ಮೀರಜ್(ಮಹಾರಾಷ್ಟ್ರ): ಬೆಂಗಳೂರಿನಿಂದ ಕೊಲ್ಹಾಪುರಕ್ಕೆ ಅಕ್ರಮವಾಗಿ ಸಾಗಣೆ ಮಾಡ್ತಿದ್ದ ವೇಳೆ ಸಾಂಗ್ಲಿ ಜಿಲ್ಲೆಯ ಮೀರಜ್ನಲ್ಲಿ ಓರ್ವ ಆರೋಪಿ ಸಮೇತ 2.5 ಕೋಟಿ ರೂ. ಮೌಲ್ಯದ ಶ್ರೀಗಂಧ ವಶಕ್ಕೆ ಪಡೆದುಕೊಳ್ಳಲಾಗಿದೆ. ಮೀರಜ್ ಪೊಲೀಸರು ಕಾರ್ಯಾಚರಣೆ ನಡೆಸಿ, ಇದರಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತೆರೆ ಕಂಡಿರುವ 'ಪುಷ್ಪ' ಸಿನಿಮಾದಿಂದ ಶ್ರೀಗಂಧ, ರಕ್ತಚಂದನ ಕಳ್ಳ ಸಾಗಣಿಕೆ ದೇಶಾದ್ಯಂತ ಹೆಚ್ಚು ಸುದ್ದಿಯಾಗ್ತಿದ್ದು, ಇದರ ಬೆನ್ನಲ್ಲೇ ಪೊಲೀಸರು ಒಂದು ಟನ್ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದಾರೆ.
ಸಾಂಗ್ಲಿ ಅರಣ್ಯ ಇಲಾಖೆಯಿಂದ ಶ್ರೀಗಂಧವನ್ನ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೀರಜ್ ಪೊಲೀಸರಿಗೆ ಸಿಕ್ಕಿತ್ತು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೊಲ್ಹಾಪುರದ ಜಕತ್ ನಾಕಾದಲ್ಲಿ ಪರಿಶೀಲನೆ ನಡೆಸಿದ್ದಾರೆ. ಟೆಂಪೋವೊಂದರಲ್ಲಿ ಶ್ರೀಗಂಧ ಪತ್ತೆಯಾಗಿದೆ. ಇದನ್ನ ಬೆಂಗಳೂರಿನಿಂದ ಕೊಲ್ಹಾಪುರಕ್ಕೆ ಅಕ್ರಮವಾಗಿ ತರಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿರಿ: ಫೆ.11ರವರೆಗೂ ರೋಡ್ ಶೋ, ರ್‍ಯಾಲಿಗಳ ಮೇಲೆ ಕೇಂದ್ರ ಚುನಾವಣಾ ಆಯೋಗ ನಿರ್ಬಂಧ
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಂ, ಸುಮಾರು 1 ಟನ್ ಶ್ರೀಗಂಧ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆರೋಪಿ ಯಾಸಿನ್ ಇನಾಯತ್ ಎಂಬಾತನನ್ನು ಬಂಧಿಸಲಾಗಿದೆ. ಶ್ರೀಗಂಧ ಅಕ್ರಮ ಸಾಗಣೆ ಹಿಂದೆ ಅಂತಾರಾಜ್ಯ ಕಾಡುಗಳ್ಳರ ಕೈವಾಡವಿದ್ದು, ಇದೀಗ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ