ETV Bharat / bharat

ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಲು NIA ವಿಫಲ : ಜಾಮೀನು ಅರ್ಜಿ ಸಲ್ಲಿಸಿದ ವಾಜೆ

ನಿಗದಿತ ಸಮಯದಲ್ಲಿ ಕೋರ್ಟ್​​ಗೆ ಚಾರ್ಜ್​ಶೀಟ್​ ಸಲ್ಲಿಸಲು ವಿಫಲವಾದ ಹಿನ್ನೆಲೆ, ಸಚಿನ್​ ವಾಜೆ ವಿಶೇಷ ಎನ್​ಐಎ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

Sachin Waze
Sachin Waze
author img

By

Published : Jul 17, 2021, 11:52 AM IST

ಮುಂಬೈ: ತಲೋಜಾ ಜೈಲಿನಲ್ಲಿರುವ ಅಮಾನತುಗೊಂಡ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ, ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಬಂಧನಕ್ಕೊಳಗಾದ 90 ದಿನಗಳಲ್ಲಿ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸುವಲ್ಲಿ ವಿಫಲವಾದ ಹಿನ್ನೆಲೆ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ವಾಜೆ ತಮ್ಮ​ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷ ನ್ಯಾಯಾಲಯವು ಜೂನ್ 9 ರಂದು ಚಾರ್ಜ್‌ಶೀಟ್ ಸಲ್ಲಿಸಲು ಎನ್‌ಐಎಗೆ ಕಾಲಾವಕಾಶ ನೀಡಿತ್ತು. ಆದರೆ ತನಿಖಾ ಸಂಸ್ಥೆ ಚಾರ್ಜ್​ ಶೀಟ್​ ಸಲ್ಲಿಸಲು ವಿಫಲವಾಯಿತು.

ಮುಂಬೈನ ಮುಖೇಶ್ ಅಂಬಾನಿ ನಿವಾಸದ ಬಳಿ ನಿಲ್ಲಿಸಿದ್ದ ಕಾರಿನಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡ ತನಿಖೆಗೆ ಸಂಬಂಧಿಸಿದಂತೆ ಮಾರ್ಚ್‌ನಲ್ಲಿ ವಾಜೆಯನ್ನು ಎನ್​ಐಎ ಬಂಧಿಸಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಾಜೆ, ಮನ್ಸುಖ್​ ಹಿರೆನ್​ ಹತ್ಯೆ ಪ್ರಕರಣದ ಆರೋಪಿಯೂ ಆಗಿದ್ದಾನೆ.

ಮನ್ಸುಖ್ ಹಿರೆನ್ ಅವರ ಸಾವಿನ ಪ್ರಕರಣದಲ್ಲಿ ವಾಜೆ ಹೆಸರು ಕೇಳಿಬಂದ ಹಿನ್ನೆಲೆ ಅಪರಾಧ ಗುಪ್ತಚರ ಘಟಕ ವಿಭಾಗದಿಂದ ಮುಂಬೈ ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ ನಾಗರಿಕ ಸೌಲಭ್ಯ ಕೇಂದ್ರಕ್ಕೆ ವರ್ಗಾಯಿಸಲಾಯಿತು. 2021ರ ಮೇನಲ್ಲಿ ವಾಜೆ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.