ETV Bharat / bharat

ಬ್ಲಾಕ್​ ಪ್ರಮುಖ್​ ಚುನಾವಣೆ : ನಾಮಪತ್ರ ಸಲ್ಲಿಸಲು ಬಂದಿದ್ದ ಮಹಿಳೆಯ ಸೀರೆ ಎಳೆದಾಡಿದ ದುಶ್ಯಾಸನರು!

ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಈ ಅಮಾನವೀಯ ಘಟನೆಯ ವಿಡಿಯೋವನ್ನು ಟ್ವೀಟ್​ ಮಾಡಿದ್ದಾರೆ. 'ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೂಂಡಾಗಳು ಚುನಾವಣೆ ಗೆಲ್ಲಲು ಮಹಿಳೆಗೆ ಅವಮಾನ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ..

author img

By

Published : Jul 9, 2021, 10:49 AM IST

samajwadi workers sari yanked, samajwadi workers sari yanked by some persons, samajwadi workers sari yanked by some persons in Lakhimpur, UP block Pramukh election, UP block Pramukh election news, ಸಮಾಜವಾದಿ ಕಾರ್ಯಕರ್ತೆಯ ಸಿರೆ ಎಳೆದಾಡಿದ ದುಷ್ಟರು, ಲಖೀಂಪುರದಲ್ಲಿ ಸಮಾಜವಾದಿ ಕಾರ್ಯಕರ್ತೆಯ ಸಿರೆ ಎಳೆದಾಡಿದ ದುಷ್ಟರು, ಉತ್ತರಪ್ರದೇಶ ಬ್ಲಾಕ್​ ಪ್ರಮುಖ್​ ಚುನಾವಣೆ, ಉತ್ತರಪ್ರದೇಶ ಬ್ಲಾಕ್​ ಪ್ರಮುಖ್​ ಚುನಾವಣೆ ಸುದ್ದಿ,
ನಾಮಪತ್ರ ಸಲ್ಲಿಸಲು ಬಂದಿದ್ದ ಮಹಿಳೆಯ ಸೀರೆ ಎಳೆದಾಡಿದ ದುಷ್ಟರು

ಲಖನೌ : ಉತ್ತರಪ್ರದೇಶದಲ್ಲಿ ಈಗಿನಿಂದಲೇ ಚುನಾವಣೆ ಪ್ರಕ್ರಿಯೆಗಳು ಗರಿಗೆದರಿವೆ. ನಾಳೆಯಿಂದ ನಡೆಯಲಿರುವ ಬ್ಲಾಕ್​ ಅಭಿವೃದ್ಧಿ ಮಂಡಳಿ ಚುನಾವಣೆ (ಉತ್ತರಪ್ರದೇಶ ಬ್ಲಾಕ್​ ಪ್ರಮುಖ್​ ಚುನಾವಣೆ)ಗೆ ರೂಲಿಂಗ್​​ ಪಾರ್ಟಿ ಬಿಜೆಪಿ ಗೆಲ್ಲಬೇಕೆಂಬ ಗುರಿ ಹೊಂದಿದೆ. ಈಗಾಗಲೇ ಅನೇಕ ಅಭ್ಯರ್ಥಿಗಳು ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಈ ವೇಳೆ ನಗರದ 13 ಕಿ.ಮೀ ದೂರದ ಲಖೀಂಪುರ್​ ಕೇರಿಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.

ವಾರ್ಡ್/ಬ್ಲಾಕ್​​ ಪಂಚಾಯತ್ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಬಂದಿದ್ದ ಸಮಾಜವಾದಿ ಪಕ್ಷದ (ಎಸ್‌ಪಿ) ಮಹಿಳಾ ಅಭ್ಯರ್ಥಿಯ ಸೀರೆಯನ್ನು ಕೆಲವರು ಎಳೆದಾಡಿದ್ದಾರೆ. ಅಷ್ಟೇ ಅಲ್ಲ, ಆಕೆಯ ನಾಮಪತ್ರವನ್ನು ಕಸಿದುಕೊಂಡಿದ್ದಾರೆ. ಈ ರೀತಿ ಮಾಡುವ ಮೂಲಕ ಆಕೆ ನಾಮಪತ್ರ ಸಲ್ಲಿಸದಂತೆ ತಡೆದು ವಿರೋಧಿ ಬಣದ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಲು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗ್ತಿದೆ.

ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಈ ಅಮಾನವೀಯ ಘಟನೆಯ ವಿಡಿಯೋವನ್ನು ಟ್ವೀಟ್​ ಮಾಡಿದ್ದಾರೆ. 'ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೂಂಡಾಗಳು ಚುನಾವಣೆ ಗೆಲ್ಲಲು ಮಹಿಳೆಗೆ ಅವಮಾನ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

ಉತ್ತರಪ್ರದೇಶದ ಮಾಜಿ ಸಿಎಂ ಅಖಿಲೇಶ್​ ಯಾದವ್​ ಹರಿಯಬಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈವರೆಗೆ ಈ ವಿಡಿಯೋಗೆ 14 ಸಾವಿರಕ್ಕಿಂತ ಹೆಚ್ಚು ಲೈಕ್​ಗಳು ಬಂದಿದ್ದು, ನೆಟ್ಟಿಗರು 4 ಸಾವಿರದ 700 ರಿಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.