ETV Bharat / bharat

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ 'ಮಕರ ಜ್ಯೋತಿ'ಗೆ ಸಕಲ ಸಿದ್ಧತೆ - ಅಯ್ಯಪ್ಪನನ್ನು ತಿರುವಭರಣಂ

ಕೋವಿಡ್​ ಪ್ರೋಟೋಕಾಲ್ ಮಧ್ಯೆ, ಈ ವರ್ಷದ ಮಕರ ಜ್ಯೋತಿ ಉತ್ಸವವು ಹೆಚ್ಚಿನ ಜನಸಂದಣಿಯಿಲ್ಲದೇ ನಡೆಯುತ್ತಿದೆ. ವರ್ಚುಯಲ್ ಕ್ಯೂ ವ್ಯವಸ್ಥೆಯಲ್ಲಿ ನೋಂದಾಯಿಸಿರುವಂತೆ 5000 ಯಾತ್ರಾರ್ಥಿಗಳಿಗೆ ಮಾತ್ರ ದೇವಾಲಯದ ಆವರಣದಲ್ಲಿ ಪ್ರವೇಶಿಸಲು ಅವಕಾಶವಿರುತ್ತದೆ.

ಶಬರಿಮಲೆ
ಶಬರಿಮಲೆ
author img

By

Published : Jan 14, 2021, 12:34 PM IST

ಪಟ್ಟನಂತಿಟ್ಟ: ಕೇರಳದ ಶಬರಿಮಲೆ ಅಯ್ಯಪ್ಪ ಸನ್ನಿಧಾನ ಇಂದು ಮಕರವೀಲಕ್ಕು(ಮಕರ ಜ್ಯೋತಿ)ಗೆ ಸಜ್ಜಾಗುತ್ತಿದೆ. ಸಂಕ್ರಾಂತಿಯ ಈ ಶುಭ ದಿನದಂದು ಸ್ವಾಮಿಗೆ ವಿಶೇಷ ಮಕರಸಂಕ್ರಮಣ ಪೂಜೆಗಳು ಇಂದು ಮುಂಜಾನೆಯಿಂದಲೇ ನಡೆದಿದೆ.

ಅಯ್ಯಪ್ಪನನ್ನು ತಿರುವಭರಣಂ(ಪವಿತ್ರ ಆಭರಣ) ದೊಂದಿಗೆ ಅಲಂಕರಿಸಿ, ಮಹಾದೀಪಾರಾಧನೆ ಬಳಿಕ ಸಂಜೆ 6.40ರ ಸುಮಾರಿಗೆ ಮಕರ ಜ್ಯೋತಿ ದರ್ಶನ ನಡೆಯಲಿದೆ. ಇದಕ್ಕಾಗಿ ಎಲ್ಲ ವ್ಯವಸ್ಥೆಗಳು ಶಬರಿಮಲದಲ್ಲಿ ಪೂರ್ಣಗೊಂಡಿವೆ. ‘ಮಕರ ಜ್ಯೋತಿ’ ದರ್ಶನ ಪಡೆಯಲು ಈ ವರ್ಷ ಸನ್ನಿಧಾನದಿಂದ ಕೆಲವು ಭಕ್ತಾಧಿಗಳಷ್ಟೇ ಸಾಕ್ಷಿಯಾಗಲಿದ್ದಾರೆ.

ಕೋವಿಡ್​ ಪ್ರೋಟೋಕಾಲ್ ಮಧ್ಯೆ, ಈ ವರ್ಷದ ಮಕರ ಜ್ಯೋತಿ ಉತ್ಸವವು ಹೆಚ್ಚಿನ ಜನಸಂದಣಿಯಿಲ್ಲದೇ ನಡೆಯುತ್ತಿದೆ. ವರ್ಚುಯಲ್ ಕ್ಯೂ ವ್ಯವಸ್ಥೆಯಲ್ಲಿ ನೋಂದಾಯಿಸಿರುವಂತೆ 5000 ಯಾತ್ರಾರ್ಥಿಗಳಿಗೆ ಮಾತ್ರ ದೇವಾಲಯದ ಆವರಣದಲ್ಲಿ ಪ್ರವೇಶಿಸಲು ಅವಕಾಶವಿರುತ್ತದೆ. ಹಿಂದಿನ ವರ್ಷಗಳಂತೆ ಮಕರ ಜ್ಯೋತಿ ದರ್ಶನ ಪಡೆಯಲು ಯಾತ್ರಿಕರಿಗೆ ಪಂಚಲಿಮೇಡು, ಪರುಂತುಪಾರ ಮತ್ತು ಪುಲ್ಮೇಡುಗಳಲ್ಲಿ ಶಿಬಿರ ನಡೆಸಲು ಅವಕಾಶವಿಲ್ಲ ನೀಡಲಾಗಿಲ್ಲ.

ಮಕರ ಸಂಕ್ರಮಣ ಪೂಜೆಯ ಸಮಯದಲ್ಲಿ, ತಿರುವಾಂಕೂರು ಅರಮನೆಯಿಂದ ತಂದ ತುಪ್ಪವನ್ನು ಅಯ್ಯಪ್ಪನ ಅಭಿಷೇಕಕ್ಕೆ ಬಳಸಲಾಗುತ್ತದೆ. ಮಕರವಿಲಕ್ಕು ಪೂಜೆಗಳ ಮೊದಲು, ‘ಶುಧಿ ಕ್ರಿಯಕಲ್’ (ಶುದ್ಧೀಕರಣ ವಿಧಿಗಳನ್ನು) ಥಾಂಟ್ರಿ (ವೈದಿಕ ಮುಖ್ಯಸ್ಥ) ಕಂದಾರರು ರಾಜೀವರ ನೇತೃತ್ವದ ಪುರೋಹಿತರು ನಡೆಸುತ್ತಿದ್ದರು. ಜನವರಿ 13 ರಂದು, ಉಚಾ ಪೂಜೆಯ (ಮಧ್ಯಾಹ್ನ ಪೂಜಾ) ಅಂಗವಾಗಿ, ಬಿಂಬಾ ಶೂಧಿ ಕ್ರಿಯಾ (ದೇವತೆಯ ಶುದ್ಧೀಕರಣ) ಸಹ ಮಾಡಲಾಯಿತು.

ಶಬರೀಶನ ಮೇಲೆ ಅಲಂಕರಿಸಬೇಕಾದ ‘ತಿರುವಭರಣಂ’ ಹೊತ್ತ ಮೆರವಣಿಗೆ ಇಂದು ಪಂಡಲಂ ವಲಿಯಕೋಯಿಕ್ಕಲ್ ಧರ್ಮಶಾಸ್ಥ ದೇವಸ್ಥಾನದಿಂದ ತರಲಾಗುತ್ತದೆ.

ಈ ನಂತರ, ಶಾಸ್ತ್ರೋಕ್ತವಾಗಿ ಗರ್ಭಗುಡಿಗೆ ಕೊಂಡೊಯ್ಯಲಾಗುತ್ತದೆ. ಇದು ವೈದಿಕರ ಸಮ್ಮುಖದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ತೆಗೆದುಕೊಂಡು ಹೋಗುತ್ತಾರೆ. ಬಳಿಕ ಸ್ವಾಮಿಗೆ ತಿರುವಭರಣಂನೊಂದಿಗೆ ಅಲಂಕರಿಸಿ ಮಹಾ ಪೂಜೆ ನೆರವೇರುತ್ತದೆ. ಈ ದೀಪಾರಾಧನರಯಾದ ಕೆಲವೇ ನಿಮಿಷಗಳಲ್ಲಿ ಮಕರ ಜ್ಯೋತಿ ದರ್ಶನವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.