ETV Bharat / bharat

ಅಮೆರಿಕ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಭಾರತೀಯ ಮೂಲದ ರೂಪಾಲಿ ನೇಮಕ - ಅಮೆರಿಕ ಸಂಸತ್ತು

ಅಮೆರಿಕದ ಪ್ರಮುಖ ನ್ಯಾಯಾಲಯವೊಂದರ ನ್ಯಾಯಾಧೀಶರಾಗಿ ಭಾರತೀಯ ಅಮೆರಿಕನ್ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಸೆನೇಟ್​ನ ಮತದಾನದ ಮೂಲಕ ವಕೀಲೆ ರೂಪಾಲಿ ದೇಸಾಯಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

ಅಮೆರಿಕ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಭಾರತೀಯ ಮೂಲದ ರೂಪಾಲಿ ನೇಮಕ
Rupali of Indian origin appointed as US court judge
author img

By

Published : Aug 6, 2022, 12:16 PM IST

ವಾಷಿಂಗ್ಟನ್: ಭಾರತೀಯ ಅಮೆರಿಕನ್ ವಕೀಲೆ ರೂಪಾಲಿ ಎಚ್​. ದೇಸಾಯಿ ಅವರನ್ನು ಒಂಬತ್ತನೇ ಸರ್ಕ್ಯೂಟ್​ನ ಅಮೆರಿಕ ಅಪೀಲುಗಳ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲು ಅಮೆರಿಕ ಸಂಸತ್ತು ಅನುಮೋದನೆ ನೀಡಿದೆ. ಈ ಪ್ರಭಾವಶಾಲಿ ಹುದ್ದೆಗೆ ನೇಮಕವಾದ ದಕ್ಷಿಣ ಏಷ್ಯಾದ ಪ್ರಥಮ ವ್ಯಕ್ತಿ ಇವರಾಗಲಿದ್ದಾರೆ.

ಈ ಕುರಿತು ಸಂಸತ್ತಿನಲ್ಲಿ ನಡೆದ ಮತದಾನದಲ್ಲಿ 67-29 ಮತಗಳಿಂದ ರೂಪಾಲಿ ಆಯ್ಕೆಯಾದರು. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಒಂಬತ್ತನೇ ಸರ್ಕ್ಯೂಟ್, ಅಪೀಲುಗಳ 13 ನ್ಯಾಯಾಲಯಗಳ ಪೈಕಿ ಅತಿ ದೊಡ್ಡದಾಗಿದೆ. ಇದು 9 ರಾಜ್ಯಗಳು ಮತ್ತು 2 ಪ್ರಾಂತ್ಯಗಳ ವ್ಯಾಪ್ತಿಯನ್ನು ಹೊಂದಿದ್ದು, 29 ಸಕ್ರಿಯ ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜಕೀಯ ಮತ್ತು ಸೈದ್ಧಾಂತಿಕ ವಲಯ, ರಾಜ್ಯಗಳ ನ್ಯಾಯಾಧೀಶರು, ಕಾನೂನು ಜಾರಿ ಅಧಿಕಾರಿಗಳು ಮತ್ತು ಮೂರು ವಿಭಿನ್ನ ಅಗ್ನಿಶಾಮಕ ಪ್ರಾಧಿಕಾರ ಅಧಿಕಾರಿಗಳು ರೂಪಾಲಿ ದೇಸಾಯಿ ಅವರ ನೇಮಕವನ್ನು ಶ್ಲಾಘಿಸಿದ್ದಾರೆ. ವಕೀಲೆಯಾಗಿ ಒಟ್ಟಾರೆ 16 ವರ್ಷಗಳ ವೃತ್ತಿ ಅನುಭವ ಹೊಂದಿರುವ ಇವರನ್ನು ಒಂಬತ್ತನೇ ಸರ್ಕ್ಯೂಟ್​ಗೆ ನೇಮಕ ಮಾಡಿದ್ದು ಅತ್ಯಂತ ಸೂಕ್ತವಾಗಿದೆ ಎಂದು ಸೆನೇಟ್ ಆಡಳಿತಾರೂಢ ಪಕ್ಷದ ವಿಪ್ ಡಿಕ್ ಡರ್ಬಿನ್ ಬಣ್ಣಿಸಿದ್ದಾರೆ.

ದೇಸಾಯಿ ಅವರ ಅನುಭವದಲ್ಲಿ ಯಾವುದೇ ಕೊರತೆ ಕಾಣುವುದಿಲ್ಲ. ಅರಿಜೋನಾ ಸ್ಕೂಲ್ ಆಫ್ ಲಾ ನಿಂದ ಪದವಿ ಪಡೆದ, ನ್ಯಾಯಾಧೀಶ ಮೇರಿ ಶ್ರೋಡರ್​ ಅವರಿಗೆ ಕ್ಲರ್ಕ್ ಆಗಿ ಕೆಲಸ ಮಾಡಿರುವ ಇವರು ಒಂಬತ್ತನೇ ಸರ್ಕ್ಯೂಟ್​ನ ಪ್ರಥಮ ಮಹಿಳಾ ನ್ಯಾಯಾಧೀಶರಾಗುತ್ತಿದ್ದಾರೆ. ಇವರು ತಮ್ಮ ವೃತ್ತಿ ಜೀವನದ ಪ್ರತಿಯೊಂದು ಹಂತದಲ್ಲಿಯೂ ಉನ್ನತ ಸಾಧನೆ ಮಾಡಿದ್ದಾರೆ ಎಂದು ಸೆನೆಟ್ ಮತದಾನಕ್ಕೂ ಮುಂಚೆ, ಆಡಳಿತಾರೂಢ ಸೆನೆಟ್ ನಾಯಕ ಚಕ್ ಶೂಮರ್ ಹೇಳಿದರು.

ದೇಸಾಯಿ ಅರಿಜೋನಾದ ಉನ್ನತ ಚುನಾವಣಾ ವಕೀಲರಲ್ಲಿ ಒಬ್ಬರಾಗಿದ್ದು, 2020 ರಲ್ಲಿ ತನ್ನ ರಾಜ್ಯದ ಚುನಾವಣೆಗಳನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಅನಾಥ ಮಕ್ಕಳಿಂದ ಹಿಡಿದು ಸಾರ್ವಜನಿಕ ಶಾಲೆಗಳ ಮಕ್ಕಳವರೆಗೆ ಎಲ್ಲರಿಗಾಗಿ ಇವರು ಹೋರಾಡಿದ್ದರು ಎಂದು ಅವರು ತಿಳಿಸಿದರು.

ಇದನ್ನು ಓದಿ:ವಿಮಾನಯಾನ ಕ್ಷೇತ್ರದಲ್ಲಿ ಪೈಲಟ್​ ತಾಯಿ-ಮಗಳಿಂದ ಹೀಗೊಂದು ಇತಿಹಾಸ ಸೃಷ್ಟಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.