ನವದೆಹಲಿ: ಕುಸ್ತಿಪಟು ಸಾಗರ್ ಧಂಕರ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸುಶೀಲ್ ಕುಮಾರ್ ಮತ್ತು ಸಹವರ್ತಿ ಅಜಯ್ ಅವರ ಪೊಲೀಸ್ ಕಸ್ಟಡಿ ವಿಸ್ತರಿಸುವ ದೆಹಲಿ ಪೊಲೀಸರ ಬೇಡಿಕೆಯನ್ನು ದೆಹಲಿಯ ರೋಹಿಣಿ ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಾಲಯವು ಸುಶೀಲ್ ಕುಮಾರ್ ಮತ್ತು ಅಜಯ್ ಕುಮಾರ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದೆ. ಈ ನಡುವೆ ದೆಹಲಿ ಪೊಲೀಸರು ಸುಶೀಲ್ ಕುಮಾರ್ ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಒತ್ತಾಯಿಸಿದ್ದರು.
'ತನಿಖೆಗೆ ಸಹಕರಿಸುತ್ತಿಲ್ಲ'
ದೆಹಲಿ ಪೊಲೀಸರ ಪರ ವಾದ ಮಂಡಿಸಿದ ವಕೀಲ ಅತುಲ್ ಶ್ರೀವಾಸ್ತವ, ಘಟನೆಯ ವಿಡಿಯೋದಲ್ಲಿ ಸುಶೀಲ್ ಪಾತ್ರ ಸ್ಪಷ್ಟವಾಗಿ ಗೋಚರಿಸುತ್ತದೆ, ಆದರೆ, ಅವರು ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಅವರನ್ನು ತನಿಖೆಗಾಗಿ ಹರಿದ್ವಾರಕ್ಕೆ ಕರೆದೊಯ್ಯುವಾಗ, ಅಲ್ಲಿಯೂ ಸಹಕರಿಸಲಿಲ್ಲ. ಸಿಸಿಟಿವಿ ಡಿವಿಆರ್ ಇನ್ನೂ ದೊರೆತಿಲ್ಲ ಎಂದು ವಾದಿಸಿದ್ದಾರೆ.
ಇತ್ತ ಸುಶೀಲ್ ಪರ ವಾದ ಮಂಡಿಸಿದ ಪ್ರದೀಪಾ ರಾಣಾ, ಪ್ರಕರಣದ ಆರಂಭದಿಂದಲೂ ಪೊಲೀಸರು ದಾರಿ ತಪ್ಪಿಸುತ್ತಿದ್ದಾರೆ. ಸುಶೀಲ್ ಕುಮಾರ್ ಪ್ರಖ್ಯಾತ ಅಪಾರಾಧಿಯಲ್ಲ, ಅವರು ಕೆಟ್ಟ ಸಂದರ್ಭಕ್ಕೆ ಒಳಗಾಗಿದ್ದಾರೆ. ಇಷ್ಟೇ ಅಲ್ಲ ಅವರು ದೇಶದ ಗೌರವವನ್ನು ಎರಡು ಬಾರಿ ಹೆಚ್ಚಿಸಿದ್ದಾರೆ. ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರ ಹೊರತಾಗಿಯೂ ದೆಹಲಿ ಪೊಲೀಸರು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಿದ್ದಾರೆ ಎಂದು ವಾದಿಸಿದ್ದಾರೆ.
ಓದಿ: ಮುಂಬೈನ ಜನನಿಬಿಡ ಪ್ರದೇಶದಲ್ಲಿ ಮಹಿಳೆಯಿಂದ ಖುಲ್ಲಂ ಖುಲ್ಲ ಡ್ರಗ್ಸ್ ಮಾರಾಟ!