ETV Bharat / bharat

ನಟಿ ಜಾಕ್ವೆಲಿನ್ ಫರ್ನಾಂಡಿಸ್ 7 ಕೋಟಿ ರೂ. ಮೌಲ್ಯದ ಆಸ್ತಿ ಇಡಿ ವಶ - ನಟಿ ಜಾಕ್ವೆಲಿನ್​ ಪರ್ನಾಂಡಿಸ್​

ಸುಕೇಶ್ ಚಂದ್ರಶೇಖರ್ ನಡೆಸಿದ್ದಾನೆ ಎನ್ನಲಾದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರಿಂದ ಜಾರಿ ನಿರ್ದೇಶನಾಲಯ ಆಸ್ತಿ ಜಪ್ತಿ ಮಾಡಿದೆ.

Actress Jacqueline Fernandez
ನಟಿ ಜಾಕ್ವೆಲಿನ್ ಫರ್ನಾಂಡಿಸ್
author img

By

Published : Apr 30, 2022, 2:20 PM IST

Updated : Apr 30, 2022, 3:17 PM IST

ನವದೆಹಲಿ: ಸುಕೇಶ್ ಚಂದ್ರಶೇಖರ್ ವಿರುದ್ಧದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಜಾಕ್ವೆಲಿನ್ ಫರ್ನಾಂಡಿಸ್ ಅವರ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ವಂಚಕ ಸುಕೇಶ್ ಚಂದ್ರಶೇಖರ್ ನಡೆಸಿದ್ದಾನೆ ಎನ್ನಲಾದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರಿಂದ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಆಸ್ತಿ ಜಪ್ತಿ ಮಾಡಿದೆ. ಉದ್ಯಮಿಯೊಬ್ಬರ ಪತ್ನಿಗೆ 200 ಕೋಟಿ ರೂಪಾಯಿ ವಂಚಿಸಿರುವ ಆರೋಪದಡಿ ಸುಕೇಶ್ ಚಂದ್ರಶೇಖರ್​​ನನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಬಂಧಿಸಿದಾಗ ನಟಿ ಜಾಕ್ವೆಲಿನ್​ ಹಾಗೂ ಸುಕೇಶ್​ ಚಂದ್ರಶೇಖರ್​ ನಡುವಿನ ಸಂಬಂಧ ಬಯಲಾಗಿತ್ತು.

ವಿಚಾರಣೆ ವೇಳೆ ಸುಕೇಶ್​ ನಟಿ ಜಾಕ್ವೆಲಿನ್​ಗೆ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿಕೊಂಡಿದ್ದನು. ಇದರ ಬೆನ್ನಲ್ಲೇ ಜಾಕ್ವೆಲಿನ್-ಸುಕೇಶ್​​ರ ಕೆಲ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅದರ ಜೊತೆಗೆ ಆತ ಜಾಕ್ವೆಲಿನ್​ಗಾಗಿ ಮೂರು ಸರಣಿಗಳ 500 ಕೋಟಿ ರೂ. ಬಜೆಟ್​​ನ ಸೂಪರ್ ಹೀರೋ​ ಪ್ರಾಜೆಕ್ಟ್​ ಮಾಡಲು ಮುಂದಾಗಿದ್ದ ಎಂದು ಮೂಲಗಳು ಹೇಳಿದ್ದವು.

ಇದನ್ನೂ ಓದಿ: ತಿಹಾರ್​ ಜೈಲು ಸಿಬ್ಬಂದಿಗೆ ಲಂಚ ನೀಡಿದ ವಂಚಕ ಸುಕೇಶ್.. ಬೇರೊಂದು ಜೈಲಿಗೆ ಶಿಫ್ಟ್

Last Updated : Apr 30, 2022, 3:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.