ಹೈದರಾಬಾದ್ : ತೆಲಂಗಾಣದಲ್ಲಿ ರಾತ್ರೋರಾತ್ರಿ ಇಬ್ಬರು ಬ್ಯಾಂಕ್ ಖಾತೆದಾರರು ಮಿಲಿಯನೇರ್ಗಳಾಗಿದ್ದಾರೆ. ಇಬ್ಬರ ಬ್ಯಾಂಕ್ ಖಾತೆಗೆ ಕೋಟಿಗಟ್ಟಲೆ ಹಣ ಜಮೆಯಾಗಿದೆ ಎಂಬ ಸಂದೇಶ ಬಂದಿದೆ. ಮೊದಲಿಗೆ ಅವರು ಇದು ಸುಳ್ಳೆಂದುಕೊಂಡಿದ್ದರು. ನಂತರ ಬ್ಯಾಂಕ್ಗೆ ಹೋಗಿ ಪರಿಶೀಲಿಸಿದಾಗ, ಅವರ ಖಾತೆಗಳಿಗೆ ಕೋಟ್ಯಂತರ ರೂಪಾಯಿ ನಗದು ಜಮೆಯಾಗಿದೆ ಎಂಬುದು ತಿಳಿದಿದೆ.
ವಿಕಾರಾಬಾದ್ ಮೂಲದ ವೆಂಕಟ್ ರೆಡ್ಡಿ ಎಂಬುವರು ಮೊಬೈಲ್ ಅಂಗಡಿ ಮಾಲೀಕರಾಗಿದ್ದಾರೆ. ಅವರು HDFCಯಲ್ಲಿ ಖಾತೆಯನ್ನು ಹೊಂದಿದ್ದು, ಭಾನುವಾರ ಬೆಳಗ್ಗೆ ಅವರ ಖಾತೆಗೆ 18 ಕೋಟಿ 52 ಲಕ್ಷ ರೂ. ಜಮೆಯಾಗಿದೆ. ಬ್ಯಾಂಕ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ. ಆಗ ಅವರು ಇದು ನಿಮ್ಮ ಹಣವಲ್ಲ ಎಂದು ಹೇಳಿದ್ದಾರಂತೆ.
ಪೆದ್ದಪಲ್ಲಿ ಜಿಲ್ಲೆಯ ಮಂಥನಿ ಪಟ್ಟಣದಲ್ಲಿ ಮೊಬೈಲ್ ಅಂಗಡಿ ಮಾಲೀಕರಾದ ಇಲ್ಲೇಂದುಲ ಸಾಯಿ ಎಂಬುವರ ಖಾತೆಯಲ್ಲಿ ಕೇವಲ 10 ಸಾವಿರ ರೂ. ಇತ್ತು. ಆದರೆ ಅವರ ಖಾತೆಗೆ 5 ಕೋಟಿ 68 ಲಕ್ಷ ರೂ. ಭಾನುವಾರ ಸಂಜೆ 7 ಗಂಟೆಗೆ ವರ್ಗಾವಣೆಯಾಗಿದೆ.
ಈ ಹಣ ಸುಮಾರು 5 ಗಂಟೆಗಳ ಕಾಲ ಅವರ ಖಾತೆಯಲ್ಲಿತ್ತು. ನಂತರ ಎಲ್ಲ ನಗದು ಕಣ್ಮರೆಯಾಗಿದೆ. ಇಂದು ಬೆಳಗ್ಗೆ ಸಾಯಿ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ತಾಂತ್ರಿಕ ಸಮಸ್ಯೆಯಿಂದ ಹೀಗೆ ಆಗಿರಬಹುದು ಎಂದು ಅವರು ಹೇಳಿದ್ದಾರಂತೆ.
ಇದನ್ನೂ ಓದಿ: ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ಪ್ರಶಾಂತ್.. ರಾಜ್ಯದ ಒಂದೇ ಸಂಸ್ಥೆಯ 20 ಅಭ್ಯರ್ಥಿಗಳು ಆಯ್ಕೆ