ದೇವಾಸ್/ ಸೆಹೋರ್: (ಮಧ್ಯಪ್ರದೇಶ) ಭಾರತೀಯ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ (Sachin Tendulkar) ನಿನ್ನೆ(ಮಂಗಳವಾರ) ಮಧ್ಯಪ್ರದೇಶದ ಬುಡಕಟ್ಟು ಗ್ರಾಮಗಳಿಗೆ ಭೇಟಿ ನೀಡಿ ಮಕ್ಕಳ ಸಮಾಜ ಕಲ್ಯಾಣ ಯೋಜನೆಗಳ (children's social welfare projects) ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಸಚಿನ್ ತೆಂಡೂಲ್ಕರ್ ನನ್ನ ತಂದೆ ದಿ.ಪ್ರೊಫೆಸರ್ ರಮೇಶ್ ತೆಂಡೂಲ್ಕರ್ (Professor Ramesh Tendulkar)ಅವರ ಸ್ಮರಣಾರ್ಥ ವಸತಿ ಶಾಲೆಯನ್ನು ನಿರ್ಮಿಸಲು ಸಹಾಯ ಮಾಡುತ್ತಿದ್ದೇವೆ. ಈ ವಸತಿ ಶಾಲೆಯಲ್ಲಿ 2,300 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳು ನಮ್ಮ ಶಕ್ತಿ ಮತ್ತು ಈ ದೇಶದ ಭವಿಷ್ಯ ಎಂದು ತೆಂಡೂಲ್ಕರ್ ಹೇಳಿದರು.
ತೆಂಡೂಲ್ಕರ್ ಅವರ ಪ್ರತಿಷ್ಠಾನವು ಮಕ್ಕಳಿಗೆ ಪೌಷ್ಟಿಕ ಆಹಾರ ಸೇರಿದಂತೆ ವಿವಿಧ ಯೋಜನೆಗಳೊಂದಿಗೆ ಸಂಬಂಧ ಹೊಂದಿದೆ. ಅತ್ಯಂತ ದುರ್ಬಲ ಬುಡಕಟ್ಟು ಮಕ್ಕಳಿಗಾಗಿ 'ಸೇವಾ ಕುಟೀರ' ಮೂಲಕ ಕ್ರೀಡೆಗಳನ್ನು ಉತ್ತೇಜಿಸುತ್ತಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ind vs nz: ಜೈಪುರದಲ್ಲಿಂದು ಮೊದಲ ಟಿ-20 ಫೈಟ್