ನವದೆಹಲಿ : ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಸೇನೆಯು 14,000 ಕೋಟಿ ಮೌಲ್ಯದ ಸ್ವದೇಶಿ ಕ್ಷಿಪಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಮುಂದಾಗಿದೆ.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತೀಯ ಸೇನೆಯು ಎರಡು ರೆಜಿಮೆಂಟ್‌ಗಳನ್ನು ಆಕಾಶ್-ಎಸ್ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್ ಮತ್ತು 25 ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ಗಳನ್ನು ಖರೀದಿಸಲಿದೆ. ಈಗಾಗಲೇ ಭಾರತೀಯ ಸೇನೆಯು ರಕ್ಷಣಾ ಸಚಿವಾಲಯಕ್ಕೆ ಈ ಕುರಿತಾದ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ಪ್ರಸ್ತಾವನೆಗೆ ಶೀಘ್ರದಲ್ಲೇ ಅನುಮೋದನೆ ಸಿಗುವ ಸಾಧ್ಯತೆಯಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಸುವ ನಿರೀಕ್ಷೆಯಿದೆ. ಆಕಾಶ್-ಎಸ್ ಏರ್ ಡಿಫೆನ್ಸ್ ಕ್ಷಿಪಣಿ 25-30 ಕಿ.ಮೀ ದೂರದಿಂದ ಶತ್ರುವಿನ ವಿಮಾನ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವೆಂದರೆ, ಈ ಕ್ಷಿಪಣಿಗಳು ಲಡಾಖ್ನಂತಹ ವಿಪರೀತ ಶೀತ ಪ್ರದೇಶಗಳಲ್ಲಿಯೂ ಶತ್ರುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿವೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಕ್ಷಿಪಣಿ ವ್ಯವಸ್ಥೆಯು ಈಗಾಗಲೇ ಪಡೆಗಳೊಂದಿಗೆ ಸೇವೆಯಲ್ಲಿದೆ. ಭಾರತೀಯ ಸೇನೆಯು ದೇಶೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯಕ್ಕೆ ಬೆಂಬಲ ನೀಡಿದೆ. ಆಮದು ನಿಷೇಧ ಪಟ್ಟಿಯಲ್ಲಿ ಫಿರಂಗಿ, ಬಂದೂಕುಗಳಂತಹ ಪ್ರಮುಖ ಶಸ್ತ್ರಾಸ್ತ್ರಗಳನ್ನು ಸೇರಿಸಲಾಗಿದೆ.
ಸೇನೆಯು ದೇಶದ HAL ಧ್ರುವ್ ಹೆಲಿಕಾಪ್ಟರ್‌ಗಳ ಅತಿದೊಡ್ಡ ಆಪರೇಟರ್ ಆಗಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿದ ಚಾಪರ್‌ಗಳಲ್ಲಿ ಸುಧಾರಣೆಗಳನ್ನು ತರಲು ಸಹಾಯ ಮಾಡಿದೆ.
ಇದನ್ನೂ ಓದಿ: ವಿಶಿಷ್ಟ ಸಾಮರ್ಥ್ಯದ 'ಸ್ಮಾರ್ಟ್ ಮಿರರ್' ಕಂಡುಹಿಡಿದ ಎಂಜಿನಿಯರಿಂಗ್ ವಿದ್ಯಾರ್ಥಿ