ETV Bharat / bharat

ವಿಧಾನ ಪರಿಷತ್​ ಚುನಾವಣೆ: ಕೇವಲ ಒಂದೇ ಸ್ಥಾನದಲ್ಲಿ ಶಿವಸೇನೆ ಸ್ಪರ್ಧೆ!

ಕಾಂಗ್ರೆಸ್ ಪಕ್ಷ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ವಿಕಾಸ್ ಅಘಾಡಿ (ಎಂವಿಎ) ತಲಾ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ.

MVA announces candidates list, ruling MVA announces candidates list for maharashtra legislative council polls, maharashtra legislative council polls, maharashtra legislative council polls 2020, maharashtra legislative council polls 2020 news, ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಎಂವಿಎ, ಮಹಾರಾಷ್ಟ್ರ ವಿಧಾನ ಪರಿಷತ್​ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಎಂವಿಎ, ಮಹಾರಾಷ್ಟ್ರ ವಿಧಾನ ಪರಿಷತ್​ ಚುನಾವಣೆ, ಮಹಾರಾಷ್ಟ್ರ ವಿಧಾನ ಪರಿಷತ್​ ಚುನಾವಣೆ 2020, ಮಹಾರಾಷ್ಟ್ರ ವಿಧಾನ ಪರಿಷತ್​ ಚುನಾವಣೆ 2020 ಸುದ್ದಿ,
ವಿಧಾನ ಪರಿಷತ್​ ಚುನಾವಣೆಯಲ್ಲಿ ಕೇವಲ ಒಂದೇ ಸ್ಥಾನದಿಂದ ಶಿವಸೇನೆ ಸ್ಪರ್ಧೆ
author img

By

Published : Nov 20, 2020, 12:34 PM IST

ಮುಂಬೈ (ಮಹಾರಾಷ್ಟ್ರ): ವಿಧಾನ ಪರಿಷತ್ತಿನ ಐದು ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಡಿಸೆಂಬರ್ 1 ರ ದ್ವೈವಾರ್ಷಿಕ ಚುನಾವಣೆ ನಡೆಯಲಿದ್ದು, ಐದು ಅಭ್ಯರ್ಥಿಗಳ ಪಟ್ಟಿಯನ್ನು ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ಬಿಡುಗಡೆ ಮಾಡಿದೆ.

ವಿಧಾನ ಪರಿಷತ್​ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ವಿಕಾಸ್ ಅಘಾಡಿ (ಎಂವಿಎ) ತಲಾ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಈ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ.

ಶಿಕ್ಷಕರ ಕ್ಷೇತ್ರ ಅಮರಾವತಿಯಲ್ಲಿ ಚುನಾವಣೆಯಲ್ಲಿ ನಿಲ್ಲಿಸಲು ಶಿವಸೇನೆಯ ಶ್ರೀಕಾಂತ್ ದೇಶಪಾಂಡೆಯನ್ನು ಆಯ್ಕೆ ಮಾಡಿದ್ದಾರೆ. ಎನ್‌ಸಿಪಿಯ ಅರುಣ್ ಲಾಡ್ ಮತ್ತು ಸತೀಶ್ ಚವಾಣ್ ಪುಣೆ ಮತ್ತು ಔರಂಗಾಬಾದ್ ಪದವಿ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್​ನ ಜಯಂತ್ ಅಸ್ಗಾಂವ್ಕರ್ ಮತ್ತು ಅಭಿಜಿತ್ ವಂಜಾರಿ ಪುಣೆ ಶಿಕ್ಷಕರ ಕ್ಷೇತ್ರ ಮತ್ತು ನಾಗ್ಪುರ ಪದವೀಧರ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ನವೆಂಬರ್ 2 ರಂದು ಭಾರತ ಚುನಾವಣಾ ಆಯೋಗವು (ಇಸಿಐ) ಸದಸ್ಯರ ಅವಧಿ ಪೂರ್ಣಗೊಂಡ ನಂತರ ಜುಲೈ 19 ರಿಂದ ಖಾಲಿ ಇದ್ದ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಐದು ಸ್ಥಾನಗಳಿಗೆ ಚುನಾವಣೆ ಘೋಷಿಸಿತ್ತು.

ಡಿಸೆಂಬರ್ 1 ರಂದು ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ ಎಂದು ಇಡಿ ಪ್ರಕಟಿಸಿದೆ.

ಚವಾಣ್​ ಸತೀಶ್ ಭನುದಸ್ರಾವ್, ಚಂದ್ರಕಾಂತ್ ಬಚು ಪಾಟೀಲ್, ಅನಿಲ್ ಮಧುಕರ್ ಸೋಲೆ, ಶ್ರೀಕಾಂತ್ ದೇಶಪಾಂಡೆ ಮತ್ತು ದತ್ತಾತ್ರೇಯ ಅಚ್ಯುತ್ರಾವ್ ಸಾವಂತ್ ಸೇರಿ ಐದು ಸ್ಥಾನಗಳು ಖಾಲಿಯಾಗಿದ್ದು, ಈ ಐದು ಸ್ಥಾನಗಳಿಗೆ ಡಿಸೆಂಬರ್​ 1ರಂದು ಚುನಾವಣೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.