ETV Bharat / bharat

ಹೋಟೆಲ್​ನಲ್ಲಿ ಸಿಂಗಾಪುರ ವ್ಯಕ್ತಿಯಿಂದ ರಷ್ಯಾ ಮಹಿಳೆ ಮೇಲೆ ಅತ್ಯಾಚಾರ - ಸಿಂಗಾಪುರ ರಾಯಭಾರಿ ಕಚೇರಿ

ಹಿಮಾಚಲಪ್ರದೇಶದಲ್ಲಿ ಸಿಂಗಾಪುರದ ವ್ಯಕ್ತಿಯೊಬ್ಬ ರಷ್ಯಾದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.

Russian woman raped in Himachal Pradesh  Singapore man arrested in rape case  Foreign woman raped in India  Russian woman files rape case in Himachal Pradesh  Singapore tourist arrested in rape case  russian woman raped by singapore tourist  ರಷ್ಯಾದ ಮಹಿಳೆಯ ಮೇಲೆ ಅತ್ಯಾಚಾರ  ಸಿಂಗಾಪುರ ವ್ಯಕ್ತಿಯಿಂದ ರಷ್ಯಾ ಮಹಿಳೆ ಅತ್ಯಾಚಾರ  Singapore tourist arrested  ಸಿಂಗಾಪುರ ರಾಯಭಾರಿ ಕಚೇರಿ  ಭಾರತದ ವ್ಯಕ್ತಿಯೊಂದಿಗೆ ರಷ್ಯಾ ಮಹಿಳೆ ಮದುವೆ
ಸಿಂಗಾಪುರ ವ್ಯಕ್ತಿಯಿಂದ ರಷ್ಯಾ ಮಹಿಳೆ ಅತ್ಯಾಚಾರ
author img

By

Published : Aug 29, 2022, 2:48 PM IST

ಕುಲ್ಲು(ಹಿಮಾಚಲಪ್ರದೇಶ): ಪ್ರವಾಸಿ ನಗರಿ ಮನಾಲಿಯಲ್ಲಿ ನೆಲೆಸಿರುವ ರಷ್ಯಾದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಮನಾಲಿಗೆ ಪ್ರವಾಸಿಯಾಗಿ ಬಂದಿದ್ದ ಸಿಂಗಾಪುರದ ಪ್ರಜೆಯೊಬ್ಬನ ವಿರುದ್ಧ ಈ ಆರೋಪವಿದೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಸಿಂಗಾಪುರದ ರಾಯಭಾರಿ ಕಚೇರಿಗೂ ಪೊಲೀಸ್ ಆಡಳಿತ ಮಾಹಿತಿ ನೀಡಿದೆ.

ಭಾರತದ ವ್ಯಕ್ತಿಯೊಂದಿಗೆ ರಷ್ಯಾ ಮಹಿಳೆ ಮದುವೆ: ಪೊಲೀಸರ ಪ್ರಕಾರ, ರಷ್ಯಾ ಮೂಲದ ಮಹಿಳೆ ಕುಲ್ಲುವಿನ ಉಜಿ ಕಣಿವೆಯ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಸದ್ಯ ಮಹಿಳೆಯ ಪತಿ ಕೆಲಸದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದಾರೆ. ಸಂತ್ರಸ್ತೆ ತನ್ನ ತಾಯಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮನಾಲಿಯಲ್ಲಿ ವಾಸವಾಗಿದ್ದ ಸಿಂಗಾಪೂರ ನಿವಾಸಿ: ಮನಾಲಿಯಲ್ಲಿ ರಷ್ಯಾದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಆರೋಪಿ ಸಿಂಗಾಪುರದ ಪ್ರಜೆಯಾಗಿದ್ದು, ಹಿಮಾಚಲಕ್ಕೆ ಪ್ರವಾಸಿಯಾಗಿ ಬಂದಿದ್ದ ಎಂದು ಎಎಸ್ಪಿ ಸಾಗರ್ ಚಂದ್ರ ತಿಳಿಸಿದ್ದಾರೆ.

3 ದಿನಗಳ ಹಿಂದೆ ಹೋಟೆಲ್‌ನಲ್ಲಿ ಮಹಿಳೆ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತ ಮಹಿಳೆ ಭಾನುವಾರ ಸಂಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಲೆಕ್ಸಾಂಡರ್ ಲಿ ಜಿಯಾ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ: ಯುಪಿಯಲ್ಲಿ ನಿರ್ಭಯಾ ಮಾದರಿ ಕೇಸ್​: ವಿದ್ಯಾರ್ಥಿನಿ ಮೇಲೆ ಕಾಮುಕರಿಂದ ರೇಪ್​, ಬೆತ್ತಲೆಗೊಳಿಸಿ ಥಳಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.