ETV Bharat / bharat

ಹರಿಯಾಣ ಸಿಎಂ ನಿವಾಸದ ಎದುರು ಅಕಾಲಿದಳ (ಯು) ಪ್ರತಿಭಟನೆ: ರೈತರ ಮೇಲೆ ಜಲಫಿರಂಗಿ ಪ್ರಯೋಗ

author img

By

Published : Sep 4, 2021, 3:45 PM IST

ಶಿರೋಮಣಿ ಅಕಾಲಿದಳ ಸಂಯುಕ್ತ ಪಕ್ಷದ ನಾಯಕ ಪರಮಿಂದರ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಕರ್ನೈಲ್ ಸಿಂಗ್ ಪೀರ್ ಮೊಹಮ್ಮದ್ ಹರಿಯಾಣ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

SAD United trying to protest against Khattar
ಹರಿಯಾಣ ಸಿಎಂ ನಿವಾಸದ ಎದುರು ಅಕಾಲಿದಳ (ಯು) ಪ್ರತಿಭಟನೆ: ರೈತರ ಮೇಲೆ ಜಲಫಿರಂಗಿ ಪ್ರಯೋಗ

ಚಂಢೀಗಡ(ಹರಿಯಾಣ): ರೈತರ ಮೇಲೆ ಲಾಠಿಚಾರ್ಜ್ ಆರೋಪದ ಹಿನ್ನೆಲೆಯಲ್ಲಿ ಶಿರೋಮಣಿ ಅಕಾಲಿದಳ ಯುನೈಟೆಡ್​ ಪಕ್ಷದ ಕಾರ್ಯಕರ್ತರು ಮತ್ತು ರೈತರು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಸರ್ಕಾರಿ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ, ಚಂಢೀಗಡ ಪೊಲೀಸರು ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಪ್ರಯೋಗಿಸಿದ್ದು, ಬ್ಯಾರಿಕೇಡ್​​ಗಳನ್ನು ಹಾಕಿ ಅವರನ್ನು ತಡೆದಿದೆ. ಈ ಸಂಬಂಧ ಮಾತನಾಡಿದ ಶಿರೋಮಣಿ ಅಕಾಲಿದಳ ಯುನೈಟೆಡ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕರ್ನೈಲ್ ಸಿಂಗ್ ಪೀರ್ ಮೊಹಮ್ಮದ್ ನಾವು ಈಗಾಗಲೇ ಹರಿಯಾಣ ಸರ್ಕಾರದಿಂದ ಕಿರುಕುಳಕ್ಕೆ ಒಳಗಾಗಿದ್ದು, ಈಗ ಪೊಲೀಸರೂ ನಮ್ಮ ಮೇಲೆ ದೌರ್ಜನ್ಯಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಪೊಲೀಸರೂ ಕೂಡಾ ರೈತರ ಮಕ್ಕಳಾಗಿದ್ದು, ರೈತರ ಕಷ್ಟಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ ಇದ್ದರೂ ನಮಗೆ ಸಂಸತ್ತಿನಲ್ಲಿ ಅಥವಾ ಶಾಸಕಾಂಗ ಸಭೆಯಲ್ಲಿ ಮಾತನಾಡಲು ಅವಕಾಶವಿಲ್ಲ. ಸರ್ಕಾರ ಮೌನವಾಗಿದೆ ಎಂದು ಕಿಡಿಕಾರಿದ್ದಾರೆ.

ಮಾಜಿ ಹಣಕಾಸು ಸಚಿವ ಮತ್ತು ಶಿರೋಮಣಿ ಅಕಾಲಿದಳ ಸಂಯುಕ್ತ ಪಕ್ಷದ ನಾಯಕ ಪರಮಿಂದರ್ ಸಿಂಗ್ ಕೂಡಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ಒಂದು ವರ್ಷದ ಹಿಂದೆಯೇ ನಿರ್ಜೀವವಾಗಿದೆ. ರೈತರ ಹೋರಾಟಕ್ಕೆ ಎಲ್ಲ ಸರ್ಕಾರಗಳೂ ಬೆಲೆ ತೆರಲೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ತೆರೆ ಮೇಲೆ ಬರಲು 'ತಲೈವಿ' ಸಜ್ಜು: ಜಯಲಲಿತಾ ಸ್ಮಾರಕಕ್ಕೆ ನಮಿಸಿದ ನಟಿ ಕಂಗನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.