ETV Bharat / bharat

10 ಸಾವಿರ ಪಿಂಚಣಿ ಹಣ ಪಡೆಯಲು ಬಂದಿದ್ದ ವೃದ್ಧನ ಬ್ಯಾಂಕ್‌ ಖಾತೆಯಲ್ಲಿತ್ತು 75 ಕೋಟಿ ರೂಪಾಯಿ! - ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ ಜಾರ್ಖಂಡ್

ವೃದ್ಧನ ಬ್ಯಾಂಕ್​ ಖಾತೆಗೆ 75 ಕೋಟಿ ರೂಪಾಯಿ ಹಣ ಜಮೆಯಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅನೇಕರು ಹುಬ್ಬೇರಿಸಿದ್ದಾರೆ. ಈ ಘಟನೆ ಜಾರ್ಖಂಡ್​ನ ದಮ್ಕಾದಲ್ಲಿ ನಡೆದಿದ್ದು, ಬ್ಯಾಂಕ್‌ ತನಿಖೆಗೆ ಮುಂದಾಗಿದೆ.

roopsagar village in dumka district of jharkhand

author img

By

Published : Jan 12, 2022, 4:49 PM IST

ದುಮ್ಕಾ(ಜಾರ್ಖಂಡ್​​​): ತನ್ನ ಬ್ಯಾಂಕ್​ ಖಾತೆಯಿಂದ 10 ಸಾವಿರ ರೂ. ಹಣ ಡ್ರಾ ಮಾಡಿಕೊಳ್ಳಲು ತೆರಳಿದ್ದ ವೃದ್ಧನೋರ್ವ ದಿಢೀರ್​ ಶಾಕ್​ ಆಗಿದ್ದಾನೆ. ಏಕೆಂದರೆ, ಆತನ ಅಕೌಂಟ್‌ಗೆ 75 ಕೋಟಿ ರೂಪಾಯಿ ಜಮೆಯಾಗಿತ್ತು!.

ಜಾರ್ಖಂಡ್​ನ ದುಮ್ಕಾದಲ್ಲಿ ಈ ಘಟನೆ ನಡೆದಿದೆ. 60 ವರ್ಷದ ಫುಲೋ ರೈ ಎಂಬವರು ಹತ್ತು ಸಾವಿರ ರೂಪಾಯಿ ಪಡೆದುಕೊಳ್ಳಲು ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾದ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಹಣ ಪಡೆದುಕೊಂಡ ಬಳಿಕ ತಮ್ಮ ಅಕೌಂಟ್​​ನಲ್ಲಿ ಉಳಿದ ಹಣದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಅಕೌಂಟ್​​ನಲ್ಲಿ 75,28,68,870 ರೂ ಇರುವುದು ಗೊತ್ತಾಗಿದೆ.

ಇದನ್ನೂ ಓದಿ: ಯುಪಿಯಲ್ಲಿ ಬಿಜೆಪಿಗೆ ಮತ್ತೊಂದು ಶಾಕ್: ಸಚಿವ ದಾರಾ ಸಿಂಗ್​ ಚೌಹಾಣ್​ ರಾಜೀನಾಮೆ

ಫುಲೋ ರೈ ಅವರು ಸೆಂಟ್ರಲ್​ ಬ್ಯಾಂಕ್​ ಆಫ್ ಇಂಡಿಯಾ ರೈಕಿನರಿ ಶಾಲೆಯಲ್ಲಿ ಬ್ಯಾಂಕ್​ ಖಾತೆ ಹೊಂದಿದ್ದಾರೆ. ಇವರು ದುಮ್ಕಾದ ಬೆಲ್ದಾರ್​ ಗ್ರಾಮದಲ್ಲಿನ ಸಿಎಸ್​ಪಿ ಕೇಂದ್ರಕ್ಕೆ ತಮ್ಮ ಪಿಂಚಣಿ ಹಣ ಬಂದಿರುವ ಬಗ್ಗೆ ವಿಚಾರಿಸಿ, ಹಣ ಡ್ರಾ ಮಾಡಲು ತೆರಳಿದ್ದರು. ಈ ವೇಳೆ ಇಷ್ಟೊಂದು ಹಣ ಅವರ ಅಕೌಂಟ್​ನಲ್ಲಿರುವುದು ತಿಳಿದುಬಂದಿದೆ.

ಈ ಕುರಿತಂದೆ ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾದ ಮ್ಯಾನೇಜರ್​ ಪ್ರವೀರ್​ ಚಂದ್ರ ಘೋಷ್​ ಮಾತನಾಡಿದ್ದು, 'ಕಳೆದ ಕೆಲ ವರ್ಷಗಳಿಂದ ಯಾವುದೇ ರೀತಿಯ ವಹಿವಾಟು ನಡೆಯದ ಕಾರಣ ಫುಲೋ ರೈ ಅವರ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದೆ. ಬ್ಯಾಂಕ್ ಖಾತೆಗೆ ಇಷ್ಟೊಂದು ಹಣ ಹೇಗೆ ಜಮಾವಣೆಗೊಂಡಿದೆ ಎಂಬುದರ ಕುರಿತು ತನಿಖೆ ನಡೆಸಲಾಗುವುದು' ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.