ETV Bharat / bharat

ಸ್ವದೇಶಿ ತಯಾರಿಕೆಯ ವಿದೇಶಿ ಎಣ್ಣೆಗೆ ಭಾರಿ ಡಿಮ್ಯಾಂಡ್! ಒಂದೇ ವರ್ಷದಲ್ಲಿ ಶೇ.14 ಏರಿಕೆ ಕಂಡ ಮದ್ಯ ಮಾರಾಟ; ಯಾರ ಕೊಡುಗೆ ಎಷ್ಟು? - ಕೋವಿಡ್ ಸಾಂಕ್ರಾಮಿಕ

2022-23ರ ಆರ್ಥಿಕ ವರ್ಷದಲ್ಲಿನ ಮದ್ಯ ಮಾರಾಟದ ಕುರಿತ ಅಂಕಿ-ಅಂಶಗಳನ್ನು ಭಾರತೀಯ ಮದ್ಯ ಕಂಪನಿಗಳ ಒಕ್ಕೂಟ ಬಹಿರಂಗಪಡಿಸಿದೆ.

Liquor sales volume grows 14% in FY23, premium segment over Rs 1,000 grows 48%
ಸ್ವದೇಶಿ ನಿರ್ಮಿತ ವಿದೇಶಿ ಮದ್ಯಕ್ಕೆ ಡಿಮ್ಯಾಂಡ್
author img

By

Published : Jun 27, 2023, 6:43 PM IST

Updated : Jun 27, 2023, 7:01 PM IST

ನವದೆಹಲಿ: ಸ್ವದೇಶಿ ನಿರ್ಮಿತ ವಿದೇಶಿ ಮದ್ಯ (Indian-made foreign liquor - IMFL) ಮಾರಾಟವು 2022-23ರ ಆರ್ಥಿಕ ವರ್ಷದಲ್ಲಿ 385 ಮಿಲಿಯನ್ ಕೇಸ್‌ಗಳಿಗೆ ತಲುಪಿದ್ದು, ಮಾರಾಟದಲ್ಲಿ ಶೇ.14ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ, 750 ಎಂಎಲ್​ ಬಾಟಲಿಯ ಪ್ರತಿ 1,000 ರೂ.ಗಿಂತ ಹೆಚ್ಚಿನ ಪ್ರೀಮಿಯಂ ಉತ್ಪನ್ನಗಳ ಬೆಲೆಯ ಮದ್ಯ ಮಾರಾಟದಲ್ಲಿ ಶೇ.48ರಷ್ಟು ಏರಿಕೆಯಾಗಿದೆ.

ಕೋವಿಡ್-19 ಸಾಂಕ್ರಾಮಿಕಕ್ಕಿಂತ ಮೊದಲು ಎಂದರೆ 2019-20ರ ವಿತ್ತೀಯ ವರ್ಷಕ್ಕೆ ಹೋಲಿಸಿದರೆ, ಸ್ವದೇಶಿ ನಿರ್ಮಿತ ವಿದೇಶಿ ಮದ್ಯ ಮಾರಾಟ ಸುಮಾರು ಶೇ.12ರಷ್ಟು ಹೆಚ್ಚಾಗಿದ್ದು, ಮದ್ಯ ಮಾರಾಟದ ಮೇಲೆ ಕೋವಿಡ್‌ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಉದ್ಯಮವು ಶೇ.8ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಇದು ಸುಮಾರು 412ರಿಂದ 415 ಮಿಲಿಯನ್ ಕೇಸ್​​ಗಳಿಗೆ (ಒಂದು ಕೇಸ್​ ಅಂದರೆ ತಲಾ 9 ಲೀಟರ್ ಮದ್ಯ) ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಮದ್ಯ ತಯಾರಿಕಾ ಕಂಪನಿಗಳ ಒಕ್ಕೂಟ (Confederation of Indian Alcoholic Beverage Companies - CIABC)ದ ವರದಿ ಹೇಳಿದೆ.

ವಿಸ್ಕಿಗೆ ಡಿಮ್ಯಾಂಡ್: ಸಿಐಎಬಿಸಿ ಅಂಕಿ-ಅಂಶದ ಪ್ರಕಾರ, ವಿಸ್ಕಿಗೆ ಡಿಮ್ಯಾಂಡ್ ಹೆಚ್ಚಾಗಿರುವುದು ಕಂಡು ಬರುತ್ತದೆ. 2022-23ನೇ ಸಾಲಿನಲ್ಲಿ ವಿಸ್ಕಿಯು 243 ಮಿಲಿಯನ್ ಕೇಸ್​ಗಳ ನಿರೀಕ್ಷಿತ ಮಾರಾಟ ಕಂಡಿದೆ. ಇದರೊಂದಿಗೆ ಅತಿಹೆಚ್ಚು ಮಾರಾಟದ ಸರಕು ಕೂಡಾ ವಿಸ್ಕಿಯಾಗಿದ್ದು, ಒಟ್ಟು ಉದ್ಯಮದಲ್ಲಿ ಶೇ.63ರಷ್ಟು ಪಾಲು ಹೊಂದಿದೆ. ಹಲವು ವರ್ಷಗಳ ನಂತರ ವಿಸ್ಕಿ ಮತ್ತೆ ತನ್ನ ಡಿಮ್ಯಾಂಡ್ ವೃದ್ಧಿಸಿಕೊಂಡಿದೆ.

ಅಲ್ಲದೇ, ಗ್ರಾಹಕರು ಹೆಚ್ಚಿನ ಬೆಲೆಯ ಬಾಟಲಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರ ಪರಿಣಾಮ, ಕಡಿಮೆ ವಿಭಾಗ ಬೆಲೆಗಳಿಗಿಂತ ಹೆಚ್ಚಿನ ಬೆಲೆಯ ಬಾಟಲಿಗಳ ಮಾರಾಟ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಪ್ರತಿ 750 ಎಂಎಲ್​ ಬಾಟಲಿನ 500 ರೂ.ಗಿಂತ ಹೆಚ್ಚಿನ ಬ್ರಾಂಡ್‌ಗಳ ಪಾಲು ಶೇ.20ರಷ್ಟಿದ್ದರೆ, 1,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಮದ್ಯದಲ್ಲಿ ಶೇ.48ರಷ್ಟು ಏರಿಕೆ ಕಂಡು ಬಂದಿದೆ. ಆದಾಗ್ಯೂ ಇನ್ನೂ ಕಡಿಮೆ ಬೆಲೆಯ ಉತ್ಪನ್ನಗಳೇ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ. 750ಎಂಲ್​ನ ಬಾಟಲಿನ 500 ರೂ.ಗಿಂತ ಕಡಿಮೆ ಬೆಲೆಯ ಬ್ರಾಂಡ್‌ಗಳು ಒಟ್ಟು ಮಾರಾಟದ ಶೇ.79ರಷ್ಟು ಪಾಲು ಹೊಂದಿವೆ.

ಈ ಬಗ್ಗೆ ಸಿಐಎಬಿಸಿ ಡೈರೆಕ್ಟರ್ ಜನರಲ್ ವಿನೋದ್ ಗಿರಿ ಪ್ರತಿಕ್ರಿಯಿಸಿ, "ಕೊರೊನಾ ಸಾಂಕ್ರಾಮಿಕದ ಪ್ರತಿಕೂಲ ಪರಿಣಾಮದ ನಡುವೆ ಮದ್ಯದ ಉದ್ಯಮ ಸಾಗಿದೆ. ಒಂದೆರಡು ವರ್ಷಗಳ ನಿಧಾನಗತಿಯ ನಂತರ ಮತ್ತೆ ವೇಗದ ಮಾರಾಟದ ಬೆಳವಣಿಗೆ ಪಡೆದಿದೆ. ಕೆಲವು ರಾಜ್ಯಗಳನ್ನು ಹೊರತುಪಡಿಸಿ ದೇಶದಾದ್ಯಂತ ಸಾಕಷ್ಟು ಸ್ಥಿರವಾಗಿದೆ" ಎಂದು ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮದ್ಯ ಮಾರಾಟ: 2022- 23ನೇ ಸಾಲಿನಲ್ಲಿ ಪ್ರದೇಶವಾರು ಮದ್ಯ ಮಾರಾಟ ಗಮನಿಸಿದರೆ, ದೇಶದ ಪಶ್ಚಿಮ ಭಾಗದಲ್ಲಿ ಶೇ.32, ಪೂರ್ವ ಭಾಗದಲ್ಲಿ ಶೇ.22, ಉತ್ತರ ಭಾಗದಲ್ಲಿ ಶೇ.16 ಮತ್ತು ದಕ್ಷಿಣ ಭಾಗದಲ್ಲಿ ಮದ್ಯ ಮರಾಟ ಶೇ.9ರಷ್ಟು ಹೆಚ್ಚಳವಾಗಿದೆ. ಒಟ್ಟಾರೆ ಮಾರಾಟದಲ್ಲಿ ದಕ್ಷಿಣ ಭಾಗವೇ ಪ್ರಾಬಲ್ಯ ಹೊಂದಿವೆ. ಇಲ್ಲಿ ಶೇ.58ರಷ್ಟು ಮಾರಾಟದೊಂದಿಗೆ ಅತಿದೊಡ್ಡ ಕೊಡುಗೆ ಇದೆ. ನಂತರದಲ್ಲಿ ಪಶ್ಚಿಮ ಮತ್ತು ಪೂರ್ವ ಭಾಗವು ಶೇ.22ರಷ್ಟು ಸಮಾನ ಕೊಡುಗೆ ಹೊಂದಿದೆ. ಉತ್ತರ ಭಾಗವು ಒಟ್ಟು ಮಾರಾಟದ ಶೇ.16ರಷ್ಟು ಕೊಡುಗೆ ನೀಡಿದೆ. ಏಕೆಂದರೆ ಪಂಜಾಬ್‌ನಂತಹ ರಾಜ್ಯಗಳು ಕಳೆದ ವರ್ಷಕ್ಕಿಂತ ಶೇ.54ರಷ್ಟು ಬೆಳವಣಿಗೆ ಕಂಡಿದೆ.

ಆದರೆ, ದೆಹಲಿಯು ಅಬಕಾರಿ ನೀತಿಯ ಬದಲಾವಣೆಗಳಿಂದ ಮತ್ತು ಅನೇಕ ಬ್ರಾಂಡ್‌ಗಳ ಲಭ್ಯತೆಯ ಅಡೆತಡೆಗಳ ಹೊರತಾಗಿಯೂ ವಾರ್ಷಿಕವಾಗಿ ಶೇ.36ರಷ್ಟು ಆರೋಗ್ಯಕರ ಬೆಳವಣಿಗೆ ಹೊಂದಿದೆ. ಇದೇ ವೇಳೆ ಕೆಲವು ರಾಜ್ಯಗಳಲ್ಲಿ ಮದ್ಯ ಮಾರಾಟ ಕುಸಿದಿದೆ. ತೆಲಂಗಾಣದಲ್ಲಿ ಶೇ.6ರಷ್ಟು, ಉತ್ತರ ಪ್ರದೇಶದಲ್ಲಿ ಶೇ.1ರಷ್ಟು ಮತ್ತು ಉತ್ತರಾಖಂಡದಲ್ಲಿ ಶೇ.3ರಷ್ಟು ಕಡಿಮೆಯಾಗಿದೆ. ಈ ವರ್ಷದಲ್ಲಿ ತೆಲಂಗಾಣ ಮತ್ತು ಉತ್ತರಾಖಂಡದಲ್ಲಿ ಮಾರಾಟವು ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಸಿಐಎಬಿಸಿ ಹೇಳಿದೆ.

ಇದನ್ನೂ ಓದಿ: ಅತಿಯಾದ ಕುಡಿಯುವಿಕೆ ಸ್ನಾಯು ನಷ್ಟವನ್ನುಂಟು ಮಾಡುತ್ತೆ: ಹೊಸ ಅಧ್ಯಯನ

Last Updated : Jun 27, 2023, 7:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.