ಚೆನ್ನೈ(ತಮಿಳುನಾಡು): ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಸ್ಥಳೀಯ ಚುನಾವಣೆ ನಡೆಯುತ್ತಿದ್ದು, ಆಡಳಿತ ಪಕ್ಷ ಡಿಎಂಕೆ ಭರ್ಜರಿ ಜಯ ಸಾಧಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದರ ಮಧ್ಯೆ ವಿಚಿತ್ರಕಾರಿ ಘಟನೆವೊಂದು ನಡೆದಿದ್ದು, ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಕೇವಲ ಒಂದೇ ಒಂದು ವೋಟ್ ಪಡೆದುಕೊಂಡಿದ್ದಾರೆ.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳಂ(Periyanaickenpalayam) ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಡಿ. ಕಾರ್ತಿಕ್ ಸ್ಪರ್ಧೆ ಮಾಡಿದ್ದರು. ಇವರ ಮನೆಯಲ್ಲಿ ಒಟ್ಟು ಐವರು ಸದಸ್ಯರಿದ್ದರು. ಆದರೆ, ಪಡೆದುಕೊಂಡಿರುವುದು ಮಾತ್ರ ಒಂದೇ ಒಂದು ವೋಟ್. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, #Single_Vote_BJP ಎಂಬ ಹ್ಯಾಷ್ ಟ್ಯಾಗ್ನೊಂದಿಗೆ ಟ್ರೆಂಡಿಂಗ್ ಆಗಿದೆ.
ಇದನ್ನೂ ಓದಿರಿ: ಪ್ರಧಾನಿ ಮೋದಿ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಖರೆ ನೇಮಕ
ಇದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕಾರ್ಯಕರ್ತೆ ಮೀನಾ ಕಂದಸಾಮಿ ಟ್ವೀಟ್ ಮಾಡಿ, ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ ಒಂದೇ ಒಂದು ಮತ ಪಡೆದುಕೊಂಡಿದ್ದಾರೆ. ಇವರ ಮನೆಯ ನಾಲ್ವರು ಬೇರೆ ಪಕ್ಷಕ್ಕೆ ಮತ ಹಾಕಿರುವ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.
-
BJP candidate gets only one vote in local body elections. Proud of the four other voters in his household who decided to vote for others pic.twitter.com/tU39ZHGKjg
— Dr Meena Kandasamy ¦¦ இளவேனில் (@meenakandasamy) October 12, 2021 " class="align-text-top noRightClick twitterSection" data="
">BJP candidate gets only one vote in local body elections. Proud of the four other voters in his household who decided to vote for others pic.twitter.com/tU39ZHGKjg
— Dr Meena Kandasamy ¦¦ இளவேனில் (@meenakandasamy) October 12, 2021BJP candidate gets only one vote in local body elections. Proud of the four other voters in his household who decided to vote for others pic.twitter.com/tU39ZHGKjg
— Dr Meena Kandasamy ¦¦ இளவேனில் (@meenakandasamy) October 12, 2021
ತಮಿಳುನಾಡಿನಲ್ಲಿ ಅಕ್ಟೋಬರ್ 6 ಮತ್ತು 9ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದ್ದು, 27,003 ಹುದ್ದೆಗಳಿಗೆ 79,433 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಕಾರ್ತಿಕ್ ಸ್ಪರ್ಧೆ ಮಾಡಿದ್ದ ವಾರ್ಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರ ಪೋಸ್ಟರ್ಗಳೊಂದಿಗೆ ಪ್ರಚಾರ ಮಾಡಿದ್ದರು. ಆದರೆ, ಕೇವಲ ಒಂದು ಮತ ಪಡೆದುಕೊಂಡಿದ್ದಾರೆ.
ಎಲ್ಲ ವಾರ್ಡ್ಗಳ ಮತ ಎಣಿಕೆ ಇಂದು ನಡೆಯುತ್ತಿದ್ದು, ಸಂಜೆ 7 ಗಂಟೆಯವರೆಗೂ ಡಿಎಂಕೆ 311 ಪಂಚಾಯತ್, ಎಡಿಎಂಕೆ 52 ಪಂಚಾಯತ್, ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ 11 ಪಂಚಾಯತ್ಗಳಲ್ಲಿ ಗೆಲುವು ಸಾಧಿಸಿರುವುದಾಗಿ ತಿಳಿದು ಬಂದಿದೆ.