ETV Bharat / bharat

ಶಶಿಕಲಾ ಪಕ್ಷದಿಂದ ದೂರ ಉಳಿಯುವುದು ಜಯಲಲಿತಾ ಆತ್ಮಕ್ಕೆ ಗೌರವ ಸೂಚಕ: ಮುನುಸ್ವಾಮಿ - AIADMK party co convener KP Munusamy

ಶಶಿಕಲಾ, ಎಐಎಡಿಎಂಕೆಯಿಂದ ದೂರವಿರಬೇಕು. ಇದು ದಿವಂಗತ ಜೆ.ಜಯಲಲಿತಾ ಅವರ ಆತ್ಮಕ್ಕೆ ನೀಡುವ ಗೌರವವಾಗಿದೆ ಎಂದು ಎಐಎಡಿಎಂಕೆ ಸಹ ಕನ್ವೀನರ್ ಕೆ.ಪಿ ಮುನುಸ್ವಾಮಿ ಹೇಳಿದ್ದಾರೆ.

ಎಐಎಡಿಎಂಕೆ ಸಹ ಕನ್ವೀನರ್ ಕೆ.ಪಿ ಮುನುಸ್ವಾಮಿ
ಎಐಎಡಿಎಂಕೆ ಸಹ ಕನ್ವೀನರ್ ಕೆ.ಪಿ ಮುನುಸ್ವಾಮಿ
author img

By

Published : May 31, 2021, 9:02 PM IST

ತಮಿಳುನಾಡು: ಶಶಿಕಲಾ ಎಐಎಡಿಎಂಕೆ ಪಕ್ಷದ ಭಾಗವಲ್ಲ. ಜಯಲಲಿತಾ ಅವರ ಆತ್ಮದ ಸಂತೋಷಕ್ಕಾದರೂ ಅವಳು ಪಕ್ಷದಿಂದ ದೂರವಿರಬೇಕು ಎಂದು ಎಐಎಡಿಎಂಕೆ ಸಹ ಕನ್ವೀನರ್ ಕೆ.ಪಿ ಮುನುಸ್ವಾಮಿ ಹೇಳಿದ್ದಾರೆ. ಶಶಿಕಲಾ ಎಐಎಡಿಎಂಕೆ ಜೊತೆ ಇಲ್ಲ. ಆಕೆಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಪರ್ಕವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಶಶಿಕಲಾ ಅವರ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಮುನುಸ್ವಾಮಿ ಈ ಹೇಳಿಕೆ ನೀಡಿದ್ದಾರೆ. ಆಡಿಯೋದಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಶಶಿಕಲಾ ಮಾತನಾಡುತ್ತಿದ್ದು, ಕೊರೊನಾ ಕೊನೆಗೊಂಡ ನಂತರ ತಾನು ಮತ್ತೆ ಪಕ್ಷದ ಕೆಲಸಕ್ಕೆ ಬರುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

ಕೃಷ್ಣಗಿರಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮುನುಸ್ವಾಮಿ, ಉತ್ತಮವಾಗಿ ನಡೆಯುತ್ತಿರುವ ಪಕ್ಷದಲ್ಲಿ ಹೇಗಾದರೂ ಗೊಂದಲ ಸೃಷ್ಟಿಸಲು ಇಂತಹ ಸುಳ್ಳು ಆರೋಪಗಳು ಮಾಡಲಾಗುತ್ತಿದೆ. ಶಶಿಕಲಾನನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗುತ್ತಿದೆ ಎಂಬ ತಪ್ಪು ಮಾಹಿತಿ ಹರಡಲಾಗುತ್ತಿದೆ. ಕಾರ್ಯಕರ್ತರ ದಾರಿ ತಪ್ಪಿಸುವ ಮತ್ತು ಗೊಂದಲವನ್ನು ಸೃಷ್ಟಿಸುವುದು ಮಾತ್ರ ಇದರ ಉದ್ದೇಶ. ಈ ಪ್ರಯತ್ನವು ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ. .

ಇನ್ನು ಶಶಿಕಲಾ, ಎಐಎಡಿಎಂಕೆಯಿಂದ ದೂರವಿರಬೇಕು. ಇದು ದಿವಂಗತ ಜೆ.ಜಯಲಲಿತಾ ಅವರ ಆತ್ಮಕ್ಕೆ ನೀಡುವ ಗೌರವವಾಗಿದೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.