ಮುಂಬೈ: ಪತ್ರಾ ಚಾಲ್ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆ ನಾಯಕ ಮತ್ತು ರಾಜ್ಯ ಸಭಾ ಸಂಸದ ಸಂಜಯ್ ರಾವುತ್ಗೆ ಪಿಎಂಎಲ್ಎ ನ್ಯಾಯಾಲಯ ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣ ಆಲಿಸಿದ ವಿಶೇಷ ನ್ಯಾಯಾಮೂರ್ತಿ ಎಂಜಿ ದೇಶಾಪಾಂಡೆ ಅವರಿಗೆ ಜಾಮೀನು ನೀಡಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಕಳೆದ 101 ದಿನಗಳಿಂದ ಸೆರೆವಾಸದಲ್ಲಿದ್ದರು.
ಪತ್ರಾ ಚಾಲ್ ಪುನರಾಭಿವೃದ್ಧಿ ಯೋಜನೆಯಲ್ಲಿನ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ ಸಾಮ್ನಾ ಪತ್ರಿಕೆ ಸಂಪಾದಕರನ್ನು ಕಳೆದ ಜುಲೈನಲ್ಲಿ ಬಂಧಿಸಿತ್ತು. ಪ್ರಕರಣ ಸಂಬಂಧ ಜಾಮೀನು ಅರ್ಜಿ ಸಲ್ಲಿಸಿದ್ದ ಕ್ರಮವನ್ನು ಇಡಿ ವಿರೋಧಿಸಿತ್ತು.
ಪ್ರಸ್ತುತ ರಾವ್ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಅವರನ್ನು ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿ ಇರಿಸಲಾಗಿದೆ. ಅಧಿಕಾರ ದುರ್ಬಳಕೆ ಮತ್ತು ರಾಜಕೀಯ ದ್ವೇಷಕ್ಕೆ ತಾವು ಬಲಿಯಾಗಿರುವುದಾಗಿ ರಾವುತ್ ಜಾಮೀನು ಮನವಿಯಲ್ಲಿ ಉಲ್ಲೇಖಿಸಿದ್ದರು.
ಪತ್ರಾ ಚಾಲ್ ಪುನರಾಭಿವೃದ್ಧಿ ಯೋಜನೆಯಲ್ಲಿ ಹಣಕಾಸಿನ ವರ್ಗಾವಣೆಯಲ್ಲಿ ರಾವುತ್ ಹೆಂಡತಿ ಮತ್ತು ಸಹಚರರು ಭಾಗಿಯಾಗಿದ್ದಾರೆ. ಇದರಲ್ಲಿ ಅಕ್ರಮ ಹಣದ ವಹಿವಾಟು ನಡೆದಿದೆ ಎಂದು ಇಡಿ ತನಿಖೆ ಆರಂಭಿಸಿತು.
ಇದನ್ನೂ ಓದಿ: ಜೈಲಿನಲ್ಲಿಯೂ ಓದು ಬರಹ ಮುಂದುವರೆಸಿದ ಸಂಜಯ್ ರಾವತ್