ETV Bharat / bharat

Black Box: ವಿಮಾನ - ಹೆಲಿಕಾಪ್ಟರ್​ ದುರಂತಗಳ ಕಾರಣ ತಿಳಿಯಲು 'ಬ್ಲ್ಯಾಕ್​ ಬಾಕ್ಸ್' ಹೇಗೆ ಸಹಕಾರಿ? - voice recorder in planes helicopters crash

ಹೆಲಿಕಾಪ್ಟರ್ ಅಥವಾ ವಿಮಾನ ಪತನಕ್ಕೆ ಕಾರಣ ತಿಳಿಯಬೇಕು ಎಂದರೆ ಮೊದಲು ಅದರ ಬ್ಲ್ಯಾಕ್​ ಬಾಕ್ಸ್ ಹುಡುಕುವುದು ಅತ್ಯವಶ್ಯವಾಗಿದೆ. ಇದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ..

Black Box
ಬ್ಲ್ಯಾಕ್​ ಬಾಕ್ಸ್
author img

By

Published : Dec 9, 2021, 3:55 PM IST

ಹೈದರಾಬಾದ್: ಹೆಲಿಕಾಪ್ಟರ್ ಆಗಲಿ, ವಿಮಾನವಾಗಲಿ ಪತನವಾದಾಗ ಮೊದಲು ಹುಡುಕುವುದು ಬ್ಲ್ಯಾಕ್​ ಬಾಕ್ಸ್ (ಕಪ್ಪು ಪೆಟ್ಟಿಗೆ) ಯನ್ನು. ಪತನದ ತನಿಖೆಗೆ ಇದನ್ನು ಹುಡುಕುವುದು ಅತ್ಯವಶ್ಯವಾಗಿದೆ. ಏಕೆಂದರೆ ದುರಂತಕ್ಕೂ ಮುನ್ನ ಪೈಲಟ್​ ಹಾಗೂ ಕಂಟ್ರೋಲ್​ ರೂಂ ಸಿಬ್ಬಂದಿ ನಡುವೆ ನಡೆದ ಸಂಭಾಷಣೆಯನ್ನು ಬ್ಲ್ಯಾಕ್​ ಬಾಕ್ಸ್ ಮೂಲಕವೇ ಟ್ರೇಸ್​ ಮಾಡಬಹುದಾಗಿದೆ.

ಕೂನೂರು ಸೇನಾ ಹೆಲಿಕಾಪ್ಟರ್​ ದುರಂತದ ಬಳಿಕ ಪತ್ತೆಯಾದ ಬ್ಲ್ಯಾಕ್​ ಬಾಕ್ಸ್

ಫ್ಲೈಟ್ ಡಾಟಾ ರೆಕಾರ್ಡರ್:

ಪ್ರತಿಯೊಂದು ಹೆಲಿಕಾಪ್ಟರ್ ಮತ್ತು ವಿಮಾನಗಳಲ್ಲಿ ಬ್ಲ್ಯಾಕ್​ ಬಾಕ್ಸ್ ಇರುತ್ತದೆ. ಈ ಕಪ್ಪು ಪೆಟ್ಟಿಗೆಯಲ್ಲಿ 'ಫ್ಲೈಟ್ ಡಾಟಾ ರೆಕಾರ್ಡರ್' ಹಾಗೂ 'ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್' ಎಂಬ ಎರಡು ಸಾಧನಗಳಿರುತ್ತದೆ. ಫ್ಲೈಟ್ ಡಾಟಾ ರೆಕಾರ್ಡರ್ - ಇದು ವಿಮಾನದ ಮಾರ್ಗ, ವೇಗೋತ್ಕರ್ಷ, ಇಂಜಿನ್​ನ ತಾಪಮಾನ, ಗಾಳಿಯ ವೇಗ, ವಿಮಾನವಿದ್ದ ಎತ್ತರ ಸೇರಿದಂತೆ ವಿಮಾನದ ಕುರಿತ ಇತರ ಡೇಟಾಗಳನ್ನು ನೀಡುತ್ತದೆ.

ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಕೆಲಸ ಏನು?

ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್- ಇದು ಕಾಕ್‌ಪಿಟ್‌ (ಪೈಲಟ್​ ಕುಳಿತಿರುವ ಸ್ಥಳ)ನೊಳಗೆ ನಡೆಸಿದ ಎಲ್ಲ ಸಂಭಾಷಣೆಗಳನ್ನೂ ದಾಖಲಿಸುತ್ತದೆ. ಅವಘಡ ನಡೆಯುವ ಸಂದರ್ಭ ಹಾಗೂ ಅದಕ್ಕೂ ಮೊದಲು ಪೈಲಟ್‌ಗಳು ಮಾತನಾಡಿರುವುದು​ ಇದರಲ್ಲಿ ರೆಕಾರ್ಡ್ ಆಗಿರುತ್ತದೆ. ಆಟೋಮೆಟಿಕ್​ ಕಂಪ್ಯೂಟರ್​ ಅನೌನ್ಸ್​ಮೆಂಟ್​ಗಳೂ ಈ ಚಿಪ್​ನಲ್ಲಿ ರೆಕಾರ್ಡ್ ಆಗಿರುತ್ತದೆ. ಹೀಗಾಗಿ ಈ ಕಪ್ಪು ಪೆಟ್ಟಿಗೆಯ ಮೂಲಕ ತಜ್ಞರು ಯಾವುದೇ ವಿಮಾನ ದುರಂತವಾದರೂ ಅದು ಹೇಗಾಯಿತು ಎಂಬುದನ್ನು ಪತ್ತೆ ಹಚ್ಚುತ್ತಾರೆ.

ಇದನ್ನೂ ಓದಿ: IAF Helicoptor Black box: ತಮಿಳುನಾಡಿನಲ್ಲಿ ಪತನಗೊಂಡ ಹೆಲಿಕಾಪ್ಟರ್​ನ ಬ್ಲ್ಯಾಕ್​ ಬಾಕ್ಸ್ ಪತ್ತೆ

ಇದೀಗ ತಮಿಳುನಾಡಿನ ನೀಲಿಗಿರಿಯ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತ ಸಂಬಂಧ ಮಹತ್ವದ ಮಾಹಿತಿ ನೀಡಬಹುದಾದ ರಷ್ಯಾ ನಿರ್ಮಿತ Mi-17V5 ಹೆಲಿಕಾಪ್ಟರ್​ನ ಬ್ಲ್ಯಾಕ್​​ ಬಾಕ್ಸ್ ಪತ್ತೆಯಾಗಿದೆ. ಈ ಬ್ಲ್ಯಾಕ್ ಬಾಕ್ಸ್ ಮತ್ತು ದುರಂತದಲ್ಲಿ ಬದುಕುಳಿದು ಚಿಕಿತ್ಸೆ ಪಡೆಯುತ್ತಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್​ರಿಂದ ಮಾತ್ರವೇ ಅವಘಡಕ್ಕೆ ಕಾರಣ ತಿಳಿದು ಬರಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಸರ್ಕಾರ ಮೂರು ದಳಗಳಿಂದ ತನಿಖೆಗೆ ಆದೇಶಿಸಿದೆ. ಈಗಾಗಲೇ ಬ್ಲ್ಯಾಕ್​ ಬಾಕ್ಸ್​ ಕೂಡಾ ಸಿಕ್ಕಿದೆ. ತನಿಖೆಯ ಬಳಿಕವೇ ಈ ಹೆಲಿಕಾಪ್ಟರ್​ ದುರಂತಕ್ಕೆ ಕಾರಣ ಏನು ಎಂಬುದು ತಿಳಿದು ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.