ETV Bharat / bharat

ಕೇವಲ 5 ಪೈಸೆಗೆ ಬಿರಿಯಾನಿ ಮಾರಾಟ... ಕೊಂಡುಕೊಳ್ಳಲು ಮುಗಿಬಿದ್ದ ಜನ

ಕೇವಲ 5 ಪೈಸೆಗೆ ಬಿರಿಯಾನಿ ಮಾರಾಟ ಮಾಡಲು ಮುಂದಾಗುತ್ತಿದ್ದಂತೆ ನೂಕುನುಗ್ಗಲು ಆಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Rs. 5 paise briyani
Rs. 5 paise briyani
author img

By

Published : Jul 21, 2021, 10:43 PM IST

ಮಧುರೈ(ತಮಿಳುನಾಡು): ಈಗ ದುಬಾರಿ ದುನಿಯಾ... ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೋಟೆಲ್​ಗೆ ಹೋಗಿ ಬಿರಿಯಾನಿ ಊಟ ಮಾಡಬೇಕಾದ್ರೆ ಏನಿಲ್ಲ ಅಂದ್ರೂ ನಮ್ಮ ಬಳಿ 500 ರೂ. ಬೇಕು. ಆದರೆ ಇಲ್ಲೊಂದು ಹೋಟೆಲ್​ನಲ್ಲಿ ಕೇವಲ 5 ಪೈಸೆಗೆ ಚಿಕನ್ ಬಿರಿಯಾನಿ ಮಾರಾಟ ಮಾಡಿರುವ ಘಟನೆ ನಡೆದಿದೆ.

ಬಿರಿಯಾನಿ ಕೊಂಡುಕೊಳ್ಳಲು ಮುಗಿಬಿದ್ದ ಜನರು

ಹೊಸದಾಗಿ ಓಪನ್​ ಆಗಿದ್ದ ಹೋಟೆಲ್​ನಲ್ಲಿ ತಯಾರಿಸುತ್ತಿದ್ದ ಬಿರಿಯಾನಿ ಪ್ರಚಾರ ಮಾಡಲು ಕೇವಲ 5 ಪೈಸೆಗೆ ಮಾರಾಟ ಮಾಡಲು ಮುಂದಾಗುತ್ತಿದ್ದಂತೆ ಕೊಂಡುಕೊಳ್ಳಲು ಗ್ರಾಹಕರು ಮುಗಿಬಿದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಮಧುರೈನಲ್ಲಿ ಹೊಸದಾಗಿ ಹೋಟೆಲ್​ ಓಪನ್​ ಆಗಿದ್ದು, ಅಲ್ಲಿ ಚಿಕನ್ ಬಿರಿಯಾನಿ ಸಿದ್ಧಗೊಳಿಸಿದ್ದಾರೆ. ಪ್ರಚಾರ ಪಡೆದುಕೊಳ್ಳುವ ಉದ್ದೇಶದಿಂದ 5 ಪೈಸೆಗೆ ಮಾರಾಟ ಮಾಡಲು ಮುಂದಾಗುತ್ತಿದ್ದಂತೆ ಜನರು ತಂಡೋಪ-ತಂಡವಾಗಿ ಆಗಮಿಸಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿದೆ.

ಹೋಟೆಲ್​ ಓಪನ್ ಆಗುವುದಕ್ಕೂ ಮುಂಚಿತವಾಗಿ ಮಾಲೀಕರು 5 ಪೈಸೆಗೆ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದರು. ಇಂದು ಅದು ಓಪನ್​ ಆಗುತ್ತಿದ್ದಂತೆ ನೂರಾರು ಜನರು ಅಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ಹೆಚ್ಚಿನ ಗದ್ದಲ ಉಂಟಾಗಿರುವ ಕಾರಣ ಮಾಲೀಕರು ಹೋಟೆಲ್​ ಬಂದ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.