ETV Bharat / bharat

ಕೂಡಂಕುಳಂ ಪರಮಾಣು ಸ್ಥಾವರದ ವಿಜ್ಞಾನಿ ರಷ್ಯಾದ ನಿನ್ ಗೋ ವಾಡಿನ್ ನಿಧನ

ಭಾರತದ ಪರಮಾಣು ವಿದ್ಯುತ್​ ಸ್ಥಾವರದ ವಿಜ್ಞಾನಿ ರಷ್ಯಾದ ಕ್ಲಿನಿನ್ ಗೋ ವಾಡಿನ್ ನಿಧನ ಹೊಂದಿದ್ದಾರೆ. ತೀವ್ರ ಹೃದಯಾಘಾತಕ್ಕೀಡಾಗಿ ಅವರು ಇಹಲೋಕ ತ್ಯಜಿಸಿದರು.

ವಿಜ್ಞಾನಿ ರಷ್ಯಾದ ನಿನ್ ಗೋ ವಾಡಿನ್ ನಿಧನ
ವಿಜ್ಞಾನಿ ರಷ್ಯಾದ ನಿನ್ ಗೋ ವಾಡಿನ್ ನಿಧನ
author img

By

Published : Apr 26, 2023, 9:53 AM IST

ತಿರುನೆಲ್ವೇಲಿ (ತಮಿಳುನಾಡು): ದೇಶದ ಅತಿದೊಡ್ಡ ಪರಮಾಣು ವಿದ್ಯುತ್​ ಯೋಜನೆಯಾದ ಕೂಡಂಕುಳಂನಲ್ಲಿ ಮೂರನೇ ಮತ್ತು ನಾಲ್ಕನೇ ರಿಯಾಕ್ಟರ್‌ಗಳನ್ನು ನಿರ್ಮಿಸುತ್ತಿದ್ದ ರಷ್ಯಾ ವಿಜ್ಞಾನಿಗಳ ಮುಖಂಡರಾಗಿದ್ದ ಕ್ಲಿನಿನ್ ಗೋ ವಾಡಿನ್ (55) ಸೋಮವಾರ ರಾತ್ರಿ 9.30 ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನರಾದರು. ಅನಾರೋಗ್ಯಕ್ಕೀಡಾದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದರು.

ಸೋಮವಾರ ರಾತ್ರಿಯೇ ಅವರು ಅಸ್ವಸ್ಥತೆಯ ಬಗ್ಗೆ ತಿಳಿಸಿದ್ದರು. ಬಳಿಕ ತೀವ್ರ ಹೃದಯಾಘಾತಕ್ಕೀಡಾಗಿದ್ದರು. ಸಿಬ್ಬಂದಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ, ವಿಧಿಯಾಟದ ಮುಂದೆ ವಾಡಿನ್​ ನಿಲ್ಲಲಿಲ್ಲ. ವೈದ್ಯರು ಪರೀಕ್ಷಿಸಿದ ಬಳಿಕ ಸಾವನ್ನಪ್ಪಿರುವುದಾಗಿ ದೃಢಪಡಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ರಷ್ಯಾ ರಾಯಭಾರ ಕಚೇರಿಯ ಮೂಲಕ ಮೃತದೇಹವನ್ನು ಸ್ವದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಮಿಳುನಾಡಿನ ಕೂಡಂಕುಳಂನಲ್ಲಿರುವ ಪರಮಾಣು ವಿದ್ಯುತ್​ ಘಟಕದಲ್ಲಿ 3 ಮತ್ತು 4 ನೇ ಸ್ಥಾವರ ಸ್ಥಾಪನೆಯ ಕಾರ್ಯ ನಡೆಯುತ್ತಿದೆ. ಐದು ವರ್ಷಗಳಿಂದ ಇದು ಅಭಿವೃದ್ಧಿಯಲ್ಲಿದೆ. ವಿವಿಧ ವಿಜ್ಞಾನಿಗಳು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನಿಗಳ ತಂಡಕ್ಕೆ ಕ್ಲಿನಿನ್ ಗೋ ವಾಡಿನ್ ಮುಖ್ಯಸ್ಥರಾಗಿದ್ದರು. ಇದೀಗ ಅವರು ಅಸುನೀಗಿದ್ದು, ದೊಡ್ಡ ನಷ್ಟ ಉಂಟಾಗಿದೆ.

ಪರಮಾಣು ರಿಯಾಕ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಕ್ಲಿನಿನ್ ಗೋ ವಾಡಿನ್ ಅವರ ಸಾವು ವಿಜ್ಞಾನ ಲೋಕಕ್ಕೆ ದೊಡ್ಡ ಆಘಾತ. ಅವರಂತಹ ವಿಜ್ಞಾನಿಯನ್ನು ಕಳೆದುಕೊಂಡಿರುವುದು ಇಡೀ ಕೆಕೆಎನ್‌ಪಿಪಿ ಮತ್ತು ರಷ್ಯಾಕ್ಕೆ ದೊಡ್ಡ ಷ್ಟವಾಗಿದೆ ಎಂದು ಕೂಡಂಕುಳಂ ಪರಮಾಣು ವಿದ್ಯುತ್ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪರಮಾಣು ಸ್ಥಾವರದ ಬಗ್ಗೆ ಮಾಹಿತಿ: ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಕೂಡಂಕುಳಂನಲ್ಲಿ ನೆಲೆಗೊಂಡಿದೆ. ಇದು ಭಾರತದ ಅತಿದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾಗಿದೆ. ಕೆಕೆಎನ್​ಪಿಪಿಯಲ್ಲಿ ವಿವಿಇಆರ್​-1000 ಸಾಮರ್ಥ್ಯ ಆರು ರಿಯಾಕ್ಟರ್‌ಗಳನ್ನು ರಷ್ಯಾದ ಕಂಪನಿಯಾದ ಅಟೋಮಸ್ಟ್ರಾಯ್​​ಎಕ್ಸಪೋರ್ಟ್​ ಮತ್ತು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಸಹಯೋಗದೊಂದಿಗೆ ನಿರ್ಮಿಸಲು ಯೋಜಿಸಲಾಗಿದೆ. ಜೊತೆಗೆ ಇಲ್ಲಿ 6 ಸಾವಿರ ಮೆಗಾವ್ಯಾಟ್​ ವಿದ್ಯುತ್ ತಯಾರಿಸುವ ಗುರಿಯನ್ನೂ ಹೊಂದಲಾಗಿದೆ.

ಲಸಿಕೆ ಕಂಡುಹಿಡಿದ ವಿಜ್ಞಾನಿ ಸಾವು: ಕೊರೊನಾ ಮಾರಿಗೆ ರಷ್ಯಾ ಸ್ಪುಟ್ನಿಕ್​ ಲಸಿಕೆಯನ್ನು ಕಂಡುಹಿಡಿದಿದೆ. ಅದರ ಸಂಶೋಧನೆಯಲ್ಲಿ ಮಹತ್ತರ ಪಾತ್ರವಹಿಸಿದ್ದ ಪ್ರಮುಖ ವಿಜ್ಞಾನಿಯೊಬ್ಬರು ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು. ಇದು ಸಹಜ ಸಾವೋ ಅಥವಾ ಕೊಲೆಯೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಕೋವಿಡ್‌ ಲಸಿಕೆಯಾದ ‘ಸ್ಪುಟ್ನಿಕ್‌’ಅನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಷ್ಯಾ ವಿಜ್ಞಾನಿ ಆ್ಯಂದ್ರೆ ಬೊಟಿಕೋವ್‌ ಅವರ ಶವ ನಿಗೂಢ ರೀತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿದೆ. ಇದು ಅವರನ್ನು ಕೊಲೆ ಮಾಡಿರುವ ಶಂಕೆ ಇದೆ. ಮೂಲಗಳ ಪ್ರಕಾರ ಬೊಟಿಕೋವ್‌ ಇಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಕುತ್ತಿಗೆಗೆ ಬೆಲ್ಟ್‌ ಬಿಗಿದು ಅವರನ್ನು ಗುರುವಾರ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ಮಾಡಿದೆ.

ಓದಿ: ಗುಟ್ಕಾ, ತಂಬಾಕು ಉತ್ಪನ್ನಗಳ ಮೇಲೆ ನಿಷೇಧ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.