ETV Bharat / bharat

ಭಿನ್ನಾಭಿಪ್ರಾಯ ಶಮನಕ್ಕೆ ಮಾತುಕತೆಯೇ ಮದ್ದು: ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಜತೆ ಜೈಶಂಕರ್ ಮಹತ್ವದ ಚರ್ಚೆ - ಭಾರತ ಮತ್ತು ರಷ್ಯಾದ ದ್ವಿಪಕ್ಷೀಯ ಸಭೆ

ಭಾರತವು ಯಾವಾಗಲೂ ಯಾವುದೇ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಾರ್ಗದ ಮೂಲಕವೇ ಪರಿಹರಿಸಿಕೊಳ್ಳುವ ಪರವಾಗಿಯೇ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಪ್ರತಿಪಾದಿಸಿದ್ದಾರೆ.

ಜೈಶಂಕರ್-ಸರ್ಗೆ ಲಾವ್ರೊವ್ ಮಾತುಕತೆ
Russian FM Sergey Lavrov meets EAM Jaishankar
author img

By

Published : Apr 1, 2022, 5:24 PM IST

ನವದೆಹಲಿ: ಉಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧದ ನಡುವೆಯೇ ಶುಕ್ರವಾರ ಭಾರತ ಮತ್ತು ರಷ್ಯಾದ ದ್ವಿಪಕ್ಷೀಯ ಸಭೆ ನಡೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ಗೆ ಲಾವ್ರೊವ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಈ ಮೂಲಕ ಉಭಯ ರಾಷ್ಟ್ರಗಳ ಮಧ್ಯದ ವ್ಯಾಪಾರ ಹಾಗೂ ತೈಲ ಖರೀದಿ ಸಂಬಂಧ ಉನ್ನತ ಮಟ್ಟದ ಸಮಾಲೋಚನೆ ನಡೆಸಲಾಗಿದೆ.

ರೂಪಾಯಿ- ರೂಬಲ್​​​ ನಡುವೆ ವ್ಯವಹಾರ: ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ ಮೊದಲ ಬಾರಿಗೆ ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ಗೆ ಲಾವ್ರೊವ್ ಭಾರತ ಪ್ರವಾಸ ಕೈಗೊಂಡಿದ್ದರು. ಶುಕ್ರವಾರ ಹೈದರಾಬಾದ್ ಭವನದಲ್ಲಿ ಎಸ್.ಜೈಶಂಕರ್ ಮತ್ತು ಸರ್ಗೆ ಲಾವ್ರೊವ್ ಮಾತುಕತೆ ನಡೆಸಿದರು. ರಷ್ಯಾದಿಂದ ಹೆಚ್ಚಿನ ಪ್ರಮಾಣದ ತೈಲವನ್ನು ಭಾರತವು ರಿಯಾಯಿತಿಯಲ್ಲಿ ಖರೀದಿಸುವುದು ಮತ್ತು ದ್ವಿಪಕ್ಷೀಯ ವ್ಯಾಪಾರಕ್ಕಾಗಿ ರೂಬಲ್ - ರೂಪಾಯಿ ವ್ಯವಸ್ಥೆಯನ್ನು ಹೊಂದಲು ಎರಡೂ ರಾಷ್ಟ್ರಗಳು ಉತ್ಸುಕವಾಗಿರುವ ನಿಟ್ಟಿನಲ್ಲಿ ಚರ್ಚಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಮಾತನಾಡಿ, ಭಾರತವು ಯಾವಾಗಲೂ ಯಾವುದೇ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಾರ್ಗದ ಮೂಲಕವೇ ಪರಿಹರಿಸಿಕೊಳ್ಳುವ ಪರವಾಗಿಯೇ ಇದೆ ಎಂದು ಪ್ರತಿಪಾದಿಸಿದರು. ಅಲ್ಲದೇ, ಇಂದು ನಮ್ಮ ಸಭೆಯು ಸಾಂಕ್ರಾಮಿಕ ರೋಗವನ್ನು ಹೊರತುಪಡಿಸಿ ಅಂತರರಾಷ್ಟ್ರೀಯ ಮಟ್ಟದ ಕಷ್ಟಕರ ವಾತಾವರಣದಲ್ಲಿ ನಡೆಯುತ್ತಿದೆ. ನಮ್ಮ ಕಾರ್ಯಸೂಚಿಯನ್ನು ವಿಸ್ತರಿಸುವ ಮೂಲಕ ನಮ್ಮ ಸಹಕಾರವನ್ನು ವೈವಿಧ್ಯಗೊಳಿಸಿದ್ದೇವೆ ಎಂದು ಹೇಳಿದರು.

ಸ್ನೇಹವೇ ನಮ್ಮ ಸಕ್ಸಸ್​: ಸಭೆಗೂ ಮುನ್ನ ಮಾತನಾಡಿದ ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ಗೆ ಲಾವ್ರೊವ್, ಭಾರತ ಮತ್ತು ರಷ್ಯಾದ ದ್ವಿಪಕ್ಷೀಯ ಸಂಬಂಧಗಳ ಇತಿಹಾಸದಲ್ಲಿ 'ಸ್ನೇಹವೇ ಕೀವರ್ಡ್' ಆಗಿದೆ ಎಂದು ವರ್ಣಿಸಿದರು. ಉಕ್ರೇನ್‌ನಲ್ಲಿ ಉಂಟಾಗಿರುವ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಸಮಸ್ಯೆಯನ್ನು ಅರ್ಥಪೂರ್ಣವಾಗಿ ಕಡಿಮೆ ಮಾಡಲು ನಮ್ಮ ಪಾಶ್ಚಿಮಾತ್ಯ ಸಹೋದ್ಯೋಗಿ ರಾಷ್ಟ್ರಗಳು ಬಯಸುತ್ತಿವೆ. ನಮ್ಮ ನಿಲುವು ನಿಮಗೆ ತಿಳಿದಿದೆ. ನಾವು ಯಾವುದನ್ನೂ ಮರೆ ಮಾಚುವುದಿಲ್ಲ. ಈ ಪರಿಸ್ಥಿತಿಯನ್ನು ಸಂಪೂರ್ಣ ನಿಜವಾದ ಅರ್ಥದಲ್ಲಿ ಭಾರತವು ತೆಗೆದುಕೊಳ್ಳುತ್ತಿದೆ. ಇದನ್ನು ನಾವು ಪ್ರಶಂಸಿಸುತ್ತೇವೆ. ಆದರೆ, ಏಕಪಕ್ಷೀಯ ರೀತಿಯಲ್ಲಿ ಅಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ರಷ್ಯಾ ಬಹು ಧ್ರುವೀಯ ಜಗತ್ತನ್ನು ನೋಡುತ್ತಿದೆ. ಭಾರತ - ರಷ್ಯಾ ಸಂಬಂಧ ಸುಸ್ಥಿರ ಮತ್ತು ಸಮತೋಲಿತವಾಗಿದೆ ಎಂದು ಸರ್ಗೆ ಲಾವ್ರೊವ್ ಹೇಳಿದರು. ಇತ್ತ, ಜೈಶಂಕರ್ ಅವರು ಭಾರತ - ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಅನೇಕ ಕ್ಷೇತ್ರಗಳಲ್ಲಿ ಬೆಳೆಯುತ್ತಲೇ ಇವೆ. ಎರಡು ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆವಾಗಿ 75ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ. ಹೀಗಾಗಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳಲ್ಲಿ ಈ ವರ್ಷ ಪ್ರಮುಖ್ಯವಾಗಿದೆ ಎಂದು ಹೇಳಿದರು.

ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆಯೂ ಸಚಿವರು ಚರ್ಚಿಸಿದರು. ರಷ್ಯಾದ ಸಚಿವ ಲಾವ್ರೊವ್ ಎರಡು ದಿನಗಳ ಚೀನಾ ಪ್ರವಾಸ ಮುಗಿಸಿ ಗುರುವಾರ ಸಂಜೆ ಭಾರತಕ್ಕೆ ಆಗಮಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಭಾರತಕ್ಕೆ 3ದಿನ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ: ಕಾಶಿಯಲ್ಲಿ ಸ್ವಾಗತಕೋರಲಿದ್ದಾರೆ ಯೋಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.