ರಾಣಿಪೇಟೆ(ತಮಿಳುನಾಡು): ಜಿಲ್ಲೆಯ ಪೆರುಂಗಲತೂರು ಪ್ರದೇಶದ ಖಾಸಗಿ ಬ್ಯಾಂಕ್ ಎಟಿಎಂನಲ್ಲಿ ದುಷ್ಕರ್ಮಿಗಳು ನಾಲ್ಕೂವರೆ ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಸೆಪ್ಟೆಂಬರ್ 16 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಎಟಿಎಂಗೆ ಯಾವುದೇ ಭದ್ರತಾ ಸಿಬ್ಬಂದಿಯನ್ನು ನೇಮಿಸಿಲ್ಲ ಹಾಗೂ ಸಿಸಿಟಿವಿ ಕೂಡಾ ಅಳವಡಿಸಿಲ್ಲ ಎಂದು ತಿಳಿದು ಬಂದಿದೆ. ಖದೀಮರು, ವೆಲ್ಡಿಂಗ್ ಕಟರ್ಗಳನ್ನು ಬಳಸಿ ಮಷಿನ್ ಕತ್ತರಿಸಿ ಹಣ ಹೊತ್ತೊಯ್ದಿದ್ದಾರೆ.
ಸ್ಥಳೀಯರಿಂದ ಮಾಹಿತಿ ಪಡೆದ ರಾಣಿಪೇಟೆ ಪೊಲೀಸ್ ವರಿಷ್ಠಾಧಿಕಾರಿ ದೀಪಾ ಸತ್ಯನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ CD Case: ತನಿಖಾ ವರದಿ ಸಲ್ಲಿಕೆ ಬಗ್ಗೆ ಸೆ.27ರಂದು ಹೈಕೋರ್ಟ್ ನಿರ್ಧಾರ