ಕೋಝಿಕ್ಕೋಡ್ (ಕೇರಳ): ಆತ್ಮಹತ್ಯೆಗೆ ಯತ್ನಿಸಿದ ರಷ್ಯಾ ಯುವತಿ ಪ್ರಕರಣದಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ತನ್ನ ಸ್ನೇಹಿತನಿಂದಲೇ ಈ ಮಹಿಳೆಯು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದಾರೆ. ಕೂರಾಚುಂಡ್‌ನಲ್ಲಿ ವಾಸವಿದ್ದ ಯುವತಿಯು ತನ್ನ ಪ್ರಿಯಕರ ಕಿರುಕುಳ ನೀಡಿದ ಆರೋಪದ ಹಿನ್ನೆಲೆ, ಬುಧವಾರ ರಾತ್ರಿ ತನ್ನ ಜೀವನವನ್ನು ಕೊನೆಗೊಳಿಸಲು ಯತ್ನಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಷ್ಯಾದ ಗೆಳತಿ ಆತ್ಮಹತ್ಯೆಗೆ ಯತ್ನಿಸಿದ ನಂತರ, ಅವರ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮಾಹಿತಿ ಏನಿದೆ?: ಪೊಲೀಸ್ ಮೂಲಗಳ ಪ್ರಕಾರ, ಮೂರು ತಿಂಗಳ ಹಿಂದೆ, ಈ ಮಹಿಳೆಯು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಮಲಯಾಳಿ ಯುವಕನನ್ನು ಭೇಟಿ ಮಾಡಲು ರಷ್ಯಾದಿಂದ ಕೂರಾಚುಂಡ್‌ಗೆ ಬಂದಿದ್ದಳು. ಇನ್‌ಸ್ಟಾಗ್ರಾಮ್ ಮೂಲಕ ತನ್ನ ಗೆಳೆಯನನ್ನು ಭೇಟಿಯಾದ ನಂತರ, ಅವಳು ಮೊದಲು ಕತಾರ್‌ಗೆ ಬಂದಿದ್ದಳು. ಆ ನಂತರ ನೇಪಾಳಕ್ಕೆ ಬಂದು, ಬಳಿಕ ಭಾರತಕ್ಕೆ ಬಂದರು. ನಂತರ ಕೂರಚುಂಡ್‌ನ ಕಳಂಗಲಿಯಲ್ಲಿ ತನ್ನ ಪ್ರಿಯಕರನ ಜೊತೆಗೆ ತಂಗಿದ್ದರು. ಯುವತಿಗೆ ಸ್ನೇಹಿತ ಮಾದಕ ವಸ್ತು ನೀಡಿ, ಬಲವಂತವಾಗಿ ಚಿತ್ರಹಿಂಸೆ ನೀಡಿದ್ದಾನೆ ಎಂದು ತಿಳಿದಿದೆ.
ಮಹಿಳೆ ಚೇತರಿಸಿಕೊಂಡ ನಂತರ ಭಾಷಾ ತಜ್ಞರ ಸಹಾಯದಿಂದ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೆರಂಬ್ರಾ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಘಟನೆಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ನಂತರ ಕೂರಾಚುಂಡ್ ಪೊಲೀಸರು ಬುಧವಾರ ರಾತ್ರಿ ಈ ಮಹಿಳೆಯರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದಿದ್ದು ಹೇಗೆ?: ಕೂರಚುಂಡ್ನಲ್ಲಿ ವಾಸವಿದ್ದ ಯುವತಿಯೊಬ್ಬರು ಬುಧವಾರ ರಾತ್ರಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ. ಪ್ರಿಯಕರನ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿ. ಮೂರು ತಿಂಗಳ ಹಿಂದೆ, ರಷ್ಯಾದ ಯುವತಿ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಮಲಯಾಳಿ ಯುವಕನನ್ನು ಹುಡುಕಿಕೊಂಡು ಕೂರಾಚುಂಡ್ ತಲುಪಿದ್ದಳು. ಆಗ ಕೂರಚುಂಡ್ ತನ್ನ ಗೆಳೆಯನೊಂದಿಗೆ ಕಳಂಗಳಿಯಲ್ಲಿ ವಾಸಿಸುತ್ತಿದ್ದಳು. ಈ ಅವಘಡದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ನಂತರ, ಕೂರಚುಂಡ್ ಪೊಲೀಸರು ಅವರನ್ನು ಅದೇ ದಿನ ರಾತ್ರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಮಹಿಳೆಯ ಕೈಗೆ ಗಾಯವಾಗಿತ್ತು. ಆದರೆ, ಆಕೆ ಅಪಾಯದಿಂದ ಪಾರಾಗಿದ್ದಳು. ಪೆರಂಬ್ರಾ ಡಿವೈಎಸ್ಪಿ ನೇತೃತ್ವದಲ್ಲಿ ಘಟನೆಯ ತನಿಖೆ ಪ್ರಗತಿಯಲ್ಲಿದೆ.
ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು: ಯುವತಿಯ ಕೈಯಲ್ಲಿ ಹಲವು ಗಾಯದ ಗುರುತುಗಳಿವೆ. ಆ ಯುವತಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಆಯೋಗವು ಕೂರಚುಂಡ್ ಪೊಲೀಸ್ ಠಾಣಾಧಿಕಾರಿಯಿಂದ ತುರ್ತು ವರದಿ ಕೇಳಿದೆ. ಘಟನೆಯಲ್ಲಿ ಮಹಿಳೆಯ ಹೇಳಿಕೆಯನ್ನು ತಕ್ಷಣವೇ ರಷ್ಯನ್ ಭಾಷೆ ತಿಳಿದಿರುವವರ ಸಹಾಯದಿಂದ ದಾಖಲಿಸಿಕೊಳ್ಳುವಂತೆ ಆಯೋಗವು ಪೊಲೀಸರಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಮಕ್ಕಳ ಕೊಲೆಗೈದ ಪಾಪಿ ತಾಯಿ : ನಗರಸಭೆ ಸದಸ್ಯ ಸೇರಿ ಆರು ಜನರ ಬಂಧನ