ಭಿಖಿವಿಂದ್ (ಪಂಜಾಬ್): 1991ರಲ್ಲಿ ಪಾಕಿಸ್ತಾನದ ನ್ಯಾಯಾಲಯದಿಂದ 'ಗೂಢಚಾರಿಕೆ'ಗಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿ 2013ರಲ್ಲಿ ಲಾಹೋರ್ನಲ್ಲಿ ನಿಧನ ಹೊಂದಿದ್ದ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಶನಿವಾರ ರಾತ್ರಿ ತಮ್ಮ ಹಳ್ಳಿ ಭಿಖಿವಿಂದ್ನಲ್ಲಿ ಕೊನೆಯುಸಿರೆಳೆದರು.
ರಾಜ್ಯದ ಭಿಖಿವಿಂಡ್ ಪಟ್ಟಣದ ರೈತ ಸರಬ್ಜಿತ್ ಸಿಂಗ್, ಭಾರತ-ಪಾಕಿಸ್ತಾನ ಗಡಿಯ ಬಳಿ ವಾಸಿಸುತ್ತಿದ್ದರು. ಮದ್ಯ ಸೇವಿಸಿದ್ದ ಸಿಂಗ್ ದಾರಿತಪ್ಪಿ ಗಡಿರೇಖೆ ದಾಟಿದ್ದರು. ಹಾಗಾಗಿ 1991ರಲ್ಲಿ ಪಾಕಿಸ್ತಾನದ ನ್ಯಾಯಾಲಯ ಅವರಿಗೆ ಮರಣದಂಡನೆ ವಿಧಿಸಿತ್ತು. ಸಿಂಗ್ ಅವರನ್ನು 22 ವರ್ಷಗಳ ಕಾಲ ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಲ್ಲಿ ಇರಿಸಲಾಗಿತ್ತು.
2013ರಲ್ಲಿ ಜೈಲು ಆವರಣದಲ್ಲಿ ಸಿಂಗ್ ಅವರ ಮೇಲೆ ನಡೆದ ದಾಳಿಯಲ್ಲಿ ತಲೆಗೆ ತೀವ್ರವಾದ ಗಾಯಗಳಾಗಿತ್ತು. ಐದು ದಿನಗಳ ಕಾಲ ಕೋಮಾದಲ್ಲಿದ್ದ ನಂತರ ಲಾಹೋರ್‌ನ ಜಿನ್ನಾ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದರು. 22 ವರ್ಷಗಳ ಜೈಲುವಾಸದ ಸಮಯದಲ್ಲಿ ಅವರ ಸಹೋದರಿ ದಲ್ಬೀರ್ ಕೌರ್ ತಮ್ಮ ಸಹೋದರನನ್ನು ಬಿಡುಗಡೆ ಮಾಡಲು ಹೋರಾಟ ಮಾಡಿದ್ದರು. ದಲ್ಬೀರ್ ಕೌರ್ ತಮ್ಮ ಸಹೋದರ ಸಿಂಗ್ ನಿರಪರಾಧಿ, ಆತ ತಪ್ಪಾಗಿ ಪಾಕಿಸ್ತಾನಕ್ಕೆ ಹೋಗಿದ್ದು ಎಂದು ಹೇಳುತ್ತಿದ್ದರು. ಬಂಧಿಸಿದ ಸಮಯದಲ್ಲಿ ಆಕೆಯೂ ತನ್ನ ಸಹೋದರನನ್ನು ನೋಡಲು ಪಾಕಿಸ್ತಾನಕ್ಕೆ ಹೋಗಿದ್ದರು.
ಇದನ್ನೂ ಓದಿ : ಪಿಎಸ್‌ಐ ನೇಮಕ ಹಗರಣ: ಮೂವರು ಆರೋಪಿಗಳು ಸಿಐಡಿ ಕಸ್ಟಡಿಗೆ