ETV Bharat / bharat

ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಬಸ್​​ ನಿಲ್ದಾಣವನ್ನೇ ಬಂದ್ ಮಾಡಿದ ನಗರಸಭೆ! - Kadapa Municipal Corporation

ಸುಮಾರು 2.30 ಕೋಟಿ ರೂ. ಬಸ್ ನಿಲ್ದಾಣದ ಬಾಡಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಕಡಪ ನಗರಸಭೆಯು ನಿಲ್ದಾಣದೊಳಗೆ ಬಸ್​ಗಳನ್ನು ಬಿಡದೇ ಬಂದ್​ ಮಾಡಿದೆ.

rtc-bus-stand-closed-in-andhra-pradesh-for-non-payment-of-rent
ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಬಸ್​​ ನಿಲ್ದಾಣವನ್ನೇ ಬಂದ್ ಮಾಡಿದ ನಗರಸಭೆ
author img

By

Published : Sep 22, 2022, 3:55 PM IST

ಕಡಪ (ಆಂಧ್ರ ಪ್ರದೇಶ): ಬಸ್​ ನಿಲ್ದಾಣಕ್ಕೆ ಸಂಬಂಧಿಸಿದ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ರಸ್ತೆ ಸಾರಿಗೆ ಬಸ್​​ ನಿಲ್ದಾಣವನ್ನು ಕಡಪ ನಗರಸಭೆ ಮುಚ್ಚಿದ್ದು, ಬೆಳಗ್ಗೆಯಿಂದಲೇ ಬಸ್‌ಗಳು ನಿಲ್ದಾಣದೊಳಗೆ ಪ್ರವೇಶಿಸದಂತೆ ತಡೆಯಲಾಗಿದೆ.

ಕಡಪ ಹಳೆ ಬಸ್ ನಿಲ್ದಾಣವನ್ನು ಪುರಸಭೆಯಿಂದ ನಿರ್ಮಿಸಲಾಗಿದೆ. ಈ ನಿಲ್ದಾಣದಲ್ಲಿ ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಲು ಆರ್‌ಟಿಸಿ ಅಧಿಕಾರಿಗಳು ಪ್ರತಿ ತಿಂಗಳು ನಗರಾಡಳಿತಕ್ಕೆ ಬಾಡಿಗೆ ಪಾವತಿಸಬೇಕು. ಆದರೆ, 2013ರಿಂದ ಇದುವರೆಗೆ ಆರ್‌ಟಿಸಿ ಅಧಿಕಾರಿಗಳು ನಗರಸಭೆಗೆ ಸರಿಯಾಗಿ ಬಾಡಿಗೆ ಪಾವತಿಸಿಲ್ಲ. ಹೀಗಾಗಿ ಸುಮಾರು 2 ಕೋಟಿ 30 ಲಕ್ಷ ರೂ. ಬಾಡಿಗೆ ಬಾಕಿ ಉಳಿದಿದೆ.

ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಬಸ್​​ ನಿಲ್ದಾಣವನ್ನೇ ಬಂದ್ ಮಾಡಿದ ನಗರಸಭೆ

ಈ ಹಿಂದಿನ ಪುರಸಭೆ ಅಧಿಕಾರಿಗಳು ಹಾಗೂ ಆರ್‌ಟಿಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಕಿ ಹಣ ಹೆಚ್ಚುತ್ತಲೇ ಸಾಗಿದೆ. ಇದೀಗ ಹೊಸದಾಗಿ ಬಂದಿರುವ ಆಯುಕ್ತ ಸೂರ್ಯ ಸಾಯಿ ಪ್ರವೀಣ್, ಬಾಡಿಗೆ ಪಾವತಿಸುವಂತೆ ಆರ್​ಟಿಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೂ, ಆರ್​ಟಿಸಿ ಅಧಿಕಾರಿಗಳು ಸ್ಪಂದಿಸದ ಕಾರಣ ಇಂದು ಮುಂಜಾನೆ 4 ಗಂಟೆಯಿಂದಲೇ ಹಳೆ ಬಸ್ ನಿಲ್ದಾಣದೊಳಗೆ ಬಸ್ ಬಿಡದೇ ಬಂದ್ ಮಾಡಲು ಆದೇಶಿಸಿದ್ದಾರೆ.

ಹೀಗಾಗಿ ಎಲ್ಲ ಬಸ್​ಗಳು ನಿಲ್ದಾಣದ ಹೊರಗಡೆಯಿಂದಲೇ ಸಂಚರಿಸುವಂತೆ ಆಗಿದೆ. ಇತ್ತ, ಬಸ್‌ಗಳಿಗಾಗಿ ರಸ್ತೆಗಳಲ್ಲಿ ನಿಂತು ಪ್ರಯಾಣಿಕರು ಸಹ ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಈ ರೀತಿ ಬಸ್​ ನಿಲ್ದಾಣ ಬಂದ್​ ಮಾಡುವುದು ಸರಿಯಲ್ಲ. ಅಧಿಕಾರಿಗಳು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಇನ್ನು, ಕಡಪ ಮುಖ್ಯಮಂತ್ರಿ ಹಾಗೂ ಆರ್​ಟಿಸಿ ಮುಖ್ಯಸ್ಥರ ತವರು ಜಿಲ್ಲೆ ಎಂಬುದು ಗಮನಾರ್ಹ.

ಇದನ್ನೂ ಓದಿ: ವಿದ್ಯಾರ್ಥಿಗಳು-ಹೊರಗಿನವರ ಮಧ್ಯೆ ಮಾರಾಮಾರಿ: ಓರ್ವನಿಗೆ ಡಿಕ್ಕಿ ಹೊಡೆದ ಕಾರು-ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.