ಮುಂಬೈ : ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ)ವನ್ನು 'ನಾಯಿಗಳು' ಎಂದು ಕರೆದಿದ್ದಾರೆ.
ಅಕ್ರಮ ಹಣ ಗಳಿಕೆ ಹಾಗೂ ಆದಾಯಕ್ಕಿಂತ ಜಾಸ್ತಿ ಆಸ್ತಿ ಮಾಡಿದವರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ತಂಡವು ಇತ್ತೀಚೆಗೆ ದಾಳಿ ಮಾಡುವಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದು, ಇದನ್ನು ಖಂಡಿಸಿ ಸಂಜಯ್ ರಾವತ್, ಕೇಂದ್ರದ ಇವೆರಡೂ ತನಿಖಾ ಸಂಸ್ಥೆಗಳು 'ನಾಯಿಗಳು' ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'ನಂಗೆ ವೋಟು, ನಿಂಗೆ ವ್ಯಾಕ್ಸಿನು': ಬಿಜೆಪಿಯ ಕೊರೊನಾ ಲಸಿಕೆ ಭರವಸೆಗೆ ರಾವತ್ ವ್ಯಂಗ್ಯ
ಮಂದಿನ ಬಾರಿ ಯಾರ ಮನೆಗೆ ದಾಳಿ ಮಾಡಲಿವೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ನಿಮ್ಮ ದಾಳಿಯನ್ನು ಇಷ್ಟಕ್ಕೆ ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಈ ಆಕ್ರೋಶ ಭರಿತ ಟ್ವೀಟ್ ಇದೀಗ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಶಿವಸೇನಾ ಮುಖಂಡ ಪ್ರತಾಪ್ ಸರ್ನಾಯಕ್ ಅವರಿಗೆ ಸೇರಿದ ಕಚೇರಿ ಮತ್ತು ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ)ವು ಇತ್ತೀಚೆಗೆ ದಾಳಿ ನಡೆಸಿತ್ತು. ಇದಕ್ಕೂ ಮುನ್ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್ ಅವರ ಮಗ ವಿಹಾಂಗ್ ಸರ್ನಾಯಕ್ನನ್ನು ಇದೇ ಪ್ರಕರಣ ಸಂಬಧ ಬಂಧಿಸಲಾಗಿತ್ತು.
ಅಲ್ಲದೇ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಪಾಸಣೆ ಮತ್ತು ಪರಿಶೀಲನೆ ಸಹ ನಡೆಸಿದ್ದಾರೆ.
ಇದನ್ನೂ ಓದಿ: ಕೇಂದ್ರದ ಒತ್ತಡದ ರಾಜಕಾರಣಕ್ಕೆ ನಾವು ಜಗ್ಗಲ್ಲ: ಸಂಜಯ್ ರಾವತ್
ಇದನ್ನು ಖಂಡಿಸಿ ಶಿವಸೇನಾ ಮುಖಂಡರು ಕೇಂದ್ರದ ವಿರುದ್ಧ ಕಿಡಿ ಕಾರಿದ್ದರು. ದೇಶದ ಸಂಪತ್ತನ್ನು ಲೂಟಿ ಮಾಡಿದವರು ಅನೇಕರಿದ್ದಾರೆ. ಅಧಿಕಾರಿಗಳು ಇವರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂದು ಇಡಿ ಮತ್ತು ಸಿಬಿಐಗಳ ದಾಳಿ ಖಂಡಿಸಿ ಹೇಳಿಕೆಯನ್ನು ನೀಡಿದ್ದರು.
ಇದರ ನಡುವೆ ಸಂಜಯ್ ರಾವತ್ ಕೂಡ ಇಂದು ಕೇಂದ್ರದ ತನಿಖಾ ಸಂಸ್ಥೆಗಳನ್ನು ನಾಯಿಗಳಿಗೆ ಹೋಲಿಸಿ ಅಪಹಾಸ್ಯ ಮಾಡಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
- — Sanjay Raut (@rautsanjay61) November 28, 2020 " class="align-text-top noRightClick twitterSection" data="
— Sanjay Raut (@rautsanjay61) November 28, 2020
">— Sanjay Raut (@rautsanjay61) November 28, 2020
ಅಕ್ರಮ ಹಣ ಗಳಿಕೆ ಹಾಗೂ ಹಗರಣಗಳಲ್ಲಿ ಭಾಗಿಯಾಗಿರುವ 120 ನಾಯಕರ ದೊಡ್ಡ ಪಟ್ಟಿಯನ್ನೇ ನಾನು ಹಣಕಾಸು ಸಚಿವಾಲಯ ಮತ್ತು ಇಡಿಗೆ ಕಳುಹಿಸಿ ಕೊಡುವೆ. ಇವರನ್ನು ಬಂಧಿಸಿ ಜೈಲಿಗೆ ಅಟ್ಟುತ್ತಾ ಎಂದು ಕೇಂದ್ರಕ್ಕೆ ರಾವತ್ ಸವಾಲು ಹಾಕಿದ್ದಾರೆ.