ನವದೆಹಲಿ : ಕೈಗೆಟುಕುವ ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 5ಜಿ (Galaxy F14 5G) ಸ್ಮಾರ್ಟ್‌ಫೋನ್ ಭಾರತದಲ್ಲಿ ಮುಂದಿನ ವಾರ ಬಿಡುಗಡೆಯಾಗಲಿದೆ. 15,000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಇದು ಲಭ್ಯವಾಗಲಿದೆ ಎಂದು ಉದ್ಯಮ ಮೂಲಗಳು ಸೋಮವಾರ ತಿಳಿಸಿವೆ. ಗ್ಯಾಲಕ್ಸಿ ಎಫ್14 5G 6000mAh ಬ್ಯಾಟರಿ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ನೀಡಲು ಶಕ್ತಿಯುತ 5 nm Exynos ಚಿಪ್‌ಸೆಟ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ. ಕಡಿಮೆ ಬೆಲೆಯ ಫೋನ್ಗಳ ವಿಭಾಗದಲ್ಲಿ ಇದು ಕಂಪನಿಯ ಪ್ರಮುಖ ಉತ್ಪನ್ನವಾಗಲಿದೆ.
ಇದರಲ್ಲಿನ ಆಕ್ಟಾ ಕೋರ್ ಸಿಪಿಯು ಒಂದು ಆರ್ಮ್ ಕೊರೆಟೆಕ್ಸ್-ಎ78 ಡ್ಯುಯಲ್-ಕೋರ್ ಮತ್ತು ಕಾರ್ಟೆಕ್ಸ್-ಎ55 ಹೆಕ್ಸಾ-ಕೋರ್ ಪ್ರೊಸೆಸರ್ಗಳನ್ನು ಹೊಂದಿರಲಿದ್ದು, ಉತ್ತಮ ಕಾರ್ಯಕ್ಷಮತೆಯನ್ನು ಖಾತರಿ ಪಡಿಸಲಿವೆ. ಗ್ಯಾಲಕ್ಸಿ ಎಫ್14 5ಜಿ ಈ ವರ್ಷ ಭಾರತದಲ್ಲಿ ಸ್ಯಾಮ್‌ಸಂಗ್‌ನ ಎರಡನೇ ಎಫ್ ಸರಣಿಯ ಸ್ಮಾರ್ಟ್‌ಫೋನ್ ಆಗಿದೆ. ಕಂಪನಿಯು ಈ ಹಿಂದೆ ಜನವರಿಯಲ್ಲಿ Galaxy F04 ಅನ್ನು ಬಿಡುಗಡೆ ಮಾಡಿತ್ತು.
ಈ ತಿಂಗಳ ಕೊನೆಯಲ್ಲಿ ಈ ಸಾಧನವು ದೇಶಾದ್ಯಂತ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆಯಿದೆ. Galaxy F ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್ ಆನ್‌ಲೈನ್ ಸ್ಟೋರ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟಕ್ಕೆ ಸಿಗಲಿದೆ. ದೇಶದಲ್ಲಿ ತನ್ನ 5G ಅಗ್ರ ಸ್ಥಾನವನ್ನು ಬಲಗೊಳಿಸಲು ಸ್ಯಾಮ್‌ಸಂಗ್ ಈ ವರ್ಷ ಭಾರತದಲ್ಲಿ ಹಲವಾರು 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ವಾರ ದೇಶದಲ್ಲಿ ಎರಡು ಹೊಸ A ಸರಣಿಯ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ A34 5G ಮತ್ತು ಗ್ಯಾಲಕ್ಸಿ A54 5G ಗಳನ್ನು ಬಿಡುಗಡೆ ಮಾಡಲಿದೆ.
ನೋಕಿಯಾ C12 ಲಾಂಚ್: ನೋಕಿಯಾ ತನ್ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ ನೋಕಿಯಾ C12 ಲಾಂಚ್ ಮಾಡಿದೆ. ಇದು Android Go ಎಡಿಷನ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 2GB ವರ್ಚುವಲ್ RAM ಹೊಂದಿದೆ ಮತ್ತು ಎರ್ಗನಾಮಿಕ್ ಡಿಸೈನ್ ಹೊಂದಿದೆ. Unisoc ಚಿಪ್‌ಸೆಟ್ ಮತ್ತು 3000 mAh ಬ್ಯಾಟರಿ ಇದರಲ್ಲಿವೆ.
ಬೆಲೆ ಮತ್ತು ಲಭ್ಯತೆ : ನೋಕಿಯಾ C12 ಡಾರ್ಕ್ ಸಯಾನ್, ಚಾರ್ಕೋಲ್ ಮತ್ತು ಲೈಟ್ ಮಿಂಟ್ ಬಣ್ಣದ ಆಯ್ಕೆಗಳನ್ನು ಹೊಂದಿದೆ. ಸೀಮಿತ ಅವಧಿಯ ಕೊಡುಗೆಯ ಭಾಗವಾಗಿ ಕಂಪನಿಯು Nokia C12 ಅನ್ನು ರೂ 5,999 ಕ್ಕೆ ಮಾರಾಟ ಮಾಡಲಿದೆ. ಮಾರ್ಚ್ 17 ರಿಂದ ಅಮೆಜಾನ್ನಲ್ಲಿ ಗ್ರಾಹಕರು ಆನ್‌ಲೈನ್ ಮೂಲಕ ಸ್ಮಾರ್ಟ್‌ಫೋನ್ ಖರೀದಿಸಬಹುದು. Nokia C12 720x1600 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 6.3-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ.
ಎಂಟ್ರಿ ಲೆವೆಲ್ ಫೋನ್ ಆಗಿರುವ ನೋಕಿಯಾ C12 ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ಸಪೋರ್ಟ್ ಮಾಡುತ್ತದೆ. 8MP ಸಿಂಗಲ್ ಲೆನ್ಸ್ ಹಿಂಬದಿಯ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್‌ಫೋನ್‌ನ ಮುಂಭಾಗದಲ್ಲಿ 5MP ಸೆಲ್ಫಿ ಶೂಟರ್ ಇದೆ. IP52 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ಹೊಂದಿದೆ. ಕೈಗೆಟುಕುವ ಬೆಲೆಯ ಈ ನೋಕಿಯಾ ಸ್ಮಾರ್ಟ್‌ಫೋನ್ 3000 mAh ಬ್ಯಾಟರಿ ಹೊಂದಿದ್ದು, ಬ್ಯಾಟರಿಯನ್ನು ಹೊರಗೆ ತೆಗೆಯಬಹುದಾಗಿದೆ.
ಇದನ್ನೂ ಓದಿ : ಫೇಸ್ಬುಕ್ನಿಂದ ಟ್ವಿಟರ್ ಮಾದರಿಯ ಆ್ಯಪ್ ಶೀಘ್ರ: ಕಾಪಿ ಕ್ಯಾಟ್ ಎಂದ ಮಸ್ಕ್!