ಮುಂಬೈ: ಇಲ್ಲಿನ ಕೇಂದ್ರ ರೈಲ್ವೆ ಲೋಕಮಾನ್ಯ ತಿಲಕ್ ಟರ್ಮಿನಲ್ನಲ್ಲಿ ಪ್ರಯಾಣಿಕರೊಬ್ಬರು ಆಯತಪ್ಪಿ ರೈಲಿನಿಂದ ಕೆಳಬಿದ್ದಿದ್ದು, ಅವರನ್ನು ಆರ್‌ಪಿಎಫ್ ಜವಾನ್ ಮಿಲಿಂದ್ ಪಾಠಾರೆ ಎಂಬವರು ರಕ್ಷಿಸಿದ್ದಾರೆ.
ರೈಲು ಸಂಖ್ಯೆ 01055 ಎಲ್‌ಟಿಟಿ-ಗೋರಖ್‌ಪುರ ಎಕ್ಸ್‌ಪ್ರೆಸ್ ಇಂದು ಬೆಳಗ್ಗೆ 11 ಗಂಟೆಯ ನಡುವೆ ಸೆಂಟ್ರಲ್ ರೈಲ್ವೆಯ ಎಲ್‌ಟಿಟಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3ರಿಂದ ಹೊರಟಿತ್ತು. ಈ ವೇಳೆ, ತರಾತುರಿಯಲ್ಲಿ ಓಡುವ ರೈಲು ಏರಲು ಮುಂದಾದ ಪ್ರಯಾಣಿಕ ಆಯತಪ್ಪಿ ಕೆಳಬಿದ್ದಿದ್ದಾನೆ. ತಕ್ಷಣವೇ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಜವಾನ್ ಪ್ರಯಾಣಿಕನನ್ನು ಪಕ್ಕಕ್ಕೆ ಎಳೆದು ಕಾಪಾಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನು ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಯಾಣಿಕನನ್ನು ಕಾಪಾಡಿದ ಜವಾನನಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್‌ಪಿಎಫ್ ಜವಾನ್ ಮಿಲಿಂದ್, “ಪ್ರಯಾಣಿಕರನ್ನು ಸುರಕ್ಷಿತವಾಗಿರಿಸುವುದು ನಮ್ಮ ಕೆಲಸ. ಈ ಕೆಲಸದಲ್ಲಿ ನನಗೆ ತೃಪ್ತಿ ಇದೆ. ಆದರೆ ಓಡುತ್ತಿರುವ ರೈಲನ್ನು ಯಾವುದೇ ಪ್ರಯಾಣಿಕ ಏರಬಾರದು ಎಂದು ಮನವಿ ಮಾಡುತ್ತೇನೆ” ಎಂದರು.