ಮಾಸ್ಕೋ: ರಷ್ಯಾದ ಯುದ್ಧನೌಕೆ ಅಡ್ಮಿರಲ್ ಗೋರ್ಶ್ಕೋವ್ ವೈಟ್ ಸಮುದ್ರದಿಂದ ಸಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಕ್ಷಿಪಣಿಯು 400 ಕಿ.ಮೀ ದೂರದಲ್ಲಿರುವ ಗುರಿಯನ್ನು ಯಶಸ್ವಿಯಾಗಿ ಛೇದಿಸಿದೆ ಎಂದು ಮಾಹಿತಿ ನೀಡಿದೆ. ಅಡ್ಮಿರಲ್ ಗೋರ್ಶ್ಕೋವ್ ಹಲವಾರು ಬಾರಿ ಯುದ್ಧನೌಕೆ ಮತ್ತು ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಯಿಂದ ಹಾರಿಸುವ ಮೂಲಕ ಪ್ರಯೋಗಕ್ಕೆ ಒಳಪಡಿಸಲಾಗಿತ್ತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಕ್ಷಿಪಣಿಯ ಪರೀಕ್ಷೆಯು ಮುಕ್ತಾಯ ಹಂತದಲ್ಲಿದೆ, 2022 ರಲ್ಲಿ ನೌಕಾಪಡೆಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.