ETV Bharat / bharat

ಮಾಜಿ ಸಚಿವ ನವಾಬ್ ಮಲಿಕ್ ವಿರುದ್ಧ ಎಫ್‌ಐಆರ್ ದಾಖಲು - Caste Verification Committee

ನಾರ್ಕೋಟಿಕ್ಸ್‌ ನಿಯಂತ್ರಣ ಬ್ಯೂರೋ(ಎನ್‌ಸಿಬಿ)ದ ಮುಂಬೈ ವಿಭಾಗದ ಮಾಜಿ ನಿರ್ದೇಶಕ ಸಮೀರ್‌ ವಾಂಖೆಡೆ ಅವರು ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ವಿರುದ್ಧ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Sameer Wankhede
ನವಾಬ್ ಮಲಿಕ್
author img

By

Published : Aug 15, 2022, 9:19 AM IST

ಮುಂಬೈ: ಎನ್‌ಸಿಬಿ ಮಾಜಿ ಪ್ರಧಾನ ನಿರ್ದೇಶಕ ಸಮೀರ್ ವಾಂಖೆಡೆ ಅವರು ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ವಿರುದ್ಧ ನಿನ್ನೆ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಲಿತ ವ್ಯಕ್ತಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಮೀರ್ ವಾಂಖೆಡೆ ಅವರ ದೂರಿನ ಅನ್ವಯ ಗೋರೆಗಾಂವ್ ಪೊಲೀಸರು ಐಪಿಸಿ ಸೆಕ್ಷನ್ 500, 501ರ 3 (1)(ಯು) ಅಡಿ್ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಗೋರೆಗಾಂವ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ.

ಎಫ್‌ಐಆರ್‌ನಲ್ಲಿ ವಾಂಖೆಡೆ ಅವರು, 'ನವಾಬ್ ಮಲಿಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಗೂ ಯಾವುದೇ ಪಕ್ಷದ ಸಭೆಯಲ್ಲಿ ನನ್ನ ಕುಟುಂಬವನ್ನು ಪದೇ ಪದೆ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದರು. ಅವರ ಜಾತಿ ಸಂಬಂಧಿತ ಭಾಷಣದಿಂದ ನನ್ನ ಕುಟುಂಬವು ಖಿನ್ನತೆ ಮತ್ತು ಹತಾಶೆಯಿಂದ ಬಳಲುತ್ತಿದೆ' ಎಂದು ಉಲ್ಲೇಖಿಸಿದ್ದಾರೆ.

ಇನ್ನು ಸಮೀರ್‌ ವಾಂಖೆಡೆ ಅವರ ಮೇಲಿದ್ದ ನಕಲಿ ಜಾತಿ ಪ್ರಮಾಣ ಪತ್ರದ ಆರೋಪವನ್ನು ಆಗಸ್ಟ್ 13 ರ ಶನಿವಾರದಂದು ಜಾತಿ ಪರಿಶೀಲನಾ ಸಮಿತಿಯು ತಳ್ಳಿ ಹಾಕಿದೆ. ಸಮೀರ್‌ ಅವರು ಮುಸ್ಲಿಂ ಸಮುದಾಯದವರಲ್ಲ, ಬದಲಾಗಿ ಹಿಂದೂ ಧರ್ಮದ ಪರಿಶಿಷ್ಟ ಜಾತಿಯವರು ಎಂದು ಸಮಿತಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸಮೀರ್‌ ಇಸ್ಲಾಂ ಧರ್ಮದವರಾಗಿದ್ದು, ಸರ್ಕಾರಿ ಕೆಲಸಕ್ಕಾಗಿ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆಂದು ಮಹಾರಾಷ್ಟ್ರದ ಎನ್‌ಸಿಪಿ ನಾಯಕ ನವಾಬ್‌ ಮಲಿಕ್‌ ದೂರು ದಾಖಲಿಸಿದ್ದರು. ಆ ಹಿನ್ನೆಲೆ ಜಾತಿ ಸಮಿತಿ ಸೂಕ್ತ ಪರಿಶೀಲನೆ ನಡೆಸಿದೆ. ಸಮೀರ್‌ ಮತ್ತು ಅವರ ತಂದೆ ಪರಿಶಿಷ್ಟ ಮಹರ್‌ ಜಾತಿಯವರು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೆಡೆ ಚೆನ್ನೈಗೆ ವರ್ಗಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.