ETV Bharat / bharat

ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್​ ಪೈಲಟ್​ ಈ ಸಾನಿಯಾ ಮಿರ್ಜಾ..

author img

By

Published : Dec 22, 2022, 4:59 PM IST

ದೇಶದಲ್ಲಿ ಮಹಿಳಾ ಫೈಟರ್​ ಪೈಲಟ್​ಗಳ ಸಂಖ್ಯೆ ಕಡಿಮೆ ಇದೆ. ದೇಶದ ಮೊದಲ ಫೈಟರ್​ ಪೈಲಟ್​ ಆದ ಅವನಿ ಚತುರ್ವೇದಿ ನನಗೆ ಪ್ರೇರಣೆ ಉತ್ತರ ಪ್ರದೇಶದ ಸಾನಿಯಾ ಮಿರ್ಜಾ ಹೇಳಿದ್ದಾರೆ.

ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್​ ಪೈಲಟ್​ ಆದ ಸಾನಿಯಾ ಮಿರ್ಜಾ
sania-mirza-became-indias-first-muslim-woman-fighter-pilot

ಮಿರ್ಜಾಪುರ(ಉತ್ತರ ಪ್ರದೇಶ): ಸಾಧಿಸುವ ಗುರಿ ಇದ್ದರೆ, ಯಾವುದೇ ಕಷ್ಟ ಎಂಬುದು ಇರುವುದಿಲ್ಲ. ಅಂತಹ ಸಾಧನೆಗೆ ಮಾದರಿಯಾಗಿದ್ದಾರೆ. ಟಿವಿ ಮೆಕ್ಯಾನಿಕ್​ ಮಗಳೊಬ್ಬಳು. ಭಾರತೀಯ ವಾಯು ಪಡೆಯ ಎನ್​ಡಿಎ ಪರೀಕ್ಷೆಯಲ್ಲಿ 149ನೇ ಸ್ಥಾನಗಳಿಸುವ ಮೂಲಕ ಮುಸ್ಲಿಂ ಸಮುದಾಯದ ಯುವತಿಯೊಬ್ಬಳು ಫೈಟರ್​​ ಪೈಲಟ್​​ ಆಗಲು ಮುಂದಾಗಿದ್ದಾಳೆ. ಉತ್ತರ ಪ್ರದೇಶದ ಹಾಗೂ ಮುಸ್ಲಿಂ ಸಮುದಾಯದ ಫೈಟರ್​ ಪೈಲಟ್​ ಆಗಿ ಹೊರ ಹೊಮ್ಮಿದ್ದಾರೆ.

ಟಿವಿ ಮ್ಯಾಕಾನಿಕ್​ ಆಗಿರುವ ಶಾಹಿದ್​ ಆಲಿ ಮಗಳು ಸೋನಿಯಾ ಮಿರ್ಜಾ ಈ ಸಾಧನೆ ಮಾಡಿದ್ದಾಳೆ. ಸಾನಿಯಾ ಮಿರ್ಜಾ ಭಾರತದ ವಾಯು ಪಡೆಯ ಮೊದಲ ಮಹಿಳಾ ಮುಸ್ಲಿಂ ಫೈಟರ್​ ಪೈಲಟ್​​ ಎಂಬ ಕೀರ್ತಿಯೂ ಈಕೆಗೆ ಇದೆ. ಸಾನಿಯಾ ಮಿರ್ಜಾ ಸಾಧನೆಗೆ ಪೋಷಕರು ಮತ್ತು ಗ್ರಾಮಸ್ಥರು ಹೆಮ್ಮೆ ಪಟ್ಟಿದ್ದಾರೆ.

ಇನ್ನು, ಈ ಸಾಧನೆ ಕುರಿತು ಮಾತನಾಡಿರುವ ಸಾನಿಯಾ ಇರ್ಜಾ, ದೇಶದಲ್ಲಿ ಮಹಿಳಾ ಫೈಟರ್​ ಪೈಲಟ್​ಗಳ ಸಂಖ್ಯೆ ಕಡಿಮೆ ಇದೆ. ದೇಶದ ಮೊದಲ ಫೈಟರ್​ ಪೈಲಟ್​ ಆದ ಅವನಿ ಚತುರ್ವೇದಿ ನನಗೆ ಪ್ರೇರಣೆ. ಹೈ ಸ್ಕೂಲ್​ ಪಾಸ್​ ಆದ ಬಳಿಕ ನಾನು ಫೈಟರ್​ ಪೈಲಟ್​ ಆಗಬೇಕು ಎಂದು ನಿರ್ಧರಿಸಿದೆ. ನನ್ನ ಗುರಿಯನ್ನು ನಾನೀಗ ಸಾಧಿಸಿದ್ದೇನೆ. ಎನ್​ಡಿಎಯಲ್ಲಿ ಸಿಬಿಎಸ್​ಸಿ ಐಸಿಎಸ್​ ಬೋರ್ಡ್​ನಲ್ಲಿ ಓದಿದವರು ಮಾತ್ರ ಪಾಸ್​ ಆಗುತ್ತಾರೆ ಎಂಬ ನಂಬಿಕೆ ಇದೆ. ಆದರೆ, ಉತ್ತರ ಪ್ರದೇಶ ಬೋರ್ಡ್​ ಮೂಲಕವೇ ನಾನು ಪಾಸ್​ ಆದೆ.

ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್​ ಪೈಲಟ್​ ಆದ ಸಾನಿಯಾ ಮಿರ್ಜಾ
ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್​ ಪೈಲಟ್​ ಆದ ಸಾನಿಯಾ ಮಿರ್ಜಾ

ಮಿರ್ಜಾಪುರ್​ ದೆಹತ್​ ಕೊಟ್ವಾಲಿ ಗ್ರಾಮದ ಸಾನಿಯಾ ಮಿರ್ಜಾ, ಅಲ್ಲಿಯೇ ಪಂಡಿತ್​ ಚಿಂತಾಮಣಿ ದುಬೆ ಇಂಟರ್​ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಗಿಸಿದ್ದಾರೆ. ಇದಾದ ಬಳಿಕ ಗುರುನಾನಕ್​ ಬಾಲಕಿಯರ ಇಂಟರ್​ ಕಾಲೇಜ್​ನಲ್ಲಿ 12ನೇ ತರಗತಿ ಪಾಸ್​ ಆಗಿದ್ದಾರೆ. ಅಲ್ಲದೇ, 12ನೇ ತರಗತಿಯಲ್ಲಿ ಯುಪಿ ಬೋರ್ಡ್​​​ನಲ್ಲಿ ಜಿಲ್ಲೆಗೆ ಟಾಪರ್​ ಆಗಿದ್ದಾರೆ.

2022 ಏಪ್ರಿಲ್​ 10ರಂದು ಎನ್​ಡಿ ಪರೀಕ್ಷೆಯನ್ನು ಸಾನಿಯಾ ಮಿರ್ಜಾ ಎದುರಿಸಿದ್ದರು. ಜೂನ್​ 10ರಂದು ಅವರು ಸಂದರ್ಶನ ಎದುರಿಸಿದ್ದರು. ತಮ್ಮ ಈ ಸಾಧನೆಗೆ ಪೋಷಕರು ಮತ್ತು ಸೆಂಚೂರಿಯನ್​ ಡಿಫೆನ್ಸ್​ ಅಕಾಡೆಮಿ ಕಾರಣ ಎಂದಿದ್ದಾರೆ.

ಇದನ್ನು ಓದಿ: ರಾಮೋಜಿ ಫಿಲ್ಮ್​ಸಿಟಿಗೆ ಮತ್ತೊಂದು ಗರಿಮೆ; ಎಫ್​ಎಸ್​ಎಸ್​ಎಐಯಿಂದ 'ಈಟ್​ ರೈಟ್​ ಕ್ಯಾಂಪಸ್'​ ಪ್ರಮಾಣಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.