ಕೇರಳ : ದೇಶದಲ್ಲಿ ಒಮಿಕ್ರಾನ್ ವೈರಸ್ ವ್ಯಾಪಿಸುವ ಭೀತಿ ಮಧ್ಯೆಯೇ ಶಬರಿಮಲೆಗೆ ಭಕ್ತರ ದಂಡೇ ಆಗಮಿಸುತ್ತಿದೆ. ಶನಿವಾರ ದಾಖಲೆಯ 42 ಸಾವಿರ ಜನರು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂದು ಕೇರಳ ಸರ್ಕಾರ ಮಾಹಿತಿ ನೀಡಿದೆ.
ಮಂಡಲ ಮಹಾವಿರಕ್ಕು ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಭಕ್ತರಿಗಾಗಿ ತೆರೆಯಲಾಗಿದೆ. ಶುಕ್ರವಾರದಂದು 27 ಸಾವಿರಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರೆ, ಶನಿವಾರ ದಾಖಲೆಯ 42 ಸಾವಿರ ಮಂದಿ ಸ್ವಾಮಿಯ ದರ್ಶನಕ್ಕೆ ಬಂದಿದ್ದಾರೆ. ದೇವಸ್ಥಾನ ಪ್ರವೇಶಿಸುವ ಎಲ್ಲಾ ಭಕ್ತಾದಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: Watch- ಇಂಡೋನೇಷ್ಯಾ ಜ್ವಾಲಾಮುಖಿ: ಈವರೆಗೆ 13 ಮಂದಿ ಸಾವು
ಡಿಸೆಂಬರ್ 9ಕ್ಕೆ ವರ್ಚುವಲ್ ಕ್ಯೂ ಪದ್ಧತಿ ಬುಕ್ಕಿಂಗ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಪ್ರತಿದಿನ ಸುಮಾರು 5 ಸಾವಿರ ಭಕ್ತರಿಗೆ ಸ್ಪಾಟ್ ಬುಕ್ಕಿಂಗ್ ಮಾಡಿಕೊಳ್ಳಲು ಕೂಡ ಅನುಮತಿ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.
ಡಿಸೆಂಬರ್ 26ರವರೆಗೆ ಭಕ್ತಾದಿಗಳಿಗಾಗಿ ದೇವಸ್ಥಾನ ತೆರೆದಿರುತ್ತದೆ. ಬಳಿಕ ಸಂಕ್ರಾಂತಿ ಹಬ್ಬದ ಹಿನ್ನೆಲೆ ಮತ್ತೆ ಡಿ.30ರಂದು ದೇಗುಲದ ಬಾಗಿಲು ತೆರೆಯಲಾಗುವುದು. ಜನವರಿ 20ರವರೆಗೂ ಭಕ್ತರ ದರ್ಶನಕ್ಕೆ ಅನುಮತಿ ಸಿಗಲಿದೆ.