ಲಿ 2ನೇ ಅತಿ ದೊಡ್ಡ ಗ್ರಹ ಎಂದು ಖ್ಯಾತಿ ಪಡೆದಿದೆ. ಶನಿಗ್ರಹದಲ್ಲಿ ಉಂಗುರ ವ್ಯವಸ್ಥೆಯನ್ನು ಕಾಣಬಹುದು. ಈ ಉಂಗುರಗಳು ಮುಖ್ಯವಾಗಿ ಮಂಜು, ಕಲ್ಲಿನ ಚೂರುಗಳು ಮತ್ತು ಧೂಳಿನಿಂದ ಆವೃತವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಖಗೋಳದಲ್ಲಿ ಇಂದು ವಿಸ್ಮಯ ನಡೆಯಲಿದೆ. ಭೂಮಿ ಮತ್ತು ಶನಿ ಗ್ರಹಗಳು ಆಗಸ್ಟ್​ 1-2ರಂದು ಒಂದಕ್ಕೊಂದು ತುಂಬಾ ಸನಿಹ ಬರಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ವರ್ಷಕ್ಕೊಮ್ಮೆ ನಡೆಯುವ ಅಚ್ಚರಿ.

ಭಾರತೀಯ ಕಾಲಮಾನದ ಪ್ರಕಾರ, ಇಂದು ಬೆಳಿಗ್ಗೆ 11.30ಕ್ಕೆ ಶನಿ ಗ್ರಹವು ಭೂಮಿಗೆ ಹತ್ತಿರ ಬರಲಿದೆ. ಒಡಿಶಾದ ಸಮಂತಾ ಪ್ಲಾನೆಟೋರಿಯಂನ ಉಪನಿರ್ದೇಶಕ ಸುವೇಂದು ಪಟ್ನಾಯಕ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ವರ್ಷದಲ್ಲಿ ಒಮ್ಮೆ ಉಂಟಾಗುವ ಈ ಅದ್ಭುತ ಆಗಸ್ಟ್ 2 ರಂದು ಬೆಳಿಗ್ಗೆ 11: 30 ನಡೆಯಲಿದೆ. ಶನಿ ಮತ್ತು ಭೂಮಿಯು ಒಂದಕ್ಕೊಂದು ಹತ್ತಿರದಲ್ಲಿರಲಿದೆ ಎಂದು ಹೇಳಿದರು.

Saturn
ಶನಿ ಗ್ರಹ

ಈ ಅದ್ಭುತವನ್ನು ಪ್ರಪಂಚದಾದ್ಯಂತ ಜನರು ಬರಿಗಣ್ಣಿನಿಂದ ನೋಡಲು ಸಾಧ್ಯವಾಗುತ್ತದೆ. ಶನಿಯ ಈ ಸ್ಥಾನವು ಆಗಸ್ಟ್ 1 ರಿಂದ ಆರಂಭವಾಗಲಿದ್ದು, ಆಗಸ್ಟ್ 2 ರಂದು ಬೆಳಗ್ಗೆ 11.30ಕ್ಕೆ ಭೂಮಿಯ ಹತ್ತಿರ ತಲುಪಲಿದೆ ಎಂದು ಹೇಳಲಾಗಿದೆ.

  • We’re sitting ringside!

    Saturn is in opposition, forming a straight line with us and the Sun, and making its closest approach to Earth for the year. 🪐🌎🌞

    It's prime time to observe the ringed giant, and learn about the first spacecraft to get close: https://t.co/DpXhG3ABBI pic.twitter.com/WV9jntPdPS

    — NASA Ames (@NASAAmes) August 1, 2021 " class="align-text-top noRightClick twitterSection" data=" ">

ಇದರ ನಂತರ ಗುರು ಆಕಾಶದಲ್ಲಿ ಪ್ರಕಾಶಮಾನವಾದ ಗ್ರಹವಾಗಿ ಉಳಿಯುತ್ತದೆ. ಇನ್ನು ಶನಿಯ ಸ್ಥಾನವು ಗುರುವಿನ ಪಶ್ಚಿಮಕ್ಕೆ ಇರುತ್ತದೆ ಎಂದು ಹೇಳಲಾಗಿದೆ.

Earth
ಭೂಮಿ

ಭೂಮಿ ಮತ್ತು ಶನಿ ಗ್ರಹದ ನಡುವೆ ಸುಮಾರು 1.3341 ಬಿಲಿಯನ್​ ಕಿ.ಮೀನಷ್ಟು ಅಂತರವಿದೆ. ಶನಿ ಗ್ರಹವು ಸೂರ್ಯನಿಂದ 6ನೇಯ ಗ್ರಹ. ಅನಿಲ ರೂಪಿಯಾದ ಶನಿಯು ಗುರು ಗ್ರಹದ ನಂತರ ಸೌರಮಂಡಲದಲ್ಲಿ 2ನೇ ಅತಿ ದೊಡ್ಡ ಗ್ರಹ ಎಂದು ಖ್ಯಾತಿ ಪಡೆದಿದೆ. ಶನಿಗ್ರಹದಲ್ಲಿ ಉಂಗುರ ವ್ಯವಸ್ಥೆಯನ್ನು ಕಾಣಬಹುದು. ಈ ಉಂಗುರಗಳು ಮುಖ್ಯವಾಗಿ ಮಂಜು, ಕಲ್ಲಿನ ಚೂರುಗಳು ಮತ್ತು ಧೂಳಿನಿಂದ ಆವೃತವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.