ETV Bharat / bharat

ಪೆಡಲ್ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿ ಇಂದು ಕ್ಯಾಬ್ ಕಂಪನಿ ಓನರ್: ಬಿಹಾರ ಯುವಕನ ಯಶೋಗಾಥೆ - ಈಟಿವಿ ಭಾರತ ಕನ್ನಡ

ಒಂದು ಕಾಲದಲ್ಲಿ ಜೀವನೋಪಾಯಕ್ಕಾಗಿ ಪೆಡಲ್ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿ ಇಂದು ಆ್ಯಪ್ ಆಧರಿತ ಕ್ಯಾಬ್ ಕಂಪನಿಯ ಓನರ್ ಆಗಿದ್ದಾರೆ. ಇವರ ಕಂಪನಿಯಲ್ಲಿ ಇಂದು 350 ವಾಹನಗಳು ಓಡುತ್ತಿದ್ದು, ಸುಮಾರು 500 ಜನರಿಗೆ ಉದ್ಯೋಗ ನೀಡಿದ್ದಾರೆ.

ಪೆಡಲ್ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿ ಇಂದು ಕ್ಯಾಬ್ ಕಂಪನಿ ಓನರ್: ಬಿಹಾರ ಯುವಕನ ಯಶೋಗಾಥೆ
saharsa-rickshaw-puller-dilkhush-became-cab-company-owner
author img

By

Published : Jan 30, 2023, 8:51 PM IST

ಸಹರ್ಸಾ (ಬಿಹಾರ್): ಬಿಹಾರದ ಸಹರ್ಸಾದ ದಿಲ್​ಖುಷ್ ಹೆಸರಿನ ವ್ಯಕ್ತಿ ಒಂದು ಕಾಲದಲ್ಲಿ ದೆಹಲಿಯ ಬೀದಿಗಳಲ್ಲಿ ಪೆಡಲ್ ರಿಕ್ಷಾ ಎಳೆಯುತ್ತಿದ್ದರು. ಇಂದು ಅವರು ತಮ್ಮದೇ ಆದ ಸ್ಟಾರ್ಟ್ಅಪ್ ಕಂಪನಿಯನ್ನು ಹೊಂದಿದ್ದಾರೆ. ಅವರು ಪಾಟ್ನಾದಲ್ಲಿ ಸ್ಟಾರ್ಟಪ್ ಕ್ಯಾಬ್ ಕಂಪನಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ದಿಲ್​ಖುಷ್ ಯಶಸ್ಸಿನ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ರಿಕ್ಷಾ ಚಾಲಕನಿಂದ ಹಿಡಿದು ಕ್ಯಾಬ್ ಕಂಪನಿಯ ಮಾಲೀಕರಾಗುವವರೆಗೆ ಅವರು ಹೇಗೆ ವ್ಯಾಪಾರ ಬೆಳೆಸಿದರು ಎಂಬುದು ಕುತೂಹಲಕರವಾಗಿದೆ. ದಿಲ್​ಖುಷ್ ಬಿಹಾರದ ಸಹರ್ಸಾ ಜಿಲ್ಲೆಯ ಬಂಗಾವ್ ನಿವಾಸಿ. ಪ್ರಸ್ತುತ 3200 ಕ್ಕೂ ಹೆಚ್ಚು ವಾಹನಗಳು ಅವರ ಆ್ಯಪ್ ಆಧಾರಿತ ಕ್ಯಾಬ್ ಕಂಪನಿಯೊಂದಿಗೆ ಅಟ್ಯಾಚ್ ಆಗಿವೆ.

ದಿಲ್​ಖುಷ್ ಅವರ ಕ್ಯಾಬ್ ಕಂಪನಿಯಲ್ಲಿ 3200 ವಾಹನಗಳಲ್ಲದೆ, ಅಷ್ಟೇ ಸಂಖ್ಯೆಯ ಚಾಲಕರು ಸಹ ಅವರೊಂದಿಗೆ ಸೇರಿಕೊಂಡು ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಈ ವರ್ಷದ ಅಂತ್ಯದೊಳಗೆ 25,000 ವಾಹನಗಳನ್ನು ತನ್ನ ನೆಟ್ವರ್ಕ್​ಗೆ ಸೇರಿಸುವ ಗುರಿಯನ್ನು ಅವರು ಹೊಂದಿದ್ದಾರೆ. ದಿಲ್​ಖುಷ್ ಓದಿದ್ದು ಇಂಟರ್ ಮೀಡಿಯೇಟ್ ವರೆಗೆ ಮಾತ್ರ. ತಂದೆ ಪವನ್ ಬಸ್ ಚಾಲಕರಾಗಿದ್ದರು. ಬಸ್ ಚಾಲಕನ ಮಗ ಬಸ್ ಚಾಲಕನೇ ಆಗುತ್ತಾನೆ ಎಂದು ಹಳ್ಳಿಯ ಜನ ಮಾತನಾಡುತ್ತಿದ್ದರು. ಆದರೆ ದಿಲ್​ಖುಷ್ ಗೆ ಬಸ್ ಡ್ರೈವರ್ ಆಗುವುದು ಕೂಡ ಸುಲಭವಾಗಿರಲಿಲ್ಲ. ಗ್ರಾಮದಲ್ಲಿ ಉದ್ಯೋಗ ಶಿಬಿರ ಆಯೋಜಿಸಿದ್ದಾಗ ಖಾಸಗಿ ಶಾಲೆಯಲ್ಲಿ ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿಯೂ ನೌಕರಿ ಸಿಗಲಿಲ್ಲ.

ಕೊನೆಗೆ ದಿಲ್​ಖುಷ್ ಉದ್ಯೋಗದ ಹುಡುಕಾಟದಲ್ಲಿ ದೆಹಲಿಗೆ ತೆರಳಿದರು. ಆದರೆ ಬಸ್ ಡ್ರೈವರ್ ಕೆಲಸ ಮಾತ್ರ ಸಿಗಲಿಲ್ಲ. ಯಾವುದೇ ದಾರಿ ಕಾಣದೆ ಪೆಡಲ್ ರಿಕ್ಷಾ ಓಡಿಸಲು ಪ್ರಾರಂಭಿಸಿದರು. ಈ ಮಧ್ಯೆ ಕಾಯಿಲೆ ಪೀಡಿತರಾಗಿ ಮನೆಗೆ ಮರಳಿದಾಗ ತಾವು ಏನಾದರೂ ವಿಭಿನ್ನವಾಗಿ ಮಾಡಬೇಕೆಂದು ನಿರ್ಧರಿಸಿದರು. ನಂತರ ಸ್ಟಾರ್ಟಪ್ ಯೋಜನೆಯಡಿ ಬಿಹಾರ ಸರ್ಕಾರದ ಸೀಡ್ ಫಂಡ್ ನಿಂದ ಐದೂವರೆ ಲಕ್ಷ ರೂಪಾಯಿ ಸಾಲ ಪಡೆದು 2016ರ ಅಕ್ಟೋಬರ್ ನಲ್ಲಿ ಆರ್ಯಾಗೋ ಹೆಸರಿನಲ್ಲಿ ಕ್ಯಾಬ್ ಸೇವೆ ಆರಂಭಿಸಿದ್ದರು. ಇದರಲ್ಲಿ ಸುಮಾರು 350 ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಸಹರ್ಸಾದ ಹೊರತಾಗಿ, ಇದು ನೆರೆಯ ಜಿಲ್ಲೆಗಳಾದ ಸುಪೌಲ್ ಮತ್ತು ದರ್ಭಾಂಗದವರೆಗೆ ನೆಟ್‌ವರ್ಕ್ ಹೊಂದಿದೆ.

ಸಹರ್ಸಾ ನಿವಾಸಿ 29 ವರ್ಷದ ದಿಲ್​ಖುಷ್ ಕುಮಾರ್ ಇಲ್ಲಿಯವರೆಗೆ ಎರಡು ಕಂಪನಿಗಳನ್ನು ಆರಂಭಿಸಿದ್ದಾರೆ. ಅವರು 2016 ರಲ್ಲಿ ಆರ್ಯಗೋವನ್ನು ಸ್ಥಾಪಿಸಿದರು. ಅದರ ನಂತರ ರೋಡಬೆಜ್ ಹೆಸರಿನ ಕ್ಯಾಬ್ ಕಂಪನಿಯನ್ನು ಆರಂಭಿಸಿದರು. ಇವರ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದರೆ ಇವತ್ತು ಇವರ ಕಂಪನಿಯ ನೆಟ್ ವರ್ಕ್ ನಲ್ಲಿ ಸುಮಾರು 4000 ಕಾರುಗಳಿವೆ. ಈ ಮೂಲಕ ಸುಮಾರು 500 ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ.

ತಮ್ಮ ಆ್ಯಪ್ ಉದ್ಯಮದ ಬಗ್ಗೆ ಮಾತನಾಡಿದ ದಿಲ್​ಖುಷ್, ಈ ಅಪ್ಲಿಕೇಶನ್‌ನೊಂದಿಗೆ ನೀವು ಕ್ಯಾಬ್ ಬುಕಿಂಗ್ ದರದಲ್ಲಿ 40-60 ಪ್ರತಿಶತದವರೆಗೆ ಉಳಿಸಬಹುದು. ಅಷ್ಟೇ ಅಲ್ಲ ಕ್ಯಾಬ್ ಆಪರೇಟರ್ ಗಳ ಗಳಿಕೆಯೂ 10ರಿಂದ 15 ಸಾವಿರ ಹೆಚ್ಚಾಗಬಹುದು. ಸಾಫ್ಟ್ ವೇರ್ ಇಂಜಿನಿಯರ್ ಗಳ ನೆರವಿನಿಂದ ಇಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದು, ಇದರಲ್ಲಿ ಇತರೆ ಕ್ಯಾಬ್ ಸೇವಾ ಸಂಸ್ಥೆಗಳ ಚಾಲಕರ ಡೇಟಾ ಕೂಡ ಇರಲಿದೆ ಎಂದರು.

ಇದನ್ನೂ ಓದಿ: ಆ್ಯಪ್ ಆಧರಿತ ಸೇವೆಗೆ ಚಾಲನೆ ನೀಡಲು ಬೆಂಗಳೂರು ಮಹಾನಗರ ಆಟೋ ಚಾಲಕರ ಒಕ್ಕೂಟದ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.