ಗುಂಟೂರು(ಆಂಧ್ರಪ್ರದೇಶ): ಗ್ರಾಮ ಪಂಚಾಯತ್ ಸದಸ್ಯನಾದ್ರೆ ವಿವಿಧ ಯೋಜನೆಗಳಿಗೋಸ್ಕರ ಬರುವ ಲಕ್ಷಾಂತರ ರೂಪಾಯಿಯನ್ನ ತಮ್ಮ ಖಾತೆಗೆ ಜಮಾ ಮಾಡಿಸಿಕೊಳ್ತಾರೆ. ಆದರೆ, ಇಲ್ಲೋರ್ವ ಸರಪಂಚ್ ಗ್ರಾಮ ಪಂಚಾಯತ್‌ನ ವಿವಿಧ ಕೆಲಸ ಮಾಡಿಸಲು ಖಾತೆಯಲ್ಲಿ ಹಣವಿಲ್ಲ ಎಂಬ ಕಾರಣಕ್ಕಾಗಿ ಹಣ್ಣು, ತರಕಾರಿ ಮಾರಾಟ ಮಾಡುವ ಕೆಲಸ ಮಾಡ್ತಿದ್ದಾರೆ.
ಆಂಧ್ರದ ಗುಂಟೂರು ಜಿಲ್ಲೆಯ ಪ್ರತಿಪಾಡು ಕ್ಷೇತ್ರದ ವಟ್ಟಿಚೆರೂಕೂರು ಗ್ರಾಮದ ಸರಪಂಚ್ ಅರಮಲ್ಲ ವಿಜಯ್‌ಕುಮಾರ್ ಗ್ರಾಮದಲ್ಲಿ ವಿವಿಧ ಕಾಮಗಾರಿ ಮಾಡಲು ಗ್ರಾಮ ಪಂಚಾಯತ್ ಖಾತೆಯಲ್ಲಿ ಹಣ ಇಲ್ಲ ಎಂಬ ಕಾರಣಕ್ಕಾಗಿ ಹಣ್ಣು, ತರಕಾರಿ ಮಾರುವ ವ್ಯಾಪಾರ ಮಾಡ್ತಿದ್ದಾರೆ. ಗ್ರಾಮ ಪಂಚಾಯತ್ ಖಾತೆಯಲ್ಲಿ ಹಣ ಇಲ್ಲದ ಕಾರಣ ಜನರ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ತಾವು ಕಳೆದ ಕೆಲ ದಿನಗಳಿಂದ ಪಂಚಾಯತ್‌ಗೆ ಹೋಗಿಲ್ಲ ಎಂದಿದ್ದಾರೆ.
ನನ್ನ ಮೇಲೆ ವಿಶ್ವಾಸವಿಟ್ಟು ಗ್ರಾಮಸ್ಥರು ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ. ವಿವಿಧ ಸಮಸ್ಯೆ ಬಗೆಹರಿಸಲು ಈವರೆಗೆ 6 ಲಕ್ಷ ರೂ. ಸಾಲ ಮಾಡಿ ಕೆಲಸ ಮಾಡಿಸಿದ್ದೇನೆ. ಆದ್ರೆ, ಈವರೆಗೆ ಯಾವುದೇ ಬಿಲ್ ಬಾರದ ಕಾರಣ ತೊಂದರೆ ಅನುಭವಿಸುತ್ತಿದ್ದೇನೆ ಎಂದರು. ಗ್ರಾಮ ಪಂಚಾಯತ್‌ನಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಕಳೆದ 9 ತಿಂಗಳಿಂದ ವೇತನ ನೀಡಿಲ್ಲ. ನಮ್ಮ ಜೇಬಿನಿಂದ ಹಣ ನೀಡುವಂತಾಗಿದೆ. ರಾಜ್ಯ ಸರ್ಕಾರ ಗ್ರಾಮ ಪಂಚಾಯತ್‌ಗಳಿಗೆ ಅನುದಾನ ನೀಡುವುದು ಅತಿ ಅವಶ್ಯವಾಗಿದೆ ಎಂದರು.
ಇದನ್ನೂ ಓದಿ: ಟಿ - 20 ಚಾಲೆಂಜ್ ಟ್ರೋಫಿ: ಮಹಿಳಾ ತಂಡ ಪ್ರಕಟಿಸಿದ ಬಿಸಿಸಿಐ: ಮೇ. 23ರಿಂದ ಟೂರ್ನಿ ಆರಂಭ
ನಮ್ಮದು ಪ್ರಮುಖ ಪಂಚಾಯತ್ ಆಗಿರುವುದರಿಂದ ಪ್ರತಿದಿನ 3 ಗಂಟೆ ವಿದ್ಯುತ್ ಇರಲ್ಲ. ರಾತ್ರಿ ವೇಳೆ ಮಕ್ಕಳು, ವೃದ್ಧರು ಪರದಾಡುವಂತಾಗಿದೆ. ಹಣವಿಲ್ಲದಿದ್ದರೆ ಗ್ರಾಮಗಳಲ್ಲಿ ಸೊಳ್ಳೆ ನಿವಾರಕ ಔಷಧಿ ಸಿಂಪಡಣೆ ಮಾಡುವುದು ಹೇಗೆ? ಪೈಪ್ಲೈನ್ ಸೋರಿಕೆ ಸರಿಪಡಿಸುವುದು ಹೇಗೆ ಎಂದು ವಿಜಯ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.